Tech Tips: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಹೇಗೆ ಬಳಸುವುದು?: ಇಲ್ಲಿದೆ ಟ್ರಿಕ್
ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಈ ರೀತಿಯಾಗಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿ ಇರಿಸಬಹುದು. ನಾವು ನಿಮಗೆ ಹೇಳಲಿರುವ ಟ್ರಿಕ್‌ನ ವಿಶೇಷವೆಂದರೆ ನೀವು ಅದರಲ್ಲಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ಸಿಮ್‌ಗಳನ್ನು ಏಕಕಾಲದಲ್ಲಿ ಬಳಸಬಹುದು. ಆದರೆ ನೀವು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ಸಂಖ್ಯೆಗಳಿಂದ ವಾಟ್ಸ್ಆ್ಯಪ್ ಅನ್ನು ಬಳಸಲು ಸಾಧ್ಯವಾಗುತ್ತದೆಯೇ?. ಈ ಹಿಂದೆ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಅಂತಹ ಯಾವುದೇ ಸೌಲಭ್ಯವನ್ನು ಒದಗಿಸಿರಲಿಲ್ಲ. ಆದರೆ, ಇತ್ತೀಚಗೆಷ್ಟೆ ಹೊಸ ಫೀಚರ್ ಮೂಲಕ ಈ ಆಯ್ಕೆಯಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಕಲ್ಪಿಸಲಾಗಿದೆ. ಈ ಟ್ರಿಕ್ ಮೂಲಕ ನೀವು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸ್ಆ್ಯಪ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆ.
ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಈ ರೀತಿಯಾಗಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿ ಇರಿಸಬಹುದು. ನಾವು ನಿಮಗೆ ಹೇಳಲಿರುವ ಟ್ರಿಕ್‌ನ ವಿಶೇಷವೆಂದರೆ ನೀವು ಅದರಲ್ಲಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ನಿಮ್ಮ ವಾಟ್ಸ್ಆ್ಯಪ್ನಲ್ಲಿರುವ ಈ ವಿಶೇಷ ವೈಶಿಷ್ಟ್ಯವನ್ನು ಬಳಸಬೇಕಷ್ಟೆ.
- ಮೊದಲು ನೀವು ಫೋನ್‌ನಲ್ಲಿ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯಿರಿ. ಅದಕ್ಕೂ ಮುನ್ನ ಇತ್ತೀಚಿನ ವರ್ಷನ್ಗೆ ಆ್ಯಪ್ ಅಪ್ಡೇಟ್ ಆಗಿದೆಯೆ ಎಂಬುದನ್ನು ಪರಿಶೀಲಿಸಿ.
- ಬಳಿಕ ಫೋನ್‌ನ ಮೇಲಿನ ಬಲಭಾಗದಲ್ಲಿರುವ 3 ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
- ನಂತರ ಕೆಳಗೆ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
- ಅದರ ನಂತರ ಅಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ಕೆಳಗಿನಿಂದ ಎರಡನೇ ಆಯ್ಕೆಯಲ್ಲಿರುವ ಆ್ಯಡ್ ಅಕೌಂಟ್ ಎಂಬ ಹೊಸ ಆಯ್ಕೆಯನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಈಗಿನ ವಾಟ್ಸ್ಆ್ಯಪ್ ಖಾತೆ ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲೆ ಕೆಳಗಡೆ ಎರಡನೇ ಸಂಖ್ಯೆಯಲ್ಲಿ + ಚಿಹ್ನೆಯೊಂದಿಗೆ ಖಾತೆಯನ್ನು ಸೇರಿಸಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿ.
- ಈಗ ಫೋನ್ ನಂಬರ್ ನಮೋದಿಸಿ ಮತ್ತು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
- ನಂತರ ಓಟಿಪಿ ಬರುತ್ತದೆ. ಇದನ್ನು ಹಾಖಿದ ನಂತರ ನಿಮ್ಮ ಫೋನ್‌ನಲ್ಲಿ ಇನ್ನೊಂದು ವಾಟ್ಸ್ಆ್ಯಪ್ ಅನ್ನು ಬಳಸಬಹುದು.
