ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ

|

Updated on: Apr 23, 2021 | 2:23 PM

ಈ ಎಂಟು ಅಪ್ಲಿಕೇಷನ್​ಗಳನ್ನು ನಿಮ್ಮ ಆಂಡ್ರಾಯಿಡ್ ಸ್ಮಾರ್ಟ್​ಫೋನ್​ನಿಂದ ಮೊದಲು ಡಿಲೀಟ್ ಮಾಡಿ. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ, ಎಚ್ಚರಿಕೆ.

ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ
ಪ್ರಾತಿನಿಧಿಕ ಚಿತ್ರ
Follow us on

ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಹಾಗಿದ್ದಲ್ಲಿ ಈ ಲೇಖನವನ್ನು ಎಚ್ಚರಿಕೆಯಿಂದ ಓದಿ ಹಾಗೂ ತುಂಬ ಜಾಗರೂಕರಾಗಿರಿ. ಏಕೆಂದರೆ, ಇತ್ತೀಚೆಗೆ ಹೊಸ ಮಾಲ್‌ವೇರ್ ಪತ್ತೆಯಾಗಿದ್ದು, ಅದು ಬಳಕೆದಾರರ ಫೋನ್‌ಗಳಿಗೆ ಹಾನಿ ಉಂಟುಮಾಡುತ್ತಿದೆ. ಒಟ್ಟು 8 ಆಂಡ್ರಾಯ್ಡ್ ಅಪ್ಲಿಕೇಷನ್‌ಗಳು ಪತ್ತೆಯಾಗಿದ್ದು, ಇದರಲ್ಲಿ ಈ ವೈರಸ್ ಇದೆ. ಆಗ್ನೇಯ ಏಷ್ಯಾ ಮತ್ತು ಅರೇಬಿಯನ್ ಪೆನಿನ್ಸುಲಾದ ಗ್ರಾಹಕರನ್ನು ಈ ವೈರಸ್ ಗುರಿಯನ್ನಾಗಿ ಮಾಡಿಕೊಂಡಿದೆ. McAfee Cell Analysis ಪ್ರಕಾರ, ಈ ಅಪ್ಲಿಕೇಷನ್‌ಗಳು 7,00,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿವೆ.

ಬಳಕೆದಾರರ ಫೋನ್‌ಗಳಲ್ಲಿ ಫೋಟೋ ಎಡಿಟರ್, ವಾಲ್‌ಪೇಪರ್, ಕೀಬೋರ್ಡ್ ಸ್ಕಿನ್ ಮತ್ತು ಅನೇಕ ಕ್ಯಾಮೆರಾ ಸಂಬಂಧಿತ ಅಪ್ಲಿಕೇಷನ್‌ಗಳ ಮೂಲಕ ಈ ಮಾಲ್‌ವೇರ್ ಪ್ರವೇಶಿಸುತ್ತಿವೆ. ಈ ವಂಚಕ ಅಪ್ಲಿಕೇಷನ್‌ಗಳಲ್ಲಿ ಇರುವ ಮಾಲ್‌ವೇರ್ SMS ನೋಟಿಫಿಕೇಷನ್​ಗಳನ್ನು ಕಳುವು ಮಾಡಿ, ಆ ನಂತರ ಅನಧಿಕೃತ ಖರೀದಿಗಳನ್ನು ಮಾಡುತ್ತವೆ. ವರದಿಯ ಪ್ರಕಾರ, ಅವಲೋಕನಕ್ಕಾಗಿ ಸಾಮಾನ್ಯ ಮಾದರಿಯನ್ನು ತೋರಿಸುವ ಮೂಲಕ ಅಪ್ಲಿಕೇಷನ್ ಗೂಗಲ್ ಪ್ಲೇ ರೀಟೇಲರ್​ಗೆ ಸ್ವತಃ ಸಾಬೀತಾಯಿತು ಮತ್ತು ನಂತರ ಅಪ್​ಡೇಟ್ ಮೂಲಕ ಅಪಾಯಕಾರಿ ಕೋಡ್ ಅನ್ನು ಪ್ರಾರಂಭಿಸಿತು. ಅಂದರೆ, ಮೊದಲ ಅಪ್ಲಿಕೇಷನ್‌ನ ಸಾಮಾನ್ಯ ಕೆಲಸದ ಆವೃತ್ತಿಯನ್ನು ಪ್ರಾರಂಭಿಸಲಾಯಿತು ಮತ್ತು ನಂತರ ಅದನ್ನು ಅಪ್​ಡೇಟ್ ಮಾಡಲಾಗಿದೆ.

