ಬಜೆಟ್ ಪ್ರಿಯರಿಗೆ ಹಬ್ಬವೋ ಹಬ್ಬ: ವಿವೋದಿಂದ ಅತಿ ಕಡಿಮೆ ಬೆಲೆಗೆ ಬಂತು ಮತ್ತೊಂದು ಸ್ಮಾರ್ಟ್‌ಫೋನ್
Vivo Y36i Smartphone Launched: ವಿವೋ Y36i ಅನ್ನು ಚೀನಾದಲ್ಲಿ ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಏಕೈಕ ರೂಪಾಂತರವಾದ 4GB RAM + 128 GB ಸಂಗ್ರಹಣೆಯ ಬೆಲೆ 1,199 ಯುವಾನ್ ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 14,000 ರೂ. ಇರಬಹುದು.
ಪ್ರಸಿದ್ಧ ಮೊಬೈಲ್ ತಯಾರಕ ಸಂಸ್ಥೆ ವಿವೋ ತನ್ನ ವೈ-ಸರಣಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಅದೇ ಸಾಲಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವೋ Y36i (Vivo Y36i) ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಇದು ಬಜೆಟ್ ಶ್ರೇಣಿಯ ಬಳಕೆದಾರರಿಗೆ ಅತ್ಯುತ್ತಮ ಫೋನಾಗಿದೆ. ಈ ಫೋನ್ ವರ್ಚುವಲ್ RAM, ಡ್ಯುಯಲ್ ರಿಯರ್ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸ್ ಪ್ಲೇ: ಬಜೆಟ್ ಬೆಲೆಯ ವಿವೋ Y36i ಫೋನ್ 6.5 ಇಂಚಿನ IPS LCD HD ಡಿಸ್ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ದರ, 720 x 1612 ರ ಪಿಕ್ಸೆಲ್ ರೆಸಲ್ಯೂಶನ್, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 840 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
ಪ್ರೊಸೆಸರ್: ಈ ಮೊಬೈಲ್‌ನಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮನ್ಸಿಟಿ 6020 ಚಿಪ್‌ಸೆಟ್ ನೀಡಲಾಗಿದೆ. ಇದರೊಂದಿಗೆ, ಉತ್ತಮ ಗ್ರಾಫಿಕ್ಸ್‌ಗಾಗಿ Mali G57 GPU ಅನ್ನು ಅಳವಡಿಸಲಾಗಿದೆ.
ಸಂಗ್ರಹಣೆ: ಡೇಟಾವನ್ನು ಸಂಗ್ರಹಿಸಲು ಫೋನ್ 4GB RAM + 4GB ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ. ಇದರ ಸಹಾಯದಿಂದ 8GB RAM ವರೆಗೆ ವಿಸ್ತರಿಸಬಹುದು. 128GB ಆಂತರಿಕ ಸಂಗ್ರಹಣೆಯು ಲಭ್ಯವಿದೆ.
Tech Tips: ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಚಿನ್ನದಂತಹ ಬೆಲೆಗೆ ಇಲ್ಲಿ ಮಾರಾಟ ಮಾಡಿ
ಕ್ಯಾಮೆರಾ: ವಿವೋ Y36i ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಮತ್ತು ಆಂಟಿಸ್ಟ್ರೋಬೋಸ್ಕೋಪಿಕ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ: ಬ್ಯಾಟರಿಯ ವಿಷಯದಲ್ಲಿ, ಈ ಸಾಧನವು 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇತರೆ: ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.1, ಡ್ಯುಯಲ್ ಸಿಮ್ 4G ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ವಿವೋ Y36i ಬೆಲೆ:
ವಿವೋ Y36i ಅನ್ನು ಚೀನಾದಲ್ಲಿ ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಏಕೈಕ ರೂಪಾಂತರವಾದ 4GB RAM + 128 GB ಸಂಗ್ರಹಣೆಯ ಬೆಲೆ 1,199 ಯುವಾನ್ ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 14,000 ರೂ. ಇರಬಹುದು. ಈ ಮೊಬೈಲ್ ನೇರಳೆ ಮತ್ತು ಗೋಲ್ಡ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sat, 9 December 23