ಸಿದ್ಧವಾಗುತ್ತಿದೆ ನಥಿಂಗ್ ಕಂಪನಿಯ 3ನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3: ಯಾವಾಗ ಬಿಡುಗಡೆ?

Nothing Phone 3 Specs Leaked: ಈಗಾಗಲೇ ನಥಿಂಗ್ ಫೋನ್ 3 ಫೀಚರ್‌ಗಳಿಗೆ ಸಂಬಂಧಿಸಿದ ಕೆಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋನ್ ಹಿಂದಿನ ಆವೃತ್ತಿಗಳಿಗಿಂತಲೂ ಹೆಚ್ಚು ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. ಕ್ಯಾಮೆರಾ ಕೂಡ ಅಪ್‌ಡೇಟ್ ಆಗಲಿದೆಯಂತೆ.

ಸಿದ್ಧವಾಗುತ್ತಿದೆ ನಥಿಂಗ್ ಕಂಪನಿಯ 3ನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3: ಯಾವಾಗ ಬಿಡುಗಡೆ?
Nothing Phone 3
Follow us
Vinay Bhat
|

Updated on:Dec 10, 2023 | 3:14 PM

ಲಂಡನ್ ಮೂಲದ ಖ್ಯಾತ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ನಥಿಂಗ್ (Nothing Phone) ಲಾಂಚ್ ಮಾಡಿರುವ ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಕ್ರೇಜ್ ಇದೆ ಎಂದು ಹೇಳಬೇಕಾಗಿಲ್ಲ. 2020 ರಲ್ಲಿ ಮಾರುಕಟ್ಟೆಗೆ ಬಂದ ಈ ಫೋನ್‌ಗಳು ಪ್ರಪಂಚದಾದ್ಯಂತ ದಾಖಲೆಯ ಮಾರಾಟ ಕಂಡವು. ಅದರಲ್ಲೂ ಈ ಸ್ಮಾರ್ಟ್‌ಫೋನ್‌ನ ವಿನ್ಯಾಸವು ಬಳಕೆದಾರರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿದೆ. ಇದೀಗ ಕಂಪನಿ ತನ್ನ ಮೂರನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3 ತಯಾರಿ ಆರಂಭಿಸಿದೆ.

ನಥಿಂಗ್ ಬ್ರ್ಯಾಂಡ್ ನಿಂದ ಇದುವರೆಗೆ ಎರಡು ಫೋನ್​ಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ನಥಿಂಗ್ ಫೋನ್-1 ಅನ್ನು 2022 ರಲ್ಲಿ ಬಿಡುಗಡೆ ಮಾಡಿದ್ದರೆ, ನಥಿಂಗ್ ಫೋನ್-2 2023 ರಲ್ಲಿ ಲಾಂಚ್ ಆಗಿತ್ತು. ಏತನ್ಮಧ್ಯೆ, ನಥಿಂಗ್ ಸರಣಿಯ ಮೂರನೇ ಫೋನ್ ಮುಂದಿನ ವರ್ಷ ಆದಷ್ಟು ಬೇಗ ಬಿಡುಗಡೆ ಆಗಲಿದೆಯಂತೆ. ಈ ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆಯಂತೆ.

ಐದೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ಬಜೆಟ್ ಬೆಲೆಯ ರಿಯಲ್ ಮಿ C67 5G ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ವರ್ಷದ ಕೊನೆಯ ಆಫರ್ ಮಿಸ್ ಮಾಡ್ಬೇಡಿ: ಐಫೋನ್ ಅತಿ ಕಡಿಮೆ ಬೆಲೆಗೆ ಲಭ್ಯ
Image
ಐಫೋನ್ 16 ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ಸುದ್ದಿ: ಏನದು ನೋಡಿ
Image
ಬರುತ್ತಿದೆ ವಿಶ್ವದ ಮೊದಲ AI ಲ್ಯಾಪ್‌ಟಾಪ್: ಸ್ಯಾಮ್​ಸಂಗ್ ಘೋಷಣೆ
Image
ಬಜೆಟ್ ಪ್ರಿಯರಿಗೆ ಹಬ್ಬವೋ ಹಬ್ಬ: ವಿವೋದಿಂದ ಬಂತು ಮತ್ತೊಂದು ಬಜೆಟ್ ಫೋನ್

ಈಗಾಗಲೇ ಈ ಫೋನಿನ ಫೀಚರ್‌ಗಳಿಗೆ ಸಂಬಂಧಿಸಿದ ಕೆಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಥಿಂಗ್ ಫೋನ್ 3 ಹಿಂದಿನ ಆವೃತ್ತಿಗಳಿಗಿಂತಲೂ ಹೆಚ್ಚು ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. ಹಿಂಭಾಗದಲ್ಲಿ ಗ್ಲಿಫ್ ಇಂಟರ್ಫೇಸ್, ಎಲ್‌ಇಡಿ ಲೈಟ್‌ಗಳು ಮತ್ತು ನೋಟಿಫಿಕೇಶನ್ ಲೈಟ್‌ಗಳೊಂದಿಗೆ ಫೋನ್ ಅನ್ನು ವಿನ್ಯಾಸಗೊಳಿಸಲಾಗುವುದು ಎಂದು ವರದಿಯಾಗಿದೆ. ಈ ಫೋನಿನಲ್ಲಿ ಕ್ಯಾಮೆರಾ ಕೂಡ ಅಪ್‌ಡೇಟ್ ಆಗಲಿದೆಯಂತೆ.

ನಥಿಂಗ್ ಫೋನ್ 3 ಸ್ನಾಪ್‌ಡ್ರಾಗನ್ 8 ಪ್ಲಸ್ ಜೆನ್ 1 ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ AMOLED ಡಿಸ್‌ಪ್ಲೇ ಹೊಂದಿರಲಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಪಂಚ್ ಹೋಲ್ ಡಿಸ್ಪ್ಲೇಯೊಂದಿಗೆ ಮುಂಭಾಗದ ಕ್ಯಾಮೆರಾವನ್ನು ನೀಡಲಾಗುವುದು ಎಂದು ವರದಿಯಾಗಿದೆ.

ಈ ಸ್ಮಾರ್ಟ್‌ಫೋನ್‌ನ ಬೆಲೆಯ ಬಗ್ಗೆ ಹೇಳುವುದಾದರೆ, ನಥಿಂಗ್‌ ಫೋನ್ 1 ಬೆಲೆ ರೂ. 32,999 ಪ್ರಾರಂಭಿಸಲಾಯಿತು. ಆದರೆ ನಥಿಂಗ್ ಫೋನ್ 2 ಬೆಲೆ ರೂ. 44,999. ಇದರೊಂದಿಗೆ ನಥಿಂಗ್ ಫೋನ್ 3 ಬೆಲೆಯೂ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಆಧಾರದ ಮೇಲೆ, ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್‌ನ ಮೂಲ ರೂಪಾಂತರ ಬೆಲೆ ರೂ. 50 ಸಾವಿರಕ್ಕೂ ಹೆಚ್ಚು ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sun, 10 December 23