ಪ್ರಸಿದ್ಧ ಆ್ಯಪಲ್ ಕಂಪನಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಫೋನ್ 15 ಸರಣಿಯನ್ನು (iPhone 15 Series) ಬಿಡುಗಡೆ ಮಾಡಿದೆ. ಇದು ಸೆಪ್ಟೆಂಬರ್ 15 ರಂದು ಮುಂಗಡ ಬುಕ್ಕಿಂಗ್ಗೆ ಲಭ್ಯವಿದೆ. ಐಫೋನ್ 15 ಸರಣಿಗಳ ಮಾರಾಟವು ಭಾರತದಲ್ಲಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗುತ್ತದೆ. ಈ ಸರಣಿಯ ಬೇಸ್ ಮಾಡೆಲ್ ಐಫೋನ್ 15 ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ ಭಾರತದಲ್ಲಿ 79,900 ರೂ. ಆಗಿದೆ. ಆದರೆ, ಹೊಸ ಐಫೋನ್ 15 ಖರೀದಿಸುವುದು ಉತ್ತಮವೇ? ಅಥವಾ ಕಡಿಮೆ ಬೆಲೆಯ ಐಫೋನ್ 14 ಖರೀದಿಸಬಹುದೇ? ಎಂಬುದನ್ನು ನೋಡೋಣ.
ಐಫೋನ್ 15 128GB ಸ್ಟೋರೇಜ್ ಮಾದರಿ 79,900 ರೂ. ಆರಂಭಿಕ ಬೆಲೆಯೊಂದಿಗೆ ಬರುತ್ತದೆ. ಇದು ಕಳೆದ ವರ್ಷದ ಮಾದರಿಯಂತೆಯೇ ಇರುತ್ತದೆ. ಆ್ಯಪಲ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಐಫೋನ್ 14 ಬೆಲೆ 69,900 ರೂ. ಗೆ ಇಳಿದಿದೆ. ಆದಾಗ್ಯೂ, ಗ್ರಾಹಕರು ಇದನ್ನು ಫ್ಲಿಪ್‌ಕಾರ್ಟ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದು. ಈ ಸ್ಮಾರ್ಟ್ಫೋನ್ 67,999 ರೂ. ಗೆ ಸೇಲ್ ಆಗುತ್ತಿದೆ.
ಐಫೋನ್ 15 ಹಿಂದಿನ ಐಫೋನ್ 14 ಗಿಂತ ದೊಡ್ಡ ಅಪ್‌ಗ್ರೇಡ್ ಆಗಿದೆ. ಎರಡೂ 5G ಫೋನ್‌ಗಳು ಉತ್ತಮವಾಗಿವೆ, ಆದರೆ ಕೆಲ ಕಾರಣಗಳಿಗಾಗಿ ನೀವು ಹೊಸ ಐಫೋನ್ 15 ಅನ್ನು ಖರೀದಿಸಲು ನಾನು ಶಿಫಾರಸು ಮಾಡುತ್ತೇವೆ. ಐಫೋನ್ 15 ಉತ್ತಮ 48-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ. ಅಲ್ಲದೆ ಲೈವ್ ಚಟುವಟಿಕೆಗಳಿಗಾಗಿ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಸಹ ನೀಡಲಾಗದೆ. ಇದು ಕಳೆದ ವರ್ಷ ಐಫೋನ್ 14 ಪ್ರೊ ರೂಪಾಂತರಗಳಿಗೆ ಸೀಮಿತವಾಗಿತ್ತು. ಹೊಸ ಐಫೋನ್ ವೇಗವಾದ ಚಿಪ್ ಮತ್ತು USB-C ಟೈಪ್ ಸಿ ಚಾರ್ಜರ್ ಅನ್ನು ಹೊಂದಿದೆ.
ಭಾರತದಲ್ಲಿ ಐಫೋನ್ 15 ಪ್ರೊ, 15 ಪ್ರೊ ಮ್ಯಾಕ್ಸ್ ಬೆಲೆ ಎಷ್ಟು?, ಫೀಚರ್ಸ್ ಏನಿದೆ?
