Tech Tips: ಒಂದೇ ಇಯರ್‌ಬಡ್‌ಗಳಲ್ಲಿ ಎರಡು ಹಾಡುಗಳನ್ನು ಕೇಳುವುದು ಹೇಗೆ?: ಇಲ್ಲಿದೆ ಟ್ರಿಕ್

|

Updated on: Dec 24, 2023 | 6:55 AM

Ear Buds Tricks: ನೀವು ಒಂದೇ ಇಯರ್‌ಬಡ್‌ನಲ್ಲಿ ಎರಡು ವಿಭಿನ್ನ ಹಾಡುಗಳನ್ನು ಕೇಳಲು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್​ನಿಂದ Duo ಸಂಗೀತ ಪ್ರೈಮ್ ಆಡಿಯೋ ಪ್ಲೇಯರ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.

Tech Tips: ಒಂದೇ ಇಯರ್‌ಬಡ್‌ಗಳಲ್ಲಿ ಎರಡು ಹಾಡುಗಳನ್ನು ಕೇಳುವುದು ಹೇಗೆ?: ಇಲ್ಲಿದೆ ಟ್ರಿಕ್
Ear Buds
Follow us on

ನೀವು ಒಂದೇ ಇಯರ್‌ಬಡ್ (Ear Buds) ಹೊಂದಿದ್ದರೆ ಮತ್ತು ನೀವಿಬ್ಬರು ವಿಭಿನ್ನ ಹಾಡುಗಳನ್ನು ಕೇಳಲು ಬಯಸಿದರೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಇಲ್ಲಿ ನಾವು ನಿಮಗೆ ಎಡ ಬಡ್‌ಗಳಲ್ಲಿ ಒಂದು ಹಾಡು ಮತ್ತು ಬಲ ಬಡ್ಸ್‌ನಲ್ಲಿ ಮತ್ತೊಂದು ಹಾಡುಗಳನ್ನು ಕೇಳುವುದು ಹೇಗೆ ಎಂದು ಹೇಳುತ್ತೇವೆ. ಇಯರ್‌ಬಡ್‌ಗಳ ಟ್ರಿಕ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದರಿಂದಾಗಿ ಬಳಕೆದಾರರು ಅವುಗಳನ್ನು ಸರಿಯಾಗಿ ಬಳಸುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಇಯರ್‌ಬಡ್‌ಗಳಲ್ಲಿ ವಿಭಿನ್ನ ಸಾಂಗ್ ಪ್ಲೇ ವೈಶಿಷ್ಟ್ಯಗಳ ಕುರಿತು ನಾವು ನಿಮಗೆ ಹೇಳುತ್ತಿದ್ದೇವೆ.

ನೀವು ಒಂದೇ ಇಯರ್‌ಬಡ್‌ನಲ್ಲಿ ಎರಡು ವಿಭಿನ್ನ ಹಾಡುಗಳನ್ನು ಕೇಳಲು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್​ನಿಂದ Duo ಸಂಗೀತ ಪ್ರೈಮ್ ಆಡಿಯೋ ಪ್ಲೇಯರ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡಿದ ನಂತರ, ನೀವು ಚಿಕ್ಕ ಸೆಟ್ಟಿಂಗ್‌ಗಳನ್ನು ಮಾಡಬೇಕು. ನಂತರ ನೀವು ಒಂದೇ ಇಯರ್‌ಬಡ್‌ನಲ್ಲಿ ಎರಡು ವಿಭಿನ್ನ ಹಾಡುಗಳನ್ನು ಕೇಳಲು ಸಾಧ್ಯವಾಗುತ್ತದೆ.

X, Twitter Down: ಜಾಗತಿಕವಾಗಿ ಎಕ್ಸ್​​ ಡೌನ್, ವರದಿ ಮಾಡಿದ ಸಾವಿರಾರು X ಬಳಕೆದಾರರು

ಇದನ್ನೂ ಓದಿ
ಭಾರತದಲ್ಲಿ ಬಜೆಟ್ ಬೆಲೆಗೆ ಒಪ್ಪೋ A59 5G ಫೋನ್ ರಿಲೀಸ್
100W ವೇಗದ ಚಾರ್ಜರ್, ಅದ್ಭುತ ಕ್ಯಾಮೆರಾ: ಹಾನರ್​ನಿಂದ ಬಂತು ಹೊಸ ​ಫೋನ್
ಭಾರತದಲ್ಲಿ ಪೋಕೋ M6 5G ಬಿಡುಗಡೆ: ಇದು ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್
ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಲಾವಾದಿಂದ ಬಂದಿದೆ ಹೊಸ ಲಾವಾ ಸ್ಟೋರ್ಮ್

ಮೊದಲನೆಯದಾಗಿ ನೀವು ನಿಮ್ಮ ಡ್ಯುವೋ ಮ್ಯೂಸಿಕ್ ಪ್ರೈಮ್ ಆಡಿಯೋ ಪ್ಲೇಯರ್ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಸೆಟ್ಟಿಂಗ್ಸ್ ತೆರೆಯಿರಿ. ಈಗ ನೀವು ಎಡ ಬಡ್‌ನಲ್ಲಿ ಪ್ರತ್ಯೇಕ ಟ್ರ್ಯಾಕ್ ಮತ್ತು ಬಲ ಬಡ್‌ನಲ್ಲಿ ಮತ್ತೊಂದು ಸಾಂಗ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಒಂದೇ ಇಯರ್‌ಬಡ್ಸ್​ನಲ್ಲಿ ಇಬ್ಬರು ತಮ್ಮ ಆಯ್ಕೆಯ ವಿಭಿನ್ನ ಹಾಡನ್ನು ಕೇಳಲು ಸಾಧ್ಯವಾಗುತ್ತದೆ.

ಪ್ರಯಾಣ ಮಾಡುವ ಸಂದರ್ಭ ಒಂದು ಇಯರ್‌ಬಡ್ಸ್ ನಿಮ್ಮಲ್ಲಿದ್ದರೆ ಮತ್ತು ವಿಭಿನ್ನ ಹಾಡುಗಳನ್ನು ಕೇಳಲು ಬಯಸುವ ಜನರಿಗೆ ಈ ಟ್ರಿಕ್ ಪ್ರಯೋಜನಕಾರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಡ್ಯುಯೊ ಮ್ಯೂಸಿಕ್ ಪ್ರೈಮ್ ಆಡಿಯೋ ಪ್ಲೇಯರ್ ಅಪ್ಲಿಕೇಶನ್ ಮೂಲಕ ಒಂದೇ ಇಯರ್‌ಬಡ್‌ನಲ್ಲಿ ಎರಡು ವಿಭಿನ್ನ ಹಾಡುಗಳನ್ನು ಕೇಳಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