ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಅಲರ್ಟ್: ತಕ್ಷಣವೇ ಹೀಗೆ ಮಾಡಿ

Samsung Mobile Phone Users Alert: ಸ್ಯಾಮ್​ಸಂಗ್ ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್​ಗಳನ್ನು ಅಪ್ಡೇಟ್ ಮಾಡದಿದ್ದಲ್ಲಿ ಹ್ಯಾಕರ್‌ಗಳು ಬಳಕೆದಾರರಿಗೆ ತಿಳಿಯದಂತೆ ಅವರ ವೈಯಕ್ತಿಕ ಡೇಟಾವನ್ನು ಕದಿಯುವ ಸಂಭವವಿದೆ. ಆದ್ದರಿಂದ ಫೋನ್ ಸೆಟ್ಟಿಂಗ್‌ಗೆ ತೆರಳಿ ಇತ್ತೀಚಿನ ಸಾಫ್ಟ್‌ವೇರ್ ಅಪ್ಡೇಟ್ ಮಾಡಿ ಎಂದು ತಿಳಿಸಿದೆ.

ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಅಲರ್ಟ್: ತಕ್ಷಣವೇ ಹೀಗೆ ಮಾಡಿ
Samsung Phones
Follow us
Vinay Bhat
|

Updated on: Dec 16, 2023 | 12:42 PM

ಸ್ಯಾಮ್​ಸಂಗ್ (Samsung) ಸ್ಮಾರ್ಟ್​ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕೇಂದ್ರ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿಯು ಕಂಪನಿಯ ಸ್ಯಾಮ್​ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಭದ್ರತಾ ಲೋಪವನ್ನು ಗುರುತಿಸಿದ್ದು, ತಕ್ಷಣವೇ ತಮ್ಮ ಫೋನ್‌ಗಳನ್ನು ಅಪ್ಡೇಟ್ ಮಾಡುವಂತೆ ಸೂಚಿಸಿದೆ. ಆಂಡ್ರಾಯ್ಡ್ 11, 12, 13 ಮತ್ತು 14 ಓಎಸ್ ಹೊಂದಿರುವ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಭದ್ರತಾ ದೋಷವಿದೆ ಎಂದು ಸೈಬರ್ ಸೆಕ್ಯುರಿಟಿ ಏಜೆನ್ಸಿ ಹೇಳಿದೆ.

ಸ್ಯಾಮ್​ಸಂಗ್ ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್​ಗಳನ್ನು ಅಪ್ಡೇಟ್ ಮಾಡದಿದ್ದಲ್ಲಿ ಹ್ಯಾಕರ್‌ಗಳು ಬಳಕೆದಾರರಿಗೆ ತಿಳಿಯದಂತೆ ಅವರ ವೈಯಕ್ತಿಕ ಡೇಟಾವನ್ನು ಕದಿಯುವ ಸಂಭವವಿದೆ. ಹೀಗಾಗಿ ಐಟಿ ಸಚಿವಾಲಯದ Cert-In (CERT-In) ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇತ್ತೀಚಿನ ಭದ್ರತೆಯೊಂದಿಗೆ ತಕ್ಷಣವೇ ನವೀಕರಿಸಲು ಸೂಚಿಸಿದೆ.

ಕೊನೇ ಹಂತದಲ್ಲಿ ಫ್ಲಿಪ್​ಕಾರ್ಟ್ ಇಯರ್ ಎಂಡ್ ಸೇಲ್: ಸ್ಮಾರ್ಟ್​ಫೋನ್ಸ್ ಮೇಲಿನ ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Image
ಬೆಸ್ಟ್ ಬೆಜೆಟ್ ಫೋನ್ ರಿಯಲ್ ಮಿ C67 5G ಇಂದಿನಿಂದ ಖರೀದಿಗೆ ಲಭ್ಯ
Image
ಮೊಬೈಲ್ ಫೋನ್ ಉತ್ಪಾದನೆಯಲ್ಲಿ 22 ಪಟ್ಟು ಹೆಚ್ಚಳ: ಅಶ್ವಿನಿ ವೈಷ್ಣವ್​
Image
ಜಾಗತಿಕ ಮಾರುಕಟ್ಟೆಗೆ ವಿವೋ X100 ಸರಣಿ ಸ್ಮಾರ್ಟ್​ಫೋನ್ಸ್ ಎಂಟ್ರಿ
Image
ಕೊನೆಗೂ 8,499 ರೂ. ಗೆ ಭಾರತದಲ್ಲಿ ಬಿಡುಗಡೆ ಆಯಿತು ಪೋಕೋ C65 ಫೋನ್

