Jio Network Down: ಜಿಯೋ ನೆಟ್​ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಇಂಟರ್ನೆಟ್ ವರ್ಕ್ ಆಗ್ತಿಲ್ಲ: ಗ್ರಾಹಕರು ಕಂಗಾಲು

Reliance JIO: ಮುಂಬೈನಲ್ಲಿರುವ ಅನೇಕ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಜಿಯೋ ನೆಟ್​ವರ್ಕ್ ಡೌನ್ ಆಗಿದೆ ಎಂದು ದೂರು ನೀಡಿದ್ದಾರೆ. ಈ ಸಮಸ್ಯೆ ಮುಂಬೈನಲ್ಲಿರುವ ಕೆಲವು ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆಯೇ ಅಥವಾ ದೇಶದ ಹಲವಡೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

Jio Network Down: ಜಿಯೋ ನೆಟ್​ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಇಂಟರ್ನೆಟ್ ವರ್ಕ್ ಆಗ್ತಿಲ್ಲ: ಗ್ರಾಹಕರು ಕಂಗಾಲು
Jio network Down
Follow us
| Updated By: Vinay Bhat

Updated on: Feb 05, 2022 | 2:55 PM

ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ (Reliance Jio) ಮೊಬೈಲ್ ನೆಟ್​ವರ್ಕ್ ಡೌನ್ ಆಗಿದೆ ಎಂದು ವರದಿಯಾಗಿದೆ. ಮುಂಬೈನಲ್ಲಿರುವ ಅನೇಕ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಸಮಸ್ಯೆ ಮುಂಬೈನಲ್ಲಿರುವ ಕೆಲವು ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆಯೇ ಅಥವಾ ದೇಶದ ಹಲವಡೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್​​ನಲ್ಲಿ ನೆಟ್​ವರ್ಕ್​ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ. #jiodown ಎಂಬುದು ಟ್ವಿಟರ್ ಟ್ರೆಂಡಿಂಗ್ (Twitter trending) ಕೂಡಾ ಆಗಿದ್ದು, ಕರೆಗಳು ಬರುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಕರೆ ಮಾಡಲು ಹೊರಟರೆ “Not registered on network” ಎಂಬ ಮೆಸೇಜ್ ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ರಿಲಯನ್ಸ್ ಜಿಯೋ ಮಾತ್ರ ಈ ಬಗ್ಗೆ ಯಾವುದೇ ಪ್ರಕಟಣೆ ಈವರೆಗೆ ಹೊರಡಿಸಿಲ್ಲ.

ಬಳಕೆದಾರರು ಫೋನ್ ಕರೆಗಳನ್ನು ಹಾಗೂ ಇಂಟರ್ನೆಟ್ ಬಳಸಲಾಗುತ್ತಿಲ್ಲ ಎಂದು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಲೂ ಸಾಧ್ಯವಾಗುವುತ್ತಿಲ್ಲ. ಬೆಳಗ್ಗೆಯಿಂದಲೇ ಈ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಇತ್ತೀಚೆಗಷ್ಟೆ ಫೇಸ್‌ಬುಕ್, ಇನ್​ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನ ಸರ್ವರ್‌ಗಳು ಸ್ಥಗಿತಗೊಂಡಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಉಂಟಾಗಿತ್ತು.

ಇದೇ ಮೊದಲ ಬಾರಿಯಲ್ಲ:

ಜಿಯೋ ನೆಟ್​ವರ್ಕ್​ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಅನೇಕ ಸಲ ಜಿಯೋ ನೆಟ್​ವರ್ಕ್ ಡೌನ್ ಆಗಿತ್ತು. ಕಳೆದ ಅಕ್ಟೋಬರ್​ನಲ್ಲೂ ಜಿಯೋ ನೆಟ್‌ವರ್ಕ್‌ ಡೌನ್‌ ಆಗಿದೆ ಎಂದು ಅನೇಕ ಬಳಕೆದಾರರು ಟ್ವಿಟರ್​​ನಲ್ಲಿ ತಿಳಿಸಿದ್ದರು. ಇಂಟರ್ನೆಟ್ ಬಳಕೆ ಮಾಡಲು ಮತ್ತು ಕರೆ ಮಾಡಲು ಆಗುತ್ತಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ಆಗ ನೆಟ್‌ವರ್ಕ್ ಸ್ಥಗಿತದಿಂದಾಗಿ ಬಳಕೆದಾರರಿಗೆ ಆಗಿರುವ ನೆಟ್‌ವರ್ಕ್ ಸೇವೆಗಳ ನಷ್ಟ ಸರಿದೂಗಿಸಲು ರಿಲಾಯನ್ಸ್‌ ಜಿಯೋ ಭರ್ಜರಿ ಕೊಡುಗೆಯನ್ನು ಘೋಷಿಸಿತ್ತು. ಬಳಕೆದಾರರಿಗೆ 2 ದಿನಗಳ ಪೂರಕ ಸೇವೆಯನ್ನು ನೀಡುವುದಾಗಿ ತಿಳಿಸಿತ್ತು. ಹಾಗೆಯೇ ಬಳಕೆದಾರರಿಗೆ ತಡೆರಹಿತ ಸೇವಾ ಅನುಭವವನ್ನು ನೀಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿತ್ತು. 2 ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಯೋಜನೆಗಳಿಗೆ ಸ್ವಯಂಚಾಲಿತವಾಗಿ ಸೇರಿಸುವ ಆಫರ್ ಪ್ರಕಟ ಮಾಡಿತ್ತು.

Password: ನೀವು ಈ ಪಾಸ್ವರ್ಡ್ ಬಳಸುತ್ತಿದ್ದಲ್ಲಿ ತಕ್ಷಣೇ ಬದಲಾಯಿಸಿ: ನಾರ್ಡ್​ಪಾಸ್​ನಿಂದ ಎಚ್ಚರಿಕೆ ಸಂದೇಶ

Tecno Pova 5G: ಬಜೆಟ್ ಬೆಲೆಯ ಸಾಲಿಗೆ ಸೇರುತ್ತಿದೆ ಮತ್ತೊಂದು ಅದ್ಭುತ 5G ಸ್ಮಾರ್ಟ್​ಫೋನ್: ಏನಿದರ ವಿಶೇಷತೆ?

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?