ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್

Samsung Galaxy A25 Launch Date: ಡಿಜಿಟೆಕ್‌ನಲ್ಲಿನ ವರದಿಯ ಪ್ರಕಾರ ಸ್ಯಾಮ್​ಸಂಗ್ ಗ್ಯಾಲಕ್ಸಿ A25 ಸ್ಮಾರ್ಟ್​ಫೋಫೋನ್ ಮೂರು ಬಣ್ಣದ ಆಯ್ಕೆಗಳಲ್ಲಿ ಬರಲಿದ್ದು, ಇದೇ ಡಿಸೆಂಬರ್ 19 ಶಿಪ್ಪಿಂಗ್ ಪ್ರಾರಂಭವಾಗಲಿದೆ ಎಂದು ವರದಿ ಆಗಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 26,315 ರೂ. ಇರಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್
samsung galaxy a25 5g
Follow us
Vinay Bhat
|

Updated on:Dec 11, 2023 | 10:02 AM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ ವರ್ಷಾಂತ್ಯದ ವೇಳೆಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಸ್ಯಾಮ್​ಸಂಗ್ ಕಂಪನಿಯ ನೂತನ ಫೋನಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಕಂಪನಿಯ ಹೊಸ ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ A25 (Samsung Galaxy A25) ಇದೇ ಡಿಸೆಂಬರ್ 19 ಶಿಪ್ಪಿಂಗ್ ಪ್ರಾರಂಭವಾಗಲಿದೆ ಎಂದು ವರದಿ ಆಗಿದೆ. ಈ ಫೋನಿನ ಬೆಲೆ ಹಾಗೂ ಕೆಲ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಅತ್ಯುತ್ತಮವಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ A25 ಬೆಲೆ ಮತ್ತು ಲಭ್ಯತೆ

ಡಿಜಿಟೆಕ್‌ನಲ್ಲಿನ ವರದಿಯ ಪ್ರಕಾರ ಸ್ಯಾಮ್​ಸಂಗ್ ಗ್ಯಾಲಕ್ಸಿ A25 ಸ್ಮಾರ್ಟ್​ಫೋಫೋನ್ ಮೂರು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದು ಕಪ್ಪು, ನೀಲಿ ಮತ್ತು ಹಳದಿ ಬಣ್ಣದ್ದಾಗಿದೆ. ಪಟ್ಟಿ ಮಾಡಲಾದ ಪ್ರಕಾರ ಇದರ ಬೆಲೆ 279 ಸ್ವಿಸ್ ಫ್ರಾಂಕ್ (CHF) ಆಗಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 26,315 ರೂ. ಇರಬಹುದು.

ಸ್ಯಾಮ್​ಸಂಗ್​ನಿಂದ ಶಾಕಿಂಗ್ ಘೋಷಣೆ: ಬರುತ್ತಿದೆ ವಿಶ್ವದ ಮೊದಲ AI ಲ್ಯಾಪ್‌ಟಾಪ್

ಇದನ್ನೂ ಓದಿ
Image
200MP ಕ್ಯಾಮೆರಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಯಾವಾಗ ಬಿಡುಗಡೆ?
Image
ಸಿದ್ಧವಾಗುತ್ತಿದೆ ನಥಿಂಗ್ ಕಂಪನಿಯ 3ನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3
Image
ವರ್ಷದ ಕೊನೆಯ ಆಫರ್ ಮಿಸ್ ಮಾಡ್ಬೇಡಿ: ಐಫೋನ್ ಅತಿ ಕಡಿಮೆ ಬೆಲೆಗೆ ಲಭ್ಯ
Image
ಐಫೋನ್ 16 ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ಸುದ್ದಿ: ಏನದು ನೋಡಿ

ಸ್ಯಾಮ್​ಸಂಗ್ ಗ್ಯಾಲಕ್ಸಿ A25 ಸೋರಿಕೆಯಾದ ಫೀಚರ್ಸ್:

ಡಿಸ್ ಪ್ಲೇ: ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಸೂಪರ್ AMOLED ಡಿಸ್ ಪ್ಲೇಯನ್ನು ಹೊಂದಿರಬಹುದು.

ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾ 50MP+8MP+2MP ಟ್ರಿಪಲ್ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಕ್ಯಾಮೆರಾ ಇರಬಹುದು.

ಪ್ರೊಸೆಸರ್: ಗ್ಯಾಲಕ್ಸಿ A25 5G ಫೋನ್ ಎಕ್ಸಿನೊಸ್ 1280 5G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಮೆಮೊರಿ: 6GB RAM+ 128GB ಮತ್ತು 8GB RAM+ 256GB ಸಂಯೋಜನೆಗಳಲ್ಲಿ ಈ ಫೋನ್ ಅನ್ನು ಖರೀದಿಸಬಹುದು. ಮೈಕ್ರೊ SD ಕಾರ್ಡ್ ಬಳಸಿ 1TB ವರೆಗೆ ಶೇಖರಣಾ ವಿಸ್ತರಣೆ ಮಾಡಬಹುದು.

ಸಾಫ್ಟ್‌ವೇರ್: ಈ ಫೋನಿನ ಬಾಕ್ಸ್‌ನ ಹೊರಗೆ ಸ್ಯಾಮ್​ಸಂಗ್ One UI 6 ಜೊತೆಗೆ ಆಂಡ್ರಾಯ್ಡ್ 14 ಅನ್ನು ನೀಡಬಹುದು.

ಬ್ಯಾಟರಿ: ಗ್ಯಾಲಕ್ಸಿ A25 5G ಫೋನ್ 5,000mAh ಬ್ಯಾಟರಿ ಹೊಂದಿದೆ. ಇದು ಎಷ್ಟು ವೋಲ್ಟ್ ಫಾಸ್ಟ್ ಚಾರ್ಜರ್ ಬೆಂಬಲ ಪಡೆದುಕೊಂಡಿದೆ ಎಂಬುದು ಬಹಿರಂಗವಾಗಿಲ್ಲ.

ಇತರ ವೈಶಿಷ್ಟ್ಯಗಳು: ಡ್ಯುಯಲ್ ಸಿಮ್ ಬೆಂಬಲ, USB-C, ಸ್ಯಾಮ್​ಸಂಗ್ ಪೇ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 am, Mon, 11 December 23