Cert-In ಪ್ರಕಾರ, ನಾಕ್ಸ್ ವೈಶಿಷ್ಟ್ಯಗಳ ಮೇಲಿನ ಕಂಟ್ರೋಲ್, ಫೇಸ್ ರೀಡರ್ ಸಾಫ್ಟ್‌ವೇರ್‌ನಲ್ಲಿನ ದೋಷಗಳು, AR ಎಮೋಜಿ ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳು ಮತ್ತು ನಾಕ್ಸ್ ಭದ್ರತಾ ಸಾಫ್ಟ್‌ವೇರ್‌ನಲ್ಲಿ ದೋಷಗಳನ್ನು ಸರಿಪಡಿಸದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಈ ನ್ಯೂನತೆಗಳಿಂದಾಗಿ, ದಾಳಿಕೋರರು ಭದ್ರತಾ ಅಡೆತಡೆಗಳನ್ನು ಉಲ್ಲಂಘಿಸುವ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊರಹಾಕುವ ಅಪಾಯವಿದೆ ಎಂದು ಹೇಳಿದೆ.

ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ಗಳಲ್ಲಿ ದೋಷಗಳು ಪತ್ತೆಯಾದರೆ, ಹ್ಯಾಕರ್​ಗಳು ಮೊಬೈಲ್​ನ ಕಂಟ್ರೊಲ್ ತೆಗೆದುಕೊಂಡು ಪಿನ್ ಮತ್ತು AR ಎಮೋಜಿ ಸ್ಯಾಂಡ್‌ಬಾಕ್ಸ್ ಡೇಟಾವನ್ನು ಓದಬಹುದು. ಸಿಸ್ಟಮ್ ಸಮಯವನ್ನು ಬದಲಾಯಿಸುವ ಮೂಲಕ ನಾಕ್ಸ್ ಗಾರ್ಡ್ ಲಾಕ್ ಅನ್ನು ಬೈಪಾಸ್ ಮಾಡಬಹುದು. ಫೈಲ್‌ಗಳು ಮತ್ತು ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಅಪಾಯವಿದೆ ಎಂದು ಸೆರ್ಟ್-ಇನ್ ಹೇಳಿದೆ.

ಸೈಬರ್ ಸೆಕ್ಯುರಿಟಿ ಏಜೆನ್ಸಿಯ ಪ್ರಕಾರ, ಸ್ಯಾಮ್​ಸಂಗ್​ನ ಇತ್ತೀಚಿನ ಫೋನ್‌ಗಳಾದ ಗ್ಯಾಲಕ್ಸಿ S23, ಗ್ಯಾಲಕ್ಸಿ ಫ್ಲಿಪ್ 5 ಮತ್ತು ಗ್ಯಾಲಕ್ಸಿ ಫೋಲ್ಡ್ 5 ಸೇರಿದಂತೆ ಆಂಡ್ರಾಯ್ಡ್ 11, 12, 13, 14 ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್​ಫೋನ್​ಗಳ ಪರಿಣಾಮ ಬೀರುತ್ತವೆ. ಆದ್ದರಿಂದ ಫೋನ್ ಸೆಟ್ಟಿಂಗ್‌ಗೆ ತೆರಳಿ ಇತ್ತೀಚಿನ ಸಾಫ್ಟ್‌ವೇರ್ ಅಪ್ಡೇಟ್ ಮಾಡಿ ಎಂದು ತಿಳಿಸಿದೆ. ಭವಿಷ್ಯದಲ್ಲಿ ಇಂತಹ ಅಪಾಯವನ್ನು ತಪ್ಪಿಸಲು ಫೋನ್ ಅನ್ನು ಕಾಲಕಾಲಕ್ಕೆ ನವೀಕರಿಸಲು ಟೆಕ್ ತಜ್ಞರು ಸಲಹೆ ನೀಡಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್