Tech Tips: ಚೀಟಿಯಲ್ಲಿ ಡಾಕ್ಟರ್ ಬರೆದಿರುವ ಅಕ್ಷರ ಅರ್ಥವಾಗುತ್ತಿಲ್ಲವೇ?: ಸುಲಭವಾಗಿ ಹೀಗೆ ತಿಳಿಯಿರಿ

WhatsApp AI Bot: ನಿಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಅರ್ಥವಾಗದಿದ್ದರೆ ಮತ್ತು ಔಷಧಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಗೊಂದಲವಿದ್ದರೆ, ಈಗ ವಾಟ್ಸ್​ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ಔಷಧಿಗಳು, ರೋಗಗಳ ಚಿಕಿತ್ಸೆ ಮತ್ತು ನಿಮ್ಮ ಆಹಾರ ಕ್ರಮದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಕುರಿತು ವಾಟ್ಸ್​ಆ್ಯಪ್ ನಿಮಗೆ ತಿಳಿಸುತ್ತದೆ.

Tech Tips: ಚೀಟಿಯಲ್ಲಿ ಡಾಕ್ಟರ್ ಬರೆದಿರುವ ಅಕ್ಷರ ಅರ್ಥವಾಗುತ್ತಿಲ್ಲವೇ?: ಸುಲಭವಾಗಿ ಹೀಗೆ ತಿಳಿಯಿರಿ
Doctors Writing Tricks
Follow us
Vinay Bhat
|

Updated on:Mar 30, 2024 | 11:14 AM

ನಾವು ಅನಾರೋಗ್ಯದಿಂದ ವೈದ್ಯರ (Doctor) ಬಳಿ ಹೋದರೆ ಅವರು ನಮಗೆ ಅಗತ್ಯವಿರುವ ಔಷಧಿಗಳನ್ನು ನೀಡುತ್ತಾರೆ. ಈರೀತಿ ಕೊಡುವಾಗ ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂದುಕೂಡ ವಿವರಿಸುತ್ತಾರೆ. ಆದರೆ, ಮನೆಗೆ ತಲುಪುವ ಹೊತ್ತಿಗೆ ಅನೇಕರು ಅದನ್ನು ಮರೆತುಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರ ಸಲಹೆಯಿಲ್ಲದೆ ನೀವು ಏನನ್ನೂ ತಿನ್ನಲು ಅಥವಾ ಔಷಧಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ವೈದ್ಯರ ಪ್ರಿಸ್ಕ್ರಿಪ್ಷನ್ ಓದಿದರೂ ಅದರ ಬರಹ ಅರ್ಥವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೀಲಿಯುವುದಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ. ವಾಟ್ಸ್​ಆ್ಯಪ್ ಮೂಲಕ ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ನೀವು ವಾಟ್ಸ್​ಆ್ಯಪ್​ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ತಿಳಿದುಕೊಳ್ಳಲು ಬಯಸಿದರೆ ಅಥವಾ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಕುರಿತು ಸಲಹೆಯನ್ನು ಪಡೆಯಲು ಬಯಸಿದರೆ, ಈ ಪ್ರಕ್ರಿಯೆಯನ್ನು ಅನುಸರಿಸಿ.

ಮಾರುಕಟ್ಟೆಗೆ ಅಪ್ಪಳಿಸಿತು ಹೊಸ ದುಬಾರಿ ಫೋನ್: ವಿವೋ X ಫೋಲ್ಡ್ 3, X ಫೋಲ್ಡ್ 3 ಪ್ರೊ ಬಿಡುಗಡೆ

ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸಂಖ್ಯೆಯನ್ನು 8738030604 ಅನ್ನು ಸೇವ್ ಮಾಡಬೇಕು. ಬಳಿಕ ಈ ನಂಬರ್ ನಿಮ್ಮ ವಾಟ್ಸ್​ಆ್ಯಪ್​ ಸಂಪರ್ಕಗಳಲ್ಲಿ ತೋರಿಸಲು ಪ್ರಾರಂಭಿಸುತ್ತದೆ. ಈಗ ವೈದ್ಯರು ನಿಮಗೆ ನೀಡಿದ ಚೀಟಿಯ ಫೋಟೋ ಕ್ಲಿಕ್ ಮಾಡಿ ಆ ಸಂಖ್ಯೆಗೆ ವಾಟ್ಸ್​ಆ್ಯಪ್​ ಮಾಡಬೇಕು.

