ಸೆಟಲೈಟ್ ಕಾಲ್ ಬೆಂಬಲ: ಸದ್ದಿಲ್ಲದೆ ಮಾರುಕಟ್ಟೆಗೆ ಅಪ್ಪಳಿಸಿದ ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್: ಬೆಲೆ?

|

Updated on: Aug 31, 2023 | 11:29 AM

Huawei Mate 60 Pro Launched: ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಈ ಫೋನ್ ಉಪಗ್ರಹ ಕರೆಯ ಬೆಂಬಲದೊಂದಿಗೆ ರಿಲೀಸ್ ಆಗಿದೆ. ಸೆಲ್ಯುಲಾರ್ ನೆಟ್‌ವರ್ಕ್ ಸಂಪರ್ಕವಿಲ್ಲದೆ ಸಹ ಕರೆಗಳನ್ನು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಸೆಟಲೈಟ್ ಕಾಲ್ ಬೆಂಬಲ: ಸದ್ದಿಲ್ಲದೆ ಮಾರುಕಟ್ಟೆಗೆ ಅಪ್ಪಳಿಸಿದ ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್: ಬೆಲೆ?
Huawei Mate 60 Pro
Follow us on

ಪ್ರಸಿದ್ಧ ಹುವೈ ಕಂಪನಿ ಬಹುದಿನಗಳ ಬಳಿಕ ತನ್ನ ಹೊಸ ಸ್ಮಾರ್ಟ್​ಫೋನ್ ಹುವೈ ಮೇಟ್ 60 ಪ್ರೊ (Huawei Mate 60 Pro) ಅನ್ನು ಅನಾವರಣ ಮಾಡಿದೆ. ಸದ್ದಿಲ್ಲದೆ ಈ ಫೋನ್ ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಳೆದ ವರ್ಷ ಬಿಡುಗಡೆ ಆದ ಹುವೈ ಮೇಟ್ 50 ಪ್ರೊ ನ ಉತ್ತರಾಧಿಕಾರಿಯಾಗದೆ. ವಿಶೇಷ ಎಂದರೆ, ಈ ಫೋನ್​ನಲ್ಲಿ ಸೆಟಲೈಟ್ ಕಾಲಿಂಗ್ ಸಪೋರ್ಟ್ ಆಯ್ಕೆ ನೀಡಲಾಗಿದೆ. ಇಷ್ಟೇ ಅಲ್ಲದೆ ಬಲಿಷ್ಠ ಪ್ರೊಸೆಸರ್, ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ ಆಯ್ಕೆ ಕೂಡ ಇದೆ. ಹುವೈ ಮೇಟ್ 60 ಪ್ರೊ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುವೈ ಮೇಟ್ 60 ಪ್ರೊ ಬೆಲೆ, ಲಭ್ಯತೆ:

ಹುವೈ ಮೇಟ್ 60 ಪ್ರೊ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 12GB + 512GB ಸ್ಟೋರೇಜ್ ಸಾಮರ್ಥ್ಯಕ್ಕೆ CNY 6,999, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 79,400 ರೂ. ಎನ್ನಬಹುದು. ಅಂತೆಯೆ ಈ ಫೋನ್ 256GB ಮತ್ತು 1TB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದೆ. ಆದರೆ, ಇದರ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಇದು ಸದರ್ನ್ ವ್ಯಾಕ್ಸಿ ಪರ್ಪಲ್, ವೈಟ್ ಸ್ಯಾಂಡ್ ಸಿಲ್ವರ್ ಮತ್ತು ಯಾದನ್ ಬ್ಲಾಕ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ಮಾರಾಟ ಕಾಣಲಿದೆ. ಇದನ್ನು Vmall ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು. ಇತರ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತವೆಯೇ ಎಂಬುದರ ಕುರಿತು ಕಂಪನಿ ಇನ್ನಷ್ಟೆ ಬಹುರಂಗ ಪಡಿಸಬೇಕಿದೆ.

