ಭಾರತದಲ್ಲಿ ಐಫೋನ್ 15, ಐಫೋನ್ 15 ಪ್ಲಸ್ ಬೆಲೆ ಎಷ್ಟು?, ಫೀಚರ್ಸ್ ಏನಿದೆ?: ಇಲ್ಲಿದೆ ಮಾಹಿತಿ

|

Updated on: Sep 14, 2023 | 1:06 PM

iPhone 15, iPhone 15 Plus Price and Specs: ಐಫೋನ್ 15 ಸರಣಿ ಭಾರತದಲ್ಲಿ ಬಿಡುಗಡೆ ಆಗಿದೆ. ನೀವು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಅನ್ನು ಸೆಪ್ಟೆಂಬರ್ 15 ಸಂಜೆ 5:30 ರಿಂದ ಭಾರತದಲ್ಲಿ ಮುಂಗಡವಾಗಿ ಆರ್ಡರ್ ಮಾಡಬಹುದು, ಮಾರಾಟವು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುತ್ತದೆ. ಇಲ್ಲಿದೆ ನೋಡಿ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಕುರಿತ ಸಂಪೂರ್ಣ ಮಾಹಿತಿ.

ಭಾರತದಲ್ಲಿ ಐಫೋನ್ 15, ಐಫೋನ್ 15 ಪ್ಲಸ್ ಬೆಲೆ ಎಷ್ಟು?, ಫೀಚರ್ಸ್ ಏನಿದೆ?: ಇಲ್ಲಿದೆ ಮಾಹಿತಿ
Apple iPhone 15 Series
Follow us on

ಆ್ಯಪಲ್ ಕಂಪನಿ ತನ್ನ ವಂಡರ್‌ಲಸ್ಟ್ ಈವೆಂಟ್​ನಲ್ಲಿ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು (iPhone 15 Series) ಅನಾವರಣ ಮಾಡಿದೆ. ಬಿಡುಗಡೆಗೂ ಮುನ್ನ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ನೂತನ ಐಫೋನ್​ನಲ್ಲಿ ನಾಲ್ಕು ಹೊಸ ಮಾದರಿಗಳಿವೆ. ಇವು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಆಗಿದೆ. ಸದ್ಯ ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಸ್ಮಾರ್ಟ್​ಫೋನ್​ನ ಬೆಲೆ ಎಷ್ಟು, ಇದರಲ್ಲಿ ಏನೆಲ್ಲ ಫೀಚರ್ಸ್ ನೀಡಲಾಗಿದೆ ಎಂಬುದನ್ನು ನೋಡೋಣ.

ಭಾರತದಲ್ಲಿ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಬೆಲೆ:

  • ಐಫೋನ್ 15- 128GB- 79,900 ರೂ.
  • ಐಫೋನ್ 15- 256GB- 89,900 ರೂ.
  • ಐಫೋನ್ 15- 512GB- 1,09,900 ರೂ.
  • ಐಫೋನ್ 15 ಪ್ಲಸ್- 128GB – 89,900 ರೂ.
  • ಐಫೋನ್ 15 ಪ್ಲಸ್- 256GB – 99,900 ರೂ.
  • ಐಫೋನ್ 15 ಪ್ಲಸ್- 512GB – 1,19,900 ರೂ.ನೀವು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಅನ್ನು ಸೆಪ್ಟೆಂಬರ್ 15 ಸಂಜೆ 5:30 ರಿಂದ ಭಾರತದಲ್ಲಿ ಮುಂಗಡವಾಗಿ ಆರ್ಡರ್ ಮಾಡಬಹುದು, ಮಾರಾಟವು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುತ್ತದೆ.

ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ ಗೂಗಲ್ ಪಿಕ್ಸೆಲ್ 8 ಸರಣಿಯ ಸ್ಮಾರ್ಟ್​ಫೋನ್ಸ್

ಐಫೋನ್ 15 ಮತ್ತು ಐಫೋನ್ 15 ಪ್ಲಸ್ ವಿನ್ಯಾಸ:

  • ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಡೈನಾಮಿಕ್ ಐಲ್ಯಾಂಡ್ ಡಿಸ್ ಪ್ಲೇಗಳನ್ನು ಹೊಂದಿದೆ.
  • ಆ್ಯಪಲ್ ಅಂತಿಮವಾಗಿ ಲೈಟ್ನಿಂಗ್ ಪೋರ್ಟ್‌ಗೆ ವಿದಾಯ ಹೇಳಿದ್ದು ಐಫೋನ್ 15 ಸರಣಿಯಲ್ಲಿ USB-C ಅನ್ನು ನೀಡುರುವುದು ಮತ್ತೊಂದು ದೊಡ್ಡ ಅಪ್‌ಗ್ರೇಡ್ ಆಗಿದೆ.
  • ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಎರಡೂ OLED ಸೂಪರ್ ರೆಟಿನಾ ಡಿಸ್ ಪ್ಲೇ ಜೊತೆಗೆ 2000 nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ.
  • ಈ ಎರಡೂ ಫೋನ ಒಟ್ಟು ಐದು ಬಣ್ಣಗಳಲ್ಲಿ ಬರುತ್ತವೆ – ಪಿಂಕ್, ಹಳದಿ, ಹಸಿರು, ನೀಲಿ ಮತ್ತು ಕಪ್ಪು. ಹೊಸ ಐಫೋನ್‌ಗಳು ಟೆಕ್ಸ್ಚರ್ಡ್ ಮ್ಯಾಟ್ ಫಿನಿಶ್ ಮತ್ತು ಸೆರಾಮಿಕ್ ಶೀಲ್ಡ್‌ನಲ್ಲಿ ನೀಡಲಾಗಿದೆ.

ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಫೀಚರ್ಸ್:

ಡಿಸ್ ಪ್ಲೇ: ಐಫೋನ್ 15 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ ಪ್ಲೇಯನ್ನು ಹೊಂದಿದೆ, ಆದರೆ ಪ್ಲಸ್ ಮಾದರಿಯು 6.7-ಇಂಚಿನ ದೊಡ್ಡ ಡಿಸ್ ಪ್ಲೇ, 2000 nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಆದಾಗ್ಯೂ, ಆಪಲ್ 120Hz ಡಿಸ್ ಪ್ಲೇಗಳನ್ನು ಪ್ರೊ ಮಾದರಿಗಳಿಗೆ ನೀಡಿದ್ದು, ಐಫೋನ್ 15 ಮತ್ತು ಐಫೋನ್ 15 ಪ್ಲಸ್​ನಲ್ಲಿ 60Hz ಅನ್ನು ಇರಿಸಿದೆ.

ಇದನ್ನೂ ಓದಿ
ಮೋಟೋ G54 5G ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಮೊದಲ ದಿನವೇ ಆಫರ್
ಚಾಟ್ ಫಿಲ್ಟರ್ ಎಂಬ ಆಯ್ಕೆ: ವಾಟ್ಸ್​ಆ್ಯಪ್​ನಲ್ಲಿ ನಿರೀಕ್ಷೆಗೂ ಮೀರಿದ ಫೀಚರ್
ರಿಯಲ್ ಮಿ ನಾರ್ಜೊ 60x ಫೋನಿನ ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ
ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ

ಪ್ರೊಸೆಸರ್: ಐಫೋನ್ 15 ಮತ್ತು ಐಫೋನ್ 15 ಪ್ಲಸ್, ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್​ನಲ್ಲಿ ಇರುವ A16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ.

ಕ್ಯಾಮೆರಾಗಳು: 48MP ಪ್ರಾಥಮಿಕ ಸಂವೇದಕ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಐಫೋನ್ 15 ಸರಣಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ, 12MP ಮುಂಭಾಗದ ಕ್ಯಾಮೆರಾ ಇದೆ.

ಬ್ಯಾಟರಿ ಬಾಳಿಕೆ: ಐಫೋನ್ 15 ಇಡೀ ದಿನದ ಬ್ಯಾಟರಿ ಅವಧಿಯೊಂದಿಗೆ ಬರುತ್ತದೆ ಎಂದು ಆ್ಯಪಲ್ ಹೇಳಿದೆ, ಆದರೆ ಐಫೋನ್ 15 ಪ್ಲಸ್​ನಲ್ಲಿ ದೊಡ್ಡ ಬ್ಯಾಟರಿ ನೀಡಲಾಗಿದೆ. ನಿಖರವಾದ ಬ್ಯಾಟರಿ ಸಾಮರ್ಥ್ಯವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಕನೆಕ್ಟಿವಿಟಿ: ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಲೈಟ್ನಿಂಗ್ ಪೋರ್ಟ್ ಬದಲಿಗೆ ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಐಫೋನ್‌ಗಳು MagSafe ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Thu, 14 September 23