ಈಗಿನ ಕಾಲಕ್ಕೆ ತಕ್ಕಂತೆ ಭಾರತವನ್ನು ‘ಡಿಜಿಟಲ್ ಇಂಡಿಯಾ’ (Digital India) ಆಗಿ ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದರು. ಅದರಂತೆ ಭಾರತ ಇಂದು ಸಂಪೂರ್ಣವಾಗಿ ‘ಡಿಜಿಟಲ್ ಇಂಡಿಯಾ’ ಆಗುತ್ತಿದೆ. ಡಿಜಿಟಲೀಕರಣದಿಂದ ಹಿಡಿದು ಹಣಕಾಸು ವಹಿವಾಟಿನವರೆಗೆ ವಿವಿಧ ಕ್ಷೇತ್ರಗಳಲ್ಲಿ ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ನೆಟ್ವರ್ಕ್ (5G Network) ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್ವರ್ಕ್ ಹೊಂದಿದ ಪ್ರದೇಶವಾಗಿದೆ.
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”5 ತಿಂಗಳಲ್ಲಿ 1 ಲಕ್ಷ 5 ಜಿ ನೆಟ್ವರ್ಕ್ ಅನ್ನು ರಚಿಸಲಾಗಿದೆ, 8 ತಿಂಗಳಲ್ಲಿ 2 ಲಕ್ಷ ನೆಟ್ವರ್ಕ್ ಮತ್ತು 10 ತಿಂಗಳಲ್ಲಿ 3 ಲಕ್ಷ ನೆಟ್ವರ್ಕ್ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್‌ಗಳನ್ನು ಸ್ಥಾಪಿಸಲಾಗಿದೆ,” ಎಂದು ಅಶ್ವಿನಿ ವೈಷ್ಣವ್ ಉಲ್ಲೇಖಿಸಿದ್ದಾರೆ.
Oppo F21 Pro: ಫ್ಲಿಪ್ಕಾರ್ಟ್ನಲ್ಲಿ ಮೆಗಾ ಡಿಸ್ಕೌಂಟ್ ಆಫರ್ ಒಪ್ಪೊ F21 Pro ಫೋನ್
”5G ಸೈಟ್‌ಗಳನ್ನು ನಿರ್ಮಿಸಲು ಕೇಂದ್ರವು ಅನೇಕ ಯೋಜನೆಗಳನ್ನು ರೂಪಿಸಿದೆ. ಭಾರತವು 5G ನೆಟ್‌ವರ್ಕ್‌ಗೆ ವೇಗವಾಗಿ ಸಂಪರ್ಕ ಹೊಂದುತ್ತಿದೆ,” ಎಂದು ಕೇಂದ್ರ ರಾಜ್ಯ ಸಚಿವ ದೇವ್‌ಸಿನ್ಹ್ ಚೌಹಾಣ್ ಹೇಳಿದ್ದಾರೆ.
ಕಳೆದು ತಿಂಗಳು, ಸಂವಹನ ಖಾತೆಯ ರಾಜ್ಯ ಸಚಿವ ದೇವ್‌ಸಿನ್ಹ್ ಚೌಹಾಣ್, ”ಭಾರತವು 5G ಗೆ ಯುಗದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದರು. 9 ತಿಂಗಳಲ್ಲಿ 2.70 ಲಕ್ಷ 5ಜಿ ಸೈಟ್‌ಗಳನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಶೀಘ್ರದಲ್ಲೇ 6 ಜಿ ತಂತ್ರಜ್ಞಾನವನ್ನು ಕೂಡ ಆದಷ್ಟು ಬೇಗ ಪರಿಚಯಿಸುತ್ತೇವೆ,” ಎಂದು ಹೇಳಿದ್ದರು.
ಜಿಯೋ ಮತ್ತು ಏರ್‌ಟೆಲ್‌ನಂತೆ, ಶೀಘ್ರದಲ್ಲೇ ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್ ಕೂಡ ತನ್ನ 5G ಸಂಪರ್ಕ ನೀಡಲು ಮುಂದಾಗಿದೆ. ಇತ್ತೀಚೆಗೆ BSNL ತನ್ನ ಬಳಕೆದಾರರಿಗೆ 4G ಸೇವೆಯ ಪ್ರಯೋಜನವನ್ನು ನೀಡಿದೆ. ಸೆಪ್ಟೆಂಬರ್ 2023 ರ ವೇಳೆಗೆ, BSNL ನ 4G ಸೇವೆಯು ದೇಶಾದ್ಯಂತ ಪ್ರಾರಂಭವಾಗಲಿದೆ. ಇದರೊಂದಿಗೆ ಸರ್ಕಾರ ಟೆಲಿಕಾಂ ಕಂಪನಿಗೆ 5G ಸೇವೆಯನ್ನು ಪ್ರಾರಂಭಿಸಲು ಮುಂದಿನ ವರ್ಷದ ವರೆಗೆ ಸಮಯ ನೀಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Tue, 1 August 23