ಹುವೈ ಮೇಟ್ 60 ಪ್ರೊ ಫೀಚರ್ಸ್:

ಕಂಪನಿಯ ಪ್ರಕಾರ ಡ್ಯುಯಲ್-ಸಿಮ್ (ನ್ಯಾನೋ) ಹುವೈ ಮೇಟ್ 60 ಪ್ರೊ ಫೋನ್ HarmonyOS 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​ಫೋನ್ LTPO ತಂತ್ರಜ್ಞಾನದೊಂದಿಗೆ 6.82-ಇಂಚಿನ ಪೂರ್ಣ HD+ (1,260 x 2,720 ಪಿಕ್ಸೆಲ್​ಗಳು) AMOLED ಡಿಸ್ ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪಲ್ ಅನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್‌ ಯಾವ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ ಎಂಬುದು ಬಹಿರಂಗವಾಗಿಲ್ಲ.

ಇದನ್ನೂ ಓದಿ
ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಘೋಷಿಸಿದ ಆ್ಯಪಲ್: ಯಾವಾಗ?
SIM Card Port: ಒಂದು ಸಿಮ್ ಕಾರ್ಡ್​ ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತಾ?
108MP ಕ್ಯಾಮೆರಾದ ಸ್ಮಾರ್ಟ್​ಫೋನ್ ಬೇಕೇ?: ಇದೀಗ ಸೇಲ್ ಕಾಣುತ್ತಿದೆ ರಿಯಲ್ ಮಿ 11 5G
ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್: ರಿಲೀಸ್ ಆಯಿತು ರಿಯಲ್ ಮಿ GT 5 ಸ್ಮಾರ್ಟ್​ಫೋನ್

ಟೆಕ್ನೋ ಕ್ಯಾಮನ್ 20 ಆರ್ಟ್ ಎಡಿಷನ್ ಬಿಡುಗಡೆ: ಈ ಫೋನ್ ಡಿಸೈನ್ ನೋಡಿದ್ರೆ ಫಿದಾ ಆಗ್ತೀರ

ಈ ಹ್ಯಾಂಡ್‌ಸೆಟ್​ನ ಡಿಸ್ ಪ್ಲೇಯ ಮೇಲ್ಭಾಗದಲ್ಲಿ ಮೂರು ಹೋಲ್-ಪಂಚ್ ಕಟೌಟ್‌ಗಳ ಸೆಲ್ಫಿ ಕ್ಯಾಮೆರಾ ಮತ್ತು 3D ToF ಸಂವೇದಕವನ್ನು ಹೊಂದಿದೆ. ಕಂಪನಿಯ ಪ್ರಕಾರ ಇದು ಹುವೈನ ಎರಡನೇ ತಲೆಮಾರಿನ Kunlun ಗಾಜಿನಿಂದ ರಕ್ಷಿಸಲ್ಪಟ್ಟಿದೆ.

ಈ ಫೋನಿನ ಹಿಂಭಾಗ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಎಲ್ಇಡಿ ಫ್ಲ್ಯಾಷ್ ಅನ್ನು ವೃತ್ತಾಕಾರದ ಕ್ಯಾಮೆರಾದಲ್ಲಿ ಇರಿಸಲಾಗಿದೆ. ಇದರಲ್ಲಿ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಸೆನ್ಸಾರ್, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು OIS ಬೆಂಬಲದೊಂದಿಗೆ 48-ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಮತ್ತು 3.5x ಆಪ್ಟಿಕಲ್ ಜೂಮ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಫ್ರಂಟ್ ಕ್ಯಾಮೆರಾ ಮತ್ತು 3D ಡೆಪ್ತ್ ಕ್ಯಾಮೆರಾವನ್ನು ನೀಡಲಾಗಿದೆ.

ಹೆಚ್ಚುವರಿಯಾಗಿ, ಈ ಫೋನ್ ಉಪಗ್ರಹ ಕರೆಯ ಬೆಂಬಲದೊಂದಿಗೆ ಬರುತ್ತದೆ. ಸೆಲ್ಯುಲಾರ್ ನೆಟ್‌ವರ್ಕ್ ಸಂಪರ್ಕವಿಲ್ಲದೆ ಸಹ ಕರೆಗಳನ್ನು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಹುವೈ ಮೇಟ್ 60 ಪ್ರೊ 88W ವೇಗದ ಚಾರ್ಜಿಂಗ್, 50W ವೈರ್‌ಲೆಸ್ ವೇಗದ ಚಾರ್ಜಿಂಗ್ ಮತ್ತು 20W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Thu, 31 August 23