ವರ್ಷಾಂತ್ಯದ ಸ್ಪೆಷಲ್: ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?

Vivo Y36i Launched: ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್, 5000mAh ಬ್ಯಾಟರಿ ಜೊತೆಗೆ ಮಾರುಕಟ್ಟೆಗೆ ಇಂದು ಹೊಸ ವಿವೋ Y36i ಸ್ಮಾರ್ಟ್​ಫೋನ್ ಬಂದಿದೆ. ಇದು ವಿವೋ Y36 ಸರಣಿಗೆ ಸೇರುತ್ತದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

ವರ್ಷಾಂತ್ಯದ ಸ್ಪೆಷಲ್: ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?
Vivo Y36i
Follow us
Vinay Bhat
|

Updated on:Dec 11, 2023 | 1:26 PM

ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ವರ್ಷಾಂತ್ಯದ ವೇಳೆ ಒಂದರ ಹಿಂದೆ ಒಂದರಂತೆ ಆಕರ್ಷಕ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಅದರಂತೆ ಇದೀಗ ವಿವೋ ತನ್ನ Y- ಸರಣಿಯ ಕೊಡುಗೆಯಾಗಿ ವಿವೋ Y36i (Vivo Y36i) ಸ್ಮಾರ್ಟ್​ಫೋನನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಇದು ವಿವೋ Y36 ಸರಣಿಗೆ ಸೇರುತ್ತದೆ. ಈ ಹ್ಯಾಂಡ್‌ಸೆಟ್ ಡ್ಯುಯಲ್-ಕ್ಯಾಮೆರಾ ಸಂವೇದಕ, ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್, 5000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

ವಿವೋ Y36i ಬೆಲೆ:

ವಿವೋ Y36i ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 4GB + 128GB ಆಯ್ಕೆಗೆ RMB 1,199 (ಭಾರತದಲ್ಲಿ ಅಂದಾಜು ರೂ. 14,000). ಈ ಫೋನ್ ಫ್ಯಾಂಟಸಿ ಪರ್ಪಲ್, ಗ್ಯಾಲಕ್ಸಿ ಗೋಲ್ಡ್ ಮತ್ತು ಡೀಪ್ ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ.

ವಿವೋ Y36i ಫೀಚರ್ಸ್:

ಡಿಸ್‌ಪ್ಲೇ: ಈ ಹ್ಯಾಂಡ್‌ಸೆಟ್ 1612 x 720 ಪಿಕ್ಸೆಲ್‌, 90Hz ರಿಫ್ರೆಶ್ ರೇಟ್, 840 ಪೀಕ್ ಬ್ರೈಟ್‌ನೆಸ್ ಜೊತೆಗೆ 6.56-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ.

ಇದನ್ನೂ ಓದಿ
Image
ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್
Image
200MP ಕ್ಯಾಮೆರಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಯಾವಾಗ ಬಿಡುಗಡೆ?
Image
ಸಿದ್ಧವಾಗುತ್ತಿದೆ ನಥಿಂಗ್ ಕಂಪನಿಯ 3ನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3
Image
ವರ್ಷದ ಕೊನೆಯ ಆಫರ್ ಮಿಸ್ ಮಾಡ್ಬೇಡಿ: ಐಫೋನ್ ಅತಿ ಕಡಿಮೆ ಬೆಲೆಗೆ ಲಭ್ಯ

Flipkart Big Year End Sale: ವರ್ಷದ ಕೊನೆಯ ಆಫರ್ ಮಿಸ್ ಮಾಡ್ಬೇಡಿ: ಐಫೋನ್ ಅತಿ ಕಡಿಮೆ ಬೆಲೆಗೆ ಲಭ್ಯ

ಪ್ರೊಸೆಸರ್: ವಿವೋ Y36i ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020 SoC ಜೊತೆಗೆ Mali-G57 MP2 GPU ಜೊತೆ ನೀಡಲಾಗಿದೆ.

RAM ಮತ್ತು ಸಂಗ್ರಹಣೆ: ಈ ಚಿಪ್‌ಸೆಟ್ ಅನ್ನು 4GB LPDDR4X RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದು.

ಸಾಫ್ಟ್‌ವೇರ್: ವಿವೋ Y36i ಆಂಡ್ರಾಯ್ಡ್ 13-ಆಧಾರಿತ OS 3 ಅನ್ನು ಬೂಟ್ ಮಾಡುತ್ತದೆ.

ಹಿಂದಿನ ಕ್ಯಾಮೆರಾ: ಈ ಫೋನಿನಲ್ಲಿ 13MP ಪ್ರಾಥಮಿಕ ಕ್ಯಾಮೆರಾವನ್ನು f/2.2 ಅಪರ್ಚರ್ ಮತ್ತು ಎರಡನೇ ಕ್ಯಾಮೆರಾ AI ಮೂಲಕ ನೀಡಲಾಗಿದೆ.

ಮುಂಭಾಗದ ಕ್ಯಾಮೆರಾ: ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ: ವಿವೋ Y36i ಫೋನ್ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಅನ್ನು ಪ್ಯಾಕ್ ಮಾಡುತ್ತದೆ.

ಇತರೆ: ಈ ಫೋನ್ ರಿವರ್ಸ್ ಚಾರ್ಜಿಂಗ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ 5.1, USB ಟೈಪ್-C ಪೋರ್ಟ್ ಮತ್ತು GPS ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Mon, 11 December 23