TrueCaller App: ಟ್ರೂಕಾಲರ್​ ಅಪ್ಲಿಕೇಶನ್​ನಿಂದ ಕರೆ ಮಾಡಿರುವವರ ಸ್ಥಳ ಟ್ರ್ಯಾಕ್​ ಮಾಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: ಆಯೇಷಾ ಬಾನು

Updated on: Apr 22, 2021 | 7:00 AM

ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​. ಆದರೆ, ಕರೆ ಮಾಡಿರುವ ಮೊಬೈಲ್​ ಸಂಖ್ಯೆಯ ಅಧಾರದ ಮೇಲೆ ಅಪರಿಚಿತರ ಸ್ಥಳದ ಮಾಹಿತಿ ಸಿಗುವುದಿಲ್ಲ.

TrueCaller App: ಟ್ರೂಕಾಲರ್​ ಅಪ್ಲಿಕೇಶನ್​ನಿಂದ ಕರೆ ಮಾಡಿರುವವರ ಸ್ಥಳ ಟ್ರ್ಯಾಕ್​ ಮಾಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಟ್ರೂಕಾಲರ್​ ಅಪ್ಲಿಕೇಶನ್​​
Follow us on

ಬೇರೆ ಅಥವಾ ಅಪರಿಚಿತ ಕರೆಯನ್ನು ಗುರುತಿಸಲು ಟ್ರೂಕಾಲರ್​ ಒಂದು ಅತ್ಯುತ್ತಮ ಆ್ಯಪ್​. ಈ ಆ್ಯಪ್​ ದೂರವಾಣಿ ಕರೆಯ ರೆಕಾರ್ಡ್​, ಕಾಲ್​-ಬ್ಲಾಕಿಂಗ್​ ಮತ್ತು ಫ್ಲಾಶ್​ ಮೆಸೇಜ್​ಅನ್ನು ಒಳಗೊಂಡಿದೆ. ಟ್ರೂಕಾಲರ್​ ಅಪ್ಲಿಕೇಶನ್ ಅಪರಿಚಿತ ನಂಬರ್​ನಿಂದ ಕರೆ ಬರುತ್ತಿದ್ದಂತೆಯೇ ಕರೆ ಮಾಡುತ್ತಿರುವವರ ಮಾಹಿತಿಯನ್ನು ನೀಡುತ್ತದೆ​. ಆದರೆ, ಕರೆ ಮಾಡಿರುವ ಮೊಬೈಲ್​ ಸಂಖ್ಯೆಯ ಅಧಾರದ ಮೇಲೆ ಅಪರಿಚಿತರ ಸ್ಥಳದ ಮಾಹಿತಿ ಸಿಗುವುದಿಲ್ಲ. ಅದರ ಬದಲಾಗಿ ಸಿಮ್​ ರಿಜಿಸ್ಟರ್​ ಮಾಡಿಸಿರುವಂತೆ ವ್ಯಕ್ತಿಯ ಪರಿಚಯವನ್ನು ಇನ್ನಿತರರಿಗೆ ಮಾಡಿಕೊಡುತ್ತದೆ.

ಟ್ರೂ ಕಾಲರ್​ನಲ್ಲಿ ಹೈಡ್​ ಆಗಿರುವ ಸಂಖ್ಯೆಯನ್ನು ಹೇಗೆ ನೋಡುವುದು?
ಈ ಕೆಳಗೆ ತಿಳಿಸಲಾದಂತಹ ಸೂಚನೆಗಳನ್ನು ಪರಿಸೀಲಿಸಿ
ನಿಮ್ಮ ಮೊಬೈಲ್​ ಸೆಟ್ಟಿಂಗ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಅಲ್ಲಿ ಕಾಣ ಸಿಗುವ ಫೋನ್​ ಎಂಬ ಆಯ್ಕೆಯನ್ನು ಸೆಲೆಕ್ಟ್​ ಮಾಡಿ.
ಅಲ್ಲಿ, ನಿಮಗೆ ಕಾಲ್​ ಬ್ಲಾಕಿಂಗ್​ ಮತ್ತು ಐಡೆಂಟಿಫಿಕೇಶನ್​ ಜೊತೆಗೆ ಶೋ ಮೈ ಕಾಲರ್​ ಐಡಿ ಆಯ್ಕೆ ಕಾಣಸಿಗುತ್ತದೆ. ಅದನ್ನು ಟಾಗಲ್​ ಮಾಡಿ

ಟ್ರೂಕಾಲರ್​ನಿಂದ ನಿಮ್ಮ ಮೊಬೈಲ್​ ನಂಬರ್​ಅನ್ನು ಹೇಗೆ ತೆಗೆದುಹಾಕುವುದು?
ಟ್ರೂಕಾಲರ್​ ಆ್ಯಪ್​ ಪೇಜ್​ಅನ್ನು ತೆರೆಯಿರಿ
ನಿಮ್ಮ ದೇಶದ ಕೋಡ್​ನೊಂದಿಗೆ ನಿಮ್ಮ ಮೊಬೈಲ್​ ನಂಬರ್​ಅನ್ನು ನಮೂದಿಸಿ
ಟ್ರೂಕಾಲರ್​ನಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ತೆಗೆದುಹಾಕಲು ಕಾರಣವನ್ನು ಬರೆಯಿರಿ
ಕೊನೆಯಲ್ಲಿ ಅನ್​ಲಿಸ್ಟ್​ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ

ನಿಮ್ಮ ಟ್ರೂಕಾಲರ್​ ಪ್ರೊಫೈಲ್​ಅನ್ನು ಯಾರು ನೋಡಬಹುದು?
ಟ್ರೂಕಾಲರ್​ ಅಕೌಂಟ್​ ವೇರಿಫೈ ಆದ ತಕ್ಷಣ ಟ್ರೂಕಾಲರ್​ ಹೊಂದಿರದ ಇತರರಿಗೆ ನಿಮ್ಮ ಮಾಹಿತಿ ಸಿಗುವುದಿಲ್ಲ. ಯಾರಾದರೂ ನಿಮ್ಮ ಹೆಸರನ್ನು ಹುಡುಕಲು ಪ್ರಯತ್ನಿಸಿದರೆ ಅಥವಾ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಟ್ರೂಕಾಲರ್​ ಹೆಸರನ್ನು ಹೇಗೆ ತಿಳಿಯುತ್ತದೆ?
ಟ್ರೂಕಾಲರ್​ ಪ್ರಪಂಚದಾದ್ಯಂತ ಫೋನ್​ ಡೈರೆಕ್ಟರಿ ಪೂರೈಕೆದಾರರು ಮತ್ತು ಸಾಮಾಜಿಕ ನೆಟ್​ವರ್ಕ್​ಗಳೊಂದಿಗಿನ ಪಾಲುದಾರಿಕೆಗಳ ಮೂಲಕ ಹೆಸರುಗಳನ್ನು ಸಂಗ್ರಹಿಸುತ್ತದೆ. ಇದರಿಂದ ನಿಖರವಾದ ಹೆಸರನ್ನು ಪಡೆಯುತ್ತದೆ.

ಟ್ರೂಕಾಲರ್​ನಲ್ಲಿ ನಿಮ್ಮ ಪ್ರೊಫೈಲ್​ಅನ್ನು ಯಾರಾದರೂ ನೋಡಿದ್ದನ್ನು ಹೇಗೆ ಕಂಡುಹಿಡಿಯುವುದು?
ಟ್ರೂಕಾಲರ್​ ಅಪ್ಲಿಕೆಶನ್​ನಲ್ಲಿ ನಿಮ್ಮ ಪ್ರೊಫೈಲ್​ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ಆ್ಯಪ್​ನ ನೋಟಿಫಿಕೇಶನ್​ ಅಥವಾ ‘ಹು ವ್ಯೂವ್ಡ್​ ಮೈ ಪ್ರೊಫೈಲ್​’ ಆಯ್ಕೆಯನ್ನು ಕ್ಲಿಕ್​ ಮಾಡಬೇಕು. ಈ ಮೂಲಕ ನಿಮ್ಮ ಪ್ರೊಫೈಲ್​ ವೀಕ್ಷಣೆ ಮಾಡಿದವರನ್ನು ಗುರುತಿಸಬಹುದಾಗಿದೆ.

ಟ್ರೂಕಾಲರ್​ನಲ್ಲಿ ಬ್ಲೂ ಟಿಕ್​ ಎಂದರೇನು?
ಬ್ಲೂ ಟಿಕ್​ ಟ್ರೂಕಾಲರ್​ ಬಳಕೆದಾರರ ಸೂಚನೆಯಾಗಿದೆ. ಟ್ರೂಕಾಲರ್​ ಅಪ್ಲಿಕೇಶನ್​ ಪ್ರೊಫೈಲ್​ ಹೊಂದಿರುವ ಬಳಕೆದಾರರ ಹೆಸರಿನ ಪಕ್ಕದಲ್ಲಿ ಬ್ಲ್ಯೂಟಿಕ್​ ತೋರಿಸುತ್ತದೆ.

ಟ್ರೂಕಾಲರ್​ ನಿಮ್ಮ ಸಂದೇಶವನ್ನು ಓದಬಹುದೇ?
ನೀವು ಕಳುಹಿಸುವ ಅಥವಾ ಬರುವ ಸಂದೇಶಗಳನ್ನು ಟ್ರೂಕಾಲರ್ ಎಂದಿಗೂ ಓದಲು ಸಾಧ್ಯವಿಲ್ಲ. ಟ್ರೂಕಾಲರ್​ ಆ್ಯಪ್, ನಿಮ್ಮ ಮೆಸೇಜನ್ನು ಎನಲೈಸ್​ ಮಾಡುತ್ತದೆ. ಮತ್ತು ಸಂದೇಶ ಕಳುಹಿಸುವವರ ವಿವರವನ್ನು ಗುರುತಿಸುತ್ತದೆ. ಟ್ರೂಕಾಲರ್​ನಲ್ಲಿ ಬರುವ ಸಂದೇಶಗಳು, ಕರೆಗಳನ್ನು ಸುರಕ್ಷಿತವಾಗಿಡುತ್ತದೆ.

ಇದನ್ನೂ ಓದಿ: ವಾಟ್ಸ್​​ಆ್ಯಪ್​ ಪಿಂಕ್​​ ಲಿಂಕ್​ ನಿಮ್ಮ ಮೊಬೈಲ್​ಗೂ ಬರಬಹುದು ಎಚ್ಚರ..; ಹಾಗೊಮ್ಮೆ ಲಿಂಕ್​ ಬಂದರೆ ನೀವೇನು ಮಾಡ್ಬೇಕು?