ಜಿಯೋಬುಕ್​ಗೆ ಸೆಡ್ಡು ಹೊಡೆಯಲು ಜೊತೆಯಾದ ಗೂಗಲ್-ಹೆಚ್​ಪಿ: ಬರುತ್ತಿದೆ ಬಜೆಟ್ ಲ್ಯಾಪ್​ಟಾಪ್

|

Updated on: Oct 02, 2023 | 1:50 PM

Google and HP Chromebook Laptop: ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆಯು ಇಂದಿನಿಂದಲೇ (ಅಕ್ಟೋಬರ್ 2) ಪ್ರಾರಂಭವಾಗಲಿದೆ. ಟೆಕ್ ಜಗತ್ತಿನ ಈ ಇಬ್ಬರು ದಿಗ್ಗಜರು ಹೆಚ್​ಪಿ ಮತ್ತು ಗೂಗಲ್ ಅಗ್ಗದ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ತರಲು ವಿಶೇಷ ಯೋಜನೆಯನ್ನು ಕೂಡ ಮಾಡಿದ್ದು, ಆದಷ್ಟು ಬೇಗ ಇದು ಬಿಡುಗಡೆ ಆಗಲಿದೆಯಂತೆ.

ಜಿಯೋಬುಕ್​ಗೆ ಸೆಡ್ಡು ಹೊಡೆಯಲು ಜೊತೆಯಾದ ಗೂಗಲ್-ಹೆಚ್​ಪಿ: ಬರುತ್ತಿದೆ ಬಜೆಟ್ ಲ್ಯಾಪ್​ಟಾಪ್
HP and Google
Follow us on

ಟೆಕ್ ಜಗತ್ತಿನ ಬಹುದೊಡ್ಡ ಕಂಪನಿಗಳಾದ ಹೆಚ್​ಪಿ ಮತ್ತು ಗೂಗಲ್ (Google) ಗ್ರಾಹಕರಿಗಾಗಿ ಬಜೆಟ್ ಬಲೆಗೆ ಪಾಕೆಟ್ ಸ್ನೇಹಿ Chromebook ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಕೈಜೋಡಿಸಿವೆ. ಈ ಲ್ಯಾಪ್‌ಟಾಪ್‌ಗಳು ವಿಶೇಷವಾಗಿ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ಅಗತ್ಯಗಳನ್ನು ಪೂರೈಸಲು ಆಗುವಂತೆ ರಚಿಸಲಾಗುತ್ತಿದೆ. ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಗಲಿರುವ ಈ ಲ್ಯಾಪ್​ಟಾಪ್ ಇತ್ತೀಚೆಗಷ್ಟೆ ಅನಾವರಣಗೊಂಡ ಜಿಯೋಬುಕ್​ಗೆ ಸವಾಲೊಡ್ಡುವುದು ಖಚಿತ.

ಕ್ರೋಮ್‌ಬುಕ್ ಲ್ಯಾಪ್‌ಟಾಪ್ ಮಾದರಿಗಳ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಇದು 20,000 ರೂ. ಗೆ ಬಿಡುಗಡೆ ಮಾಡಬಹುದು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಮುಂಬರುವ ಈ ಮಾಡೆಲ್‌ಗಳನ್ನು ಚೆನ್ನೈನಲ್ಲಿ ಉತ್ಪಾದಿಸಲಾಗುತ್ತದೆ. ಆಗಸ್ಟ್ 2020 ರಿಂದ HP ಇಲ್ಲಿಂದಲೇ ಡೆಸ್ಕ್‌ಟಾಪ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತಯಾರಿಸುತ್ತಿದೆ. ಆದರೆ, ಕ್ರೋಮ್‌ಬುಕ್ ಭಾರತದಲ್ಲಿ ಉತ್ಪಾದನೆಯಾಗುತ್ತಿರುವುದು ಇದೇ ಮೊದಲು. ಈ ಬಗ್ಗೆ ಗೂಗಲ್‌ ಸಂಸ್ಥೆಯ ಸಿಇಒ ಸುಂದರ್‌ ಪಿಚೈ ಮಾಹಿತಿ ನೀಡಿದ್ದಾರೆ.