- ಈ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಿದ ನಂತರ, ನಿಮಗೆ ಯಾವ ವಾಟ್ಸ್ಆ್ಯಪ್ ಖಾತೆ ಬೇಕು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಎರಡು ಖಾತೆಗಳಲ್ಲಿ ಒಂದನ್ನು ಬಳಸಬಹುದು.
- ಇದು ಒಂದೇ ಫೋನ್‌ನಲ್ಲಿ ಎರಡು ಅಥವಾ ಹೆಚ್ಚಿನ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ.
ಹಾಗೆಯೆ ಮತ್ತೊಂದು ಆಯ್ಕೆ ಕೂಡ ಇದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿನ ಸೆಟ್ಟಿಂಗ್ಸ್ನಲ್ಲಿ ಕೆಲವು ಬದಲಾವಣೆ ಮಾಡಬೇಕು. ನಿಮ್ಮ ಫೋನ್‌ನಲ್ಲಿ ಡ್ಯುಯಲ್ ಅಪ್ಲಿಕೇಶನ್‌ಗಳು ಅಥವಾ ಅಪ್ಲಿಕೇಶನ್ ಕ್ಲೋನ್ ಇರುತ್ತದೆ. ಇದು ವಿವಿಧ ಕಂಪನಿಗಳ ಫೋನ್‌ಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಬರುತ್ತದೆ. ಯಾವುದೇ ಅಪ್ಲಿಕೇಶನ್‌ನ ಕ್ಲೋನ್ ಅಥವಾ ನಕಲು ರಚಿಸುವುದು ಈ ವೈಶಿಷ್ಟ್ಯದ ಕೆಲಸವಾಗಿದೆ. ನೀವು ನಕಲಿ ಅಪ್ಲಿಕೇಶನ್‌ನಲ್ಲಿ ಹೊಸ ಖಾತೆಯನ್ನು ಬಳಸಬಹುದು.
ಇದನ್ನೂ ಓದಿ: ಆಂಡ್ರಾಯ್ಡ್‌ನ ಈ 3 ರಹಸ್ಯ ಫೀಚರ್ಸ್ ಬಗ್ಗೆ ನಿಮಗೆ ಗೊತ್ತೇ?:ನಿಮ್ಮ ಫೋನ್ ಐಫೋನ್‌ನಂತೆ ರನ್ ಆಗುತ್ತೆ
ಇದಕ್ಕಾಗಿ ನೀವು ನಿಮ್ಮ ಫೋನ್‌ನ ಡ್ಯುಯಲ್ ಅಪ್ಲಿಕೇಶನ್ ಅಥವಾ ಆಪ್ ಕ್ಲೋನ್ ವೈಶಿಷ್ಟ್ಯಕ್ಕೆ ಹೋಗಬೇಕು. ಇಲ್ಲಿ ನೀವು ಹಲವಾರು ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೋಡುತ್ತೀರಿ. ಈ ಪಟ್ಟಿಯಿಂದ ವಾಟ್ಸ್ಆ್ಯಪ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಕ್ಲೋನ್ ಮಾಡಿ. ಇದರ ನಂತರ ಅದನ್ನು ಇನ್ಸ್ಟಾಲ್ ಮಾಡಿ. ಎರಡನೇ ವಾಟ್ಸ್ಆ್ಯಪ್ ಅನ್ನು ಸ್ಥಾಪಿಸಿದ ನಂತರ, ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಎರಡನೇ ಸಂಖ್ಯೆಯೊಂದಿಗೆ ಖಾತೆಯನ್ನು ರಚಿಸಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, ನೀವು ಲಾಗಿನ್ ಮಾಡಬೇಕಾಗುತ್ತದೆ. ಈ ರೀತಿಯಾಗಿ, ಫೋನ್‌ನಲ್ಲಿರುವ ಎರಡೂ ಸಂಖ್ಯೆಗಳಿಂದ ವಾಟ್ಸ್ಆ್ಯಪ್ ಖಾತೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