ರಿಲಯನ್ಸ್ ಜಿಯೋ (Reliance Jio), ಭಾರ್ತಿ ಏರ್ಟೆಲ್ (Bharti Airtel) ಮತ್ತು ವೊಡಾಫೋನ್ ಐಡಿಯಾ (Vi) ನಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಈಗೀಗ ಹೆಚ್ಚಾಗಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುವ ಯೋಜನೆಯನ್ನು ಪರಿಚಯಿಸುತ್ತಿದೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆಗಿರುವುದರಿಂದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿರುವ ಎಲ್ಲಾ ವಿಷಯಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಿದೆ. ಇದೀಗ ಜಿಯೋ ಪರಿಚಯಿಸಿರುವ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ಲಾನ್‌ಗಳು ಯಾವುವು ಎಂಬುದನ್ನು ನೋಡೋಣ.
ಐಪಿಎಲ್ ಪ್ರಿಯರಿಗಾಗಿ ಜಿಯೋ ಇದೀಗ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವ 555 ರೂಪಾಯಿಗಳ ಡೇಟಾ ಆಡ್ ಆನ್ ಆಫರ್ ಅನ್ನು ಘೋಷಿಸಿದೆ. ಈಗಾಗಲೇ ಜಿಯೋವಿನ ರೀಚಾರ್ಜ್ ಪ್ಲಾನ್ ಹೊಂದಿದ್ದು, ಐಪಿಎಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಮಾತ್ರ ಎದುರುನೋಡುತ್ತಿರುವ ಗ್ರಾಹಕರಿಗೆ ಇದು ಭರ್ಜರಿ ಕೊಡುಗೆಯಾಗಿದೆ. ಇದ ಜೊತೆಗೆ ಗ್ರಾಹಕರು ಭಾರೀ ಡೇಟಾ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಇದು ಒಟ್ಟು 55GB ಡೇಟಾದೊಂದಿಗೆ ಬರುತ್ತದೆ. ಜಿಯೋ ಗ್ರಾಹಕರು ತಮ್ಮ ಪ್ರಸ್ತುತ ರೀಚಾರ್ಜ್ ಯೋಜನೆಯ ಜೊತೆಗೆ ಈ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದ್ದು, ಐಪಿಎಲ್ ವೀಕ್ಷಣೆಗಾಗಿಯೇ ಪ್ರಕಟಿಸಿರುವ ಪ್ರೀಪೇಡ್ ಯೋಜನೆ ಇದಾಗಿದೆ. ಒಟ್ಟು 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯು ಧ್ವನಿ ಕರೆ ಅಥವಾ SMS ಪ್ರಯೋಜನಗಳೊಂದಿಗೆ ಬರುವುದಿಲ್ಲ.
ರಿಲಯನ್ಸ್ ಜಿಯೋದ 1,499 ರೂ. ಪ್ಲಾನ್ ನಿಮಗೆ ಒಂದು ವರ್ಷದ ತನಕ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ನೀವು ಜಿಯೋದ 719 ರೂ. ಯೋಜನೆಯ ಪ್ರಯೋಜನಗಳನ್ನು ಒಂದು ತಿಂಗಳಿಗೆ ಪೂರಕವಾಗಿ ಪಡೆಯಬಹುದು. 719 ರೂ. ಪ್ಲಾನ್ ನಿಮಗೆ ದೈನಂದಿನ 2GB ಡೇಟಾವನ್ನು ನೀಡಲಿದೆ. ಇದು 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ. ಹೆಚ್ಚಿವರಿಯಾಗಿ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.
ಇನ್ನು ಜಿಯೋ 279 ರೂ. ಕ್ರಿಕೆಟ್ ಆಡ್-ಆನ್ ಪ್ರಿಪೇಯ್ಡ್ ಪ್ಲಾನ್ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡಲಿದೆ. ಇದು ಒಟ್ಟು 15GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಅಲ್ಲದೆ ನೀವು ಈ ಯೋಜನೆಯನ್ನು ಖರೀದಿಸಿದರೆ, ಈಗಾಗಲೇ ನಿಮ್ಮ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇನ್ನು ಈ ಈ ಕ್ರಿಕೆಟ್ ಪ್ರಿಪೇಯ್ಡ್ ಪ್ಲಾನ್ ಎಲ್ಲರಿಗೂ ಲಭ್ಯವಿಲ್ಲ, ಬದಲಿಗೆ ಕೆಲವೇ ಕೆಲ ಆಯ್ದ ಬಳಕೆದಾರರಿಗೆ ಇದು ಲಭ್ಯವಿದೆ. ಕೆಲವು ಆಯ್ದ ಮಂದಿಗಳ ಲಿಸ್ಟ್‌ನಲ್ಲಿ ನೀವು ಕೂಡ ಸೇರಿದ್ದರೆ MyJio ಅಪ್ಲಿಕೇಶನ್‌ನಲ್ಲಿ ಈ ಪ್ಲಾನ್ ನಿಮಗೆ ಲಭ್ಯವಾಗಲಿದೆ.
ನೀವು ಒಂದು ವರ್ಷದವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆ ಎದುರು ನೋಡುತ್ತಿದ್ದರೆ 3119 ರೂ. ಪ್ರಿಪೇಯ್ಡ್ ಪ್ಲಾನ್ ಉತ್ತಮವಾಗಿದೆ. ಇದು ಅನಿಯಮಿತ ಕರೆಗಳು, 2GB ದೈನಂದಿನ ಡೇಟಾ ಮಿತಿಯೊಂದಿಗೆ ಒಟ್ಟು 740GB ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಅಪ್ಲಿಕೇಶನ್‌ಗಳ ಜಿಯೋ ಸೂಟ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರೊಂದಿಗೆ 4199 ರೂ. ಯೋಜನೆ ಕೂಡ ಇದ್ದು, ಇದು ಒಂದು ವರ್ಷಕ್ಕೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, ಅನ್ ಲಿಮಿಟೆಡ್ ಕರೆ ಪ್ರಯೋಜನಗಳು, 3GB ದೈನಂದಿನ ಡೇಟಾ ಮಿತಿಯೊಂದಿಗೆ ಒಟ್ಟು 1095 GB ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಅಪ್ಲಿಕೇಶನ್‌ಗಳ ಜಿಯೋ ಸೂಟ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
Oppo K10: ಕಡಿಮೆ ಬೆಲೆ, ಬಂಪರ್ ಫೀಚರ್ಸ್: ಇಂದಿನಿಂದ ಒಪ್ಪೋ K10 ಖರೀದಿಗೆ ಲಭ್ಯ: ಈ ಫೋನ್ ಮಿಸ್ ಮಾಡ್ಬೇಡಿ
Poco X4 Pro 5G: ಬೊಂಬಾಟ್ ಬ್ಯಾಟರಿ, ಭರ್ಜರಿ ಕ್ಯಾಮೆರಾ: ಭಾರತದಲ್ಲಿ ಪೋಕೋ X4 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್