ಪ್ರೇಮಿಗಳ ದಿನ ಹತ್ತಿರಬರುತ್ತಿದೆ. ಇದೇ ಫೆಬ್ರವರಿ 14 ರಂದು ವಿಶ್ವದಾದ್ಯಂತ ವ್ಯಾಲಂಟೈನ್ಸ್ ಡೇ (Valentines Day) ಯನ್ನು ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನದಂದು ವಿಶೇಷ ಸ್ಮಾರ್ಟ್‌ಫೋನ್ ಒಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಅಗ್ಗದ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್ ಕಂಪನಿ ತನ್ನ ಹೊಸ ಇನ್ಫಿನಿಕ್ಸ್ ಜಿರೋ 5ಜಿ (Infinix Zero 5G) ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದು ಭಾರತದಲ್ಲಿ ಇದೇ ಫೆಬ್ರವರಿ 14 ರಂದು ಅನಾವರಣಗೊಳ್ಳಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಇದನ್ನು ಖಚಿತ ಪಡಿಸಿದ್ದು, ಇದು ಇನ್ಫಿನಿಕ್ಸ್ ಕಂಪೆನಿಯ ಚೊಚ್ಚಲ 5G ಸ್ಮಾರ್ಟ್‌ಫೋನ್ ಆಗಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್, ಪವರ್ ಫುಲ್ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಅಗ್ಗದ ಬೆಲೆಗೆ ಬಿಡುಗಡೆ ಆಗಲಿದೆ.
ಹೌದು, ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ ನಿಖರ ಬೆಲೆಯನ್ನು ಕಂಪನಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಇದರ ಬೆಲೆ 20,000 ರೂ. ಆಸುಪಾಸಿನಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ಇದಲ್ಲದೆ ಈ ಫೋನ್ ಕನಿಷ್ಠ ಎರಡು ವಿಭಿನ್ನ ಬಣ್ಣದ ಆಯ್ಕೆಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಫೆಬ್ರವರಿ 14 ವ್ಯಾಲಂಟೈನ್ಸ್ ಡೇ ಯಂದು ಮಧ್ಯಾಹ್ನ 12 ಗಂಟೆಗೆ ಫೋನ್ ಲಾಂಚ್ ಆಗಲಿದೆ.
ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11ನ ಮೇಲೆ XOS 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಇನ್ಫಿನಿಕ್ಸ್ ಜಿರೋ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಹಾಟ್‌ಸ್ಪಾಟ್, ವೈಫೈ, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಒಟ್ಟಾರೆ ವ್ಯಾಲಂಟೈನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಕಡಿಮೆ ಬೆಲೆಗೆ ಬೆಸ್ಟ್ ಗಿಫ್ಟ್ ನೀಡುವ ಬಯಕೆ ನಿಮಗಿದ್ದರೆ ಈ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಲಿದೆ.
Best Smartphone: ಈ ಫೆಬ್ರವರಿ ತಿಂಗಳಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಗಳು ಇಲ್ಲಿವೆ ನೋಡಿ
Published On - 1:28 pm, Sun, 6 February 22