ವಿವೋ ತಯಾರಿಸುತ್ತದೆ Y200 ಎಂಬ ಸ್ಮಾರ್ಟ್‌ಫೋನ್: ಇದರ ವಿಶೇಷತೆ ಏನು ನೋಡಿ

ಇದನ್ನೂ ಓದಿ
EMI ನಲ್ಲಿ ಮೊಬೈಲ್ ಖರೀದಿಸುವ ಮುನ್ನ 10 ಬಾರಿ ಯೋಚಿಸಿ: ಇದೊಂದು ಟ್ರ್ಯಾಪ್?
ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಬಿಡುಗಡೆ ದಿನಾಂಕ ಪ್ರಕಟ
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್ ಬೇಕಾ?: ಇಲ್ಲಿದೆ ಟಾಪ್ 5 ಫೋನ್
10 ಲಕ್ಷ ಡಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ: ಏನದು?

ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆಯು ಇಂದಿನಿಂದಲೇ (ಅಕ್ಟೋಬರ್ 2) ಪ್ರಾರಂಭವಾಗಲಿದೆ. ಟೆಕ್ ಜಗತ್ತಿನ ಈ ಇಬ್ಬರು ದಿಗ್ಗಜರು ಅಗ್ಗದ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ತರಲು ವಿಶೇಷ ಯೋಜನೆಯನ್ನು ಕೂಡ ಮಾಡಿದ್ದು, ಆದಷ್ಟು ಬೇಗ ಇದು ಬಿಡುಗಡೆ ಆಗಲಿದೆಯಂತೆ. ಕೊರೋನಾ ಅವಧಿಯ ನಂತರ ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ಬದಲಾವಣೆಯಾಗಿದೆ. ತಂತ್ರಜ್ಞಾನದ ಅಗತ್ಯ ಹೆಚ್ಚಿದೆ. ಅದಕ್ಕಾಗಿಯೇ Chromebook ಅನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅನೇಕ ಜನರಿಗೆ ಪ್ರಯೋಜನವನ್ನು ನೀಡಲಿದೆ.

ಗೂಗಲ್ ಹೆಚ್​ಪಿ ಲ್ಯಾಪ್‌ಟಾಪ್‌ಗಳ ವೈಶಿಷ್ಟ್ಯಗಳು?

ಗೂಗಲ್ ಮತ್ತು ಹೆಚ್​ಪಿ ಕಂಪನಿಯ ಮುಂಬರುವ ಲ್ಯಾಪ್​ಟಾಪ್ ಯಾವ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂಬುದರ ಕುರಿತು ನಿಖರವಾದ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಗೂಗಲ್ ಮತ್ತು ಹೆಚ್​ಪಿ ಎರಡೂ ಕಂಪನಿ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸುತ್ತವೆ ಮತ್ತು ಉಪಯುಕ್ತವಾಗುವಂತಹ ವೈಶಿಷ್ಟ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತವೆ ಎಂಬುದು ಖಚಿತವಾಗಿದೆ.

ಜಿಯೋಬುಕ್​ಗೆ ನೇರ ಸ್ಪರ್ಧೆ

ಗೂಗಲ್ ಮತ್ತು ಹೆಚ್​ಪಿಯ ಈ ಕ್ರೋಮ್​ಬುಕ್​ಗು ಮೊದಲು, ಜಿಯೋಬುಕ್ ಈ ಬೆಲೆ ಶ್ರೇಣಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ 16,499 ರೂ. ನೀವು ರಿಲಯನ್ಸ್ ಡಿಜಿಟಲ್, ಜಿಯೋ ಮಾರ್ಟ್ ಮತ್ತು ಅಮೆಜಾನ್‌ನಿಂದ ಇದನ್ನು ಖರೀದಿಸಬಹುದು. 11.6 ಇಂಚಿನ HD ಡಿಸ್ ಪ್ಲೇ, ಮೀಡಿಯಾ ಟೆಕ್ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ವೇಗ ಮತ್ತು ಬಹುಕಾರ್ಯಕ್ಕಾಗಿ ಬಳಸಲಾಗಿದೆ. ಲ್ಯಾಪ್‌ಟಾಪ್ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 8 ಗಂಟೆಗಳಿಗಿಂತ ಹೆಚ್ಚು ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Mon, 2 October 23