ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

|

Updated on: Sep 09, 2023 | 11:58 AM

Huawei Mate 60 Pro+ Launched: ಹುವೈ ಮೇಟ್ 60 ಪ್ರೊ+ ಸ್ಮಾರ್ಟ್​ಫೋನ್ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 1.5K ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ದರ ಮತ್ತು ಕುನ್ಲುನ್ ಗಾಜಿನ ರಕ್ಷಣೆಯೊಂದಿಗೆ ಬರುತ್ತದೆ. ಆಕರ್ಷಕ ಡಿಸ್ ಪ್ಲೇ, ಪ್ರೊಸೆಸರ್, ಭರ್ಜರಿ ಬ್ಯಾಟರಿ ಪವರ್ ಹೊಂದಿರುವ ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Huawei Mate 60 Pro+
Follow us on

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಹುವೈ ಕಂಪನಿ ನೂತನ ಮೊಬೈಲ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಚೀನಾ ಮಾರುಕಟ್ಟೆಯಲ್ಲಿ ಇದೀಗ ಹೊಸ ಹುವೈ ಮೇಟ್ 60 ಪ್ರೊ+ (Huawei Mate 60 Pro+) ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದು ಕೆಲವು ದಿನಗಳ ಹಿಂದೆ ಅನಾವರಣಗೊಂಡ ಹುವೈ ಮೇಟ್ 60 ಮತ್ತು ಹುವೈ ಮೇಟ್ 60 ಪ್ರೊ ಫೋನಿನ ಸರಣಿಗೆ ಸೇರುತ್ತದೆ. ಆಕರ್ಷಕ ಡಿಸ್ ಪ್ಲೇ, ಪ್ರೊಸೆಸರ್, ಭರ್ಜರಿ ಬ್ಯಾಟರಿ ಪವರ್ ಹೊಂದಿರುವ ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುವೈ ಮೇಟ್ 60 ಪ್ರೊ+ ಬೆಲೆ:

ಹುವೈ ಮೇಟ್ 60 ಪ್ರೊ+ ಫೋನ್ ಕಪ್ಪು ಮತ್ತು ಬೀಜ್ ಬಣ್ಣದ ಆಯ್ಕೆಗಳಲ್ಲಿ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ ಆರಂಭಿಕ ಬೆಲೆ CNY 1,000 (ಭಾರತದಲ್ಲಿ ಸುಮಾರು 11,300 ರೂ. ಇರಬಹುದು). ಈಗಾಗಲೇ ಈ ಫೋನ್ ಪ್ರಿ-ಬುಕಿಂಗ್‌ಗೆ ಲಭ್ಯವಿದೆ. ಇದು 16GB + 512GB ಮತ್ತು 16GB + 1TB ಎರಡು ಶೇಖರಣಾ ರೂಪಾಂತರಗಳಲ್ಲಿ ಮಾರಾಟವಾಗಲಿದೆ.

ಹುವೈ ಮೇಟ್ 60 ಪ್ರೊ+ ಫೀಚರ್ಸ್:

6.82-ಇಂಚಿನ LPTO OLED ಡಿಸ್ ಪ್ಲೇಯನ್ನು ಒಳಗೊಂಡಿರುವ ಹುವೈ ಮೇಟ್ 60 ಪ್ರೊ+ 1.5K ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ದರ ಮತ್ತು ಕುನ್ಲುನ್ ಗಾಜಿನ ರಕ್ಷಣೆಯೊಂದಿಗೆ ಬರುತ್ತದೆ. ಈ ಫೋನ್ ಇನ್-ಹೌಸ್ Kirin 9000s SoC, ಹಾರ್ಮನಿ OS 4.0 ಮೂಲಕ ರನ್ ಆಗುತ್ತದೆ.

ಇದನ್ನೂ ಓದಿ
ಶವೋಮಿ 12 ಪ್ರೊ ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
ಭಾರತದಲ್ಲಿ ಒಪ್ಪೋ A38 ಫೋನ್ ಬಿಡುಗಡೆ: ಬೆಲೆ ಕೇವಲ 12,999 ರೂ.
ತಯಾರಾಗಿ: ಮುಂದಿನ ವಾರ ಭಾರತಕ್ಕೆ ಅಪ್ಪಳಿಸುತ್ತಿದೆ ಮೋಟೋ ಎಡ್ಜ್ 40 ನಿಯೋ
ಗೂಗಲ್ ಪಿಕ್ಸೆಲ್ 8, 8 ಪ್ರೊ ಬಿಡುಗಡೆ ದಿನಾಂಕ ಬಹಿರಂಗ

ಸದ್ಯದಲ್ಲೇ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ ಬಿಡುಗಡೆ: ಬೆಲೆ, ಫೀಚರ್ಸ್ ಏನಿರಬಹುದು?

ಹುವೈ ಮೇಟ್ 60 ಪ್ರೊ+ ಸ್ಮಾರ್ಟ್​ಫೋನ್ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 40-ಮೆಗಾಪಿಕ್ಸೆಲ್ ಸಂವೇದಕದೊಂದಿಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 48-ಮೆಗಾಪಿಕ್ಸೆಲ್ ಅಲ್ಟ್ರಾ-ಮ್ಯಾಕ್ರೋ ಟೆಲಿಫೋಟೋವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾ 13-ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ.

88W ವೈರ್ಡ್, 50W ವೈರ್‌ಲೆಸ್ ಮತ್ತು 20W ವೈರ್‌ಲೆಸ್ ರಿವರ್ಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಡ್ಯುಯಲ್ ನ್ಯಾನೊ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್ ವೈಫೈ, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