EMI ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ 10 ಬಾರಿ ಯೋಚಿಸಿ: ಇದೊಂದು ಟ್ರ್ಯಾಪ್?

Buying Smartphone on EMI a good idea?: ಸ್ಮಾರ್ಟ್​ಫೋನನ್ನು EMI ಮೂಲಕ ಖರೀದಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. EMI ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವುದರಿಂದ ಅನುಕೂಲಗಳು ಇದೆ ಜೊತೆಗೆ ಅನಾನುಕೂಲಗಳು ಇವೆ. ಅದು ಹೇಗೆ?, ಇದರಿಂದ ಯಾವರೀತಿ ನಷ್ಟ ಆಗುತ್ತದೆ ಎಂಬುದನ್ನು ನೋಡೋಣ.

EMI ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ 10 ಬಾರಿ ಯೋಚಿಸಿ: ಇದೊಂದು ಟ್ರ್ಯಾಪ್?
EMI Smartphones
Follow us
Vinay Bhat
|

Updated on: Oct 02, 2023 | 12:15 PM

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ದುಬಾರಿ ಸ್ಮಾರ್ಟ್‌ಫೋನ್ (Smartphone) ಖರೀದಿಸಲು ಬಯಸಿದರೆ ಹಾಗೂ ಬಜೆಟ್ ಕಡಿಮೆ ಇದ್ದರೆ, ಅವರು ಆರಿಸುವುದು ಇಎಂಐ ಆಯ್ಕೆ. ಒಂದೇ ಬಾರಿಗೆ ಪೂರ್ಣ ಮೊತ್ತವನ್ನು ಪಾವತಿಸುವ ಬದಲು ಮಾಸಿಕ ಕಂತುಗಳ ಮೂಲಕ ಅಂದರೆ ಇಎಂಐ ಮೂಲಕ ಸ್ಮಾರ್ಟ್​ಫೋನ್ ಅನ್ನು ಖರೀದಿಸುತ್ತಾರೆ. ಈಗ ಹೆಚ್ಚಿನ ಇ-ಕಾಮರ್ಸ್ ಸೈಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳು ಫೋನ್‌ಗಳಿಗೆ ಸುಲಭವಾಗಿ ಮಾಸಿಕ EMI ಆಯ್ಕೆಯನ್ನು ಒದಗಿಸುತ್ತಿವೆ. ಹೀಗಾಗಿ ಇದು ಸವಾಲಿನ ಕೆಲಸ ಅಲ್ಲ.

ಒಂದು ಪ್ಲಾಟ್‌ಫಾರ್ಮ್‌ನಿಂದ, 3 ರಿಂದ 36 ತಿಂಗಳವರೆಗೆ EMI ಗಳ ಮೂಲಕ ವಿವಿಧ ಬ್ಯಾಂಕ್‌ಗಳಿಂದ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆಯಬಹುದು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಇತರ ವಿಧಾನಗಳ ಮೂಲಕ ಕೂಡ ಈ ಕೊಡುಗೆಗಳು ಲಭ್ಯವಿರುತ್ತದೆ. ಆದಾಗ್ಯೂ, ಹೆಚ್ಚಿನ ಬ್ಯಾಂಕುಗಳು 12 ರಿಂದ 18 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಇಎಂಐ ಗಳನ್ನು ನೀಡುತ್ತವೆ.

ಮೋಟೋ ಫೋನುಗಳಿಗೆ ಹಿಂದೆಂದೂ ಇರದಷ್ಟು ಡಿಸ್ಕೌಂಟ್: ಸೇಲ್ ಯಾವಾಗ ಆರಂಭ?

ಇದನ್ನೂ ಓದಿ
Image
ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಬಿಡುಗಡೆ ದಿನಾಂಕ ಪ್ರಕಟ
Image
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್ ಬೇಕಾ?: ಇಲ್ಲಿದೆ ಟಾಪ್ 5 ಫೋನ್
Image
10 ಲಕ್ಷ ಡಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ: ಏನದು?
Image
ವಿವೋ ತಯಾರಿಸುತ್ತದೆ Y200 ಎಂಬ ಸ್ಮಾರ್ಟ್‌ಫೋನ್: ಇದರ ವಿಶೇಷತೆ ಏನು ನೋಡಿ

EMI ಎಂದರೇನು?

ಇಎಂಐ ವ್ಯವಸ್ಥೆಯನ್ನು ಈ ರೀತಿ ಅರ್ಥೈಸಿಕೊಳ್ಳಬಹುದು. ಉದಾಹರಣೆಗೆ, ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಅನ್ನು ಖರೀದಿಸುತ್ತಿರಿ ಎಂದು ಇಟ್ಟುಕೊಳ್ಳೋಣ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಅದರ 64GB ಸ್ಟೋರೇಜ್ ರೂಪಾಂತರವನ್ನು ರೂ. 38,999 ಗೆ ಖರೀದಿಸಬಹುದು. 13 ಪ್ರತಿಶತದಷ್ಟು 3 ತಿಂಗಳ EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 13,283 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಹೀಗಾಗಿ, ಈ ಐಫೋನ್‌ಗೆ ನೀವು 39,849 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ 850 ರೂ. ಹೆಚ್ಚುವರಿಯಾಗೊ ನೀಡಬೇಕಾಗುತ್ತದೆ. ಒಂದುವೇಳೆ, 15 ಪ್ರತಿಶತದ 36-ತಿಂಗಳ EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 1352 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆಗ ಈ ಫೋನ್‌ಗಾಗಿ ನೀವು ಒಟ್ಟು 48,672 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ 38,999 ರೂ. ಫೋನ್‌ಗೆ ನೀವು 9,673 ರೂಪಾಯಿಗಳನ್ನು ಹೆಚ್ಚು ಖರ್ಚು ಮಾಡುತ್ತೀರಿ.

EMI ನಲ್ಲಿ ಖರೀದಿಸಬೇಕೇ?:

ಈಗ ನೀವು ಫೋನ್ ಅನ್ನು EMI ನಲ್ಲಿ ಖರೀದಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. EMI ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವುದರಿಂದ ಅನುಕೂಲಗಳು ಇದೆ ಜೊತೆಗೆ ಅನಾನುಕೂಲಗಳು ಇದೆ. ಅನೇಕ ಬಾರಿ, ಬಳಕೆದಾರರು ಖರೀದಿಸುವ ಸಮಯದಲ್ಲಿ ಯಾವ ವೆಚ್ಚದ EMI ಆಯ್ಕೆಯನ್ನು ಪಡೆಯುತ್ತಾರೆ ಎಂಬುದು ಮುಖ್ಯ.

ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬಡ್ಡಿದರದಲ್ಲಿ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ, ಇಂದು ಒಂದು ಸ್ಮಾರ್ಟ್​ಫೋನ್ ಬಿಡುಗಡೆ ಆಯಿತು ಎಂದಾದರೆ ಅದರ ಬೆಲೆ ಮೂರು-ನಾಲ್ಕು ತಿಂಗಳು ಕಳಿದ ಬಳಿಕ ಕುಸಿಯುತ್ತದೆ. ಆದ್ದರಿಂದ ಹೆಚ್ಚಿನ ಬಡ್ಡಿದರದಲ್ಲಿ ಅದನ್ನು ಖರೀದಿಸುವುದು ಉತ್ತಮ ಆಯ್ಕೆಯಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