ಯುಎಸ್‌ಬಿ-ಸಿ ಪೋರ್ಟ್ ಹೊಂದಿರುವ ಕಾರಣ ನೀವು ಪ್ರತ್ಯೇಕ ಚಾರ್ಜಿಂಗ್ ಕೇಬಲ್ ಮತ್ತು ಐಫೋನ್ 15 ಗಾಗಿ ಅಡಾಪ್ಟರ್ ಅನ್ನು ತೆಗೆದುಕೊಳ್ಳಬೇಕಿಲ್ಲ. ನಿಮ್ಮ ಮನೆಯಲ್ಲಿ ನೀವು ಹೊಂದಿರುವ ಯಾವುದೇ ಟೈಪ್-ಸಿ ಚಾರ್ಜರ್ ಅನ್ನು ಸರಳವಾಗಿ ಬಳಸಬಹುದು.
ಆ್ಯಪಲ್‌ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 15 ಮತ್ತು ಐಫೋನ್ 14 20 ಗಂಟೆಗಳ ಬ್ಯಾಟರಿಯನ್ನು ಪಡೆಯುತ್ತದೆ ಎಂದು ಹೇಳಿದೆ. ಹೊಸ ಐಫೋನ್‌ಗಳಿಗಾಗಿ ಆ್ಯಪಲ್‌ನ ಬ್ಯಾಟರಿ ಆಪ್ಟಿಮೈಸೇಶನ್ ಉತ್ತಮವಾಗಿದೆ. ಎರಡೂ ಐಫೋನ್‌ಗಳು IP68 ಜಲ-ನಿರೋಧಕ ರೇಟಿಂಗ್, ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಮತ್ತು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತವೆ. 6.1-ಇಂಚಿನ ಡಿಸ್ ಪ್ಲೇ ಗಾತ್ರವು ಎರಡರಲ್ಲೂ ಒಂದೇ ಆಗಿರುತ್ತದೆ.
ಒಟ್ಟಾರೆಯಾಗಿ, ನೀವು ಸುಮಾರು 80,000 ರೂಪಾಯಿಗಳನ್ನು ಖರ್ಚು ಮಾಡಲು ಶಕ್ತರಾಗಿದ್ದರೆ, ಹೊಸ ಐಫೋನ್ 15 ಅನ್ನು ಖರೀದಿಸುವುದು ಉತ್ತಮ. ಕೆಲವು ತಿಂಗಳುಗಳವರೆಗೆ ಕಾದರೆ ಐಫೋನ್ 15 ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಆನ್‌ಲೈನ್ ಸ್ಟೋರ್‌ಗಳು ಮುಂಬರುವ ತಿಂಗಳುಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಕೆಲವು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ನಿಮ್ಮ ಬಜೆಟ್ ಸುಮಾರು 50,000 ರೂ. ಆಗಿದ್ದರೆ, ನೀವು iPhone 13 ಅನ್ನು ಖರೀದಿಸಲು ಪರಿಗಣಿಸಬಹುದು. ಇದು ಐಫೋನ್ 14 ನಂತೆಯೇ ಇದೆ. ಇದರ ಬೆಲೆ 55,999 ರೂ. ಆಗಿದೆ. ವಿನಿಮಯ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳ ಮೂಲಕ ಬೆಲೆಯಲ್ಲಿ ಗಣನೀಯವಾಗಿ ಕಡಿಮೆ ಮಾಡಬಹುದು. ದೀಪಾವಳಿಯ ಸಮಯದಲ್ಲಿ ನೀವು ಐಫೋನ್ ಅನ್ನು ಖರೀದಿಸಿದರೆ ಉತ್ತಮ. ಯಾಕೆಂದರೆ ಆ ಸಮಯದಲ್ಲಿ ಇವುಗಳ ಬೆಲೆ ಕಡಿಮೆ ಆಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