McAfee ಸೆಲ್ ಸುರಕ್ಷತಾ ಎಚ್ಚರಿಕೆಗಳು
McAfee ಸೆಲ್ ಸೇಫ್ಟಿಯು ಆಂಡ್ರಾಯ್ಡ್ / ಎಟಿನು ರೂಪದಲ್ಲಿ ಈ ಆತಂಕವನ್ನು ಪತ್ತೆ ಮಾಡಿದೆ ಮತ್ತು ಗ್ರಾಹಕರನ್ನು ಎಚ್ಚರಿಸಿದೆ. ಈ ಅಪ್ಲಿಕೇಷನ್‌ಗಳಲ್ಲಿ, ಪ್ರಸ್ತುತ ಡೈನಾಮಿಕ್ ಕೋಡ್ ಲೋಡಿಂಗ್ ಮೂಲಕ ಮಾಲ್‌ವೇರ್ ದಾಳಿ ಮಾಡುತ್ತದೆ. ಮಾಲ್‌ವೇರ್‌ನ ಎನ್‌ಕ್ರಿಪ್ಟ್ ಮಾಡಿದ ಪೇಲೋಡ್‌ಗಳು ಅಪ್ಲಿಕೇಷನ್‌ಗೆ ಹೋಲುವ ಫೋಲ್ಡರ್‌ಗಳನ್ನು ಸಹ ಫೋನ್‌ಗೆ ಸೇರಿಸುತ್ತವೆ. ಇವು “cache.bin,” “settings.bin,” “knowledge.droid,” ಅಥವಾ “.png”ನಂತಹ ಹೆಸರುಗಳನ್ನು ಬಳಸುತ್ತವೆ.

ವೈರಸ್ ಪತ್ತೆ ಕಷ್ಟ
ಒಟ್ಟಾರೆಯಾಗಿ, ಈ ವೈರಸ್ ನಿಮ್ಮ ಫೋನ್​ನಲ್ಲಿ ಅದ್ಯಾವ ಪರಿ ಸೇರಿಕೊಂಡು ಬಿಡುತ್ತವೆ ಅಂದರೆ ಅವುಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತದೆ. ಇದರ ನಂತರ, ಈ ಮಾಲ್​ವೇರ್ ತಾನಾಗಿಯೇ url ಅನ್ನು ತೆರೆಯುತ್ತದೆ ಮತ್ತು ಅನಧಿಕೃತ ಶಾಪಿಂಗ್ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಈ ಮಾಲ್‌ವೇರ್ ನಿಮ್ಮ ನೋಟಿಫಿಕೇಷನ್​ಗಳ ಮೇಲೂ ನಿಗಾ ಮಾಡುತ್ತದೆ ಮತ್ತು ಫೋನ್‌ನ SMS ಅನ್ನು ಸಹ ಕಳುವು ಮಾಡುತ್ತದೆ. ನೀವು ಸಹ ಈ ಸಮಸ್ಯೆಯೊಂದಿಗೆ ಬಡಿದಾಡುತ್ತಿದ್ದಲ್ಲಿ ಈ ಅಪ್ಲಿಕೇಶನ್‌ಗಳನ್ನು ಅನ್ ಇನ್​ಸ್ಟಾಲ್ ಮಾಡಬೇಕಾಗುತ್ತದೆ.

ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ
com.studio.keypaper2021
com.pip.editor.digicam
org.my.favorites.up.keypaper
com.tremendous.coloration.hairdryer
com.ce1ab3.app.photograph.editor
com.hit.digicam.pip
com.daynight.keyboard.wallpaper
Com.tremendous.star.ringtones

McAfee ಸೆಲ್ ಸಂಶೋಧನಾ ತಂಡವು ಪ್ರಸ್ತುತ ಈ ಅಪಾಯಕಾರಿ ಅಪ್ಲಿಕೇಷನ್‌ಗಳನ್ನು ನಿಗಾ ಮಾಡುತ್ತಿದೆ ಮತ್ತು ಈ ವೈರಸ್‌ಗಳನ್ನು ಶೀಘ್ರದಲ್ಲೇ ರಕ್ಷಣೆ ದೊರಕಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು

(Uninstall these 8 applications, which contains malware, would damage your Android smartphones)

Published On - 2:22 pm, Fri, 23 April 21