ಇದರ ನಂತರ, AI ಚಾಟ್‌ಬಾಟ್ ಆ ಸ್ಲಿಪ್ ಅನ್ನು ಓದುತ್ತದೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಸರಳ ಭಾಷೆಯಲ್ಲಿ ನಿಮಗೆ ವಿವರಿಸಿ ಕಳುಹಿಸುತ್ತದೆ. ಅಷ್ಟೇ ಅಲ್ಲ, ಈ ಚಾಟ್‌ಬಾಟ್‌ನಲ್ಲಿ ನೀವು ಇತರ ಮಾಹಿತಿಯನ್ನು ಸಹ ಸುಲಭವಾಗಿ ಪಡೆಯುತ್ತೀರಿ. ನೀವು ಆಹಾರಕ್ರಮವನ್ನು ಅನುಸರಿಸಿದರೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಈ ಚಾಟ್‌ಬಾಟ್ ನಿಮಗೆ ಸಹಾಯ ಮಾಡುತ್ತದೆ.

ನೀವು ಕೇವಲ ಒಂದು ಪ್ಲೇಟ್ ಅಥವಾ ಬೌಲ್ ತುಂಬಿರುವ ಆಹಾರದ ಫೋಟೋವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಈ ಚಾಟ್‌ನಲ್ಲಿ ಕಳುಹಿಸಬೇಕು. ನೀವು ಇದನ್ನು ತಿನ್ನಬೇಕೆ ಅಥವಾ ಬೇಡವೇ ಎಂದು AI ವೈದ್ಯರು ನಿಮಗೆ ತಿಳಿಸುತ್ತಾರೆ.

ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಪೋಕೋ C61 ಸ್ಮಾರ್ಟ್​ಫೋನ್ ಮಾರಾಟ ಆರಂಭ

ಈ ವೈಶಿಷ್ಟ್ಯದ ಪ್ರಮುಖ ವಿಷಯವೆಂದರೆ, ವಿದ್ಯಾವಂತರು ಮಾತ್ರವಲ್ಲದೆ ಅನಕ್ಷರಸ್ಥರು (ಶಾಲೆಗೆ ಹೋಗದ) ಸಹ ಇದನ್ನು ಬಳಸಲು ಸಾಧ್ಯವಾಗುತ್ತದೆ. ಓದಲು ಮತ್ತು ಬರೆಯಲು ತಿಳಿಯದವರಿಗೆ ಇದು ಉಪಯುಕ್ತವಾಗಿ. ಈ ವೈಶಿಷ್ಟ್ಯದಲ್ಲಿ ನೀವು ವಾಯ್ಸ್ ನೋಟ್ ಆಯ್ಕೆಯನ್ನು ಸಹ ಪಡೆಯುತ್ತೀರಿ. ಈ ಆಯ್ಕೆಯ ಮೂಲಕ ರೆಕಾರ್ಡ್ ಮಾಡಿ ಫೋಟೋ ಮತ್ತು ಆಡಿಯೋವನ್ನು ಸಹ ಕಳುಹಿಸಬಹುದು. ಎಐ ವಾಯ್ಸ್ ನೋಟ್ ಮೂಲಕವೇ ಉತ್ತರವನ್ನು ನೀಡುತ್ತದೆ.

ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆಯ ಮೂಲಕ ನೀವು ತಪ್ಪಾದ ಔಷಧಿಯನ್ನು ತೆಗೆದುಕೊಳ್ಳುವ ಅಪಾಯದಿಂದ ಪಾರಾಗಬಹುದು. ಇದಷ್ಟೇ ಅಲ್ಲ, ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ವಾಟ್ಸ್​ಆ್ಯಪ್ ನಿಮಗೆ ಉಚಿತ ಸಲಹೆಯನ್ನು ನೀಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Sat, 30 March 24

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