ಬಹುನಿರೀಕ್ಷಿತ ಐಕ್ಯೂ 12 5G ಬಿಡುಗಡೆ ದಿನಾಂಕ ಪ್ರಕಟ: ಧೂಳೆಬ್ಬಿಸುವುದು ಖಚಿತ

|

Updated on: Nov 04, 2023 | 2:56 PM

iQOO 12 5G launch Date: ಐಕ್ಯೂ ಹಂಚಿಕೊಂಡ ಪೋಸ್ಟರ್ ಚಿತ್ರದ ಪ್ರಕಾರ, ಐಕ್ಯೂ 12 5G ಭಾರತದಲ್ಲಿ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಹಿಂಬದಿಯ ಕ್ಯಾಮೆರಾ ವಿನ್ಯಾಸವನ್ನು ತೋರಿಸುತ್ತದೆ. ಪೋಸ್ಟರ್ ಐಕ್ಯೂ 11 ಲೆಜೆಂಡ್‌ನಂತೆಯೇ BMW ಮೋಟಾರ್‌ಸ್ಪೋರ್ಟ್ ವಿಶೇಷ ಆವೃತ್ತಿಯ ಮಾದರಿಯನ್ನು ಖಚಿತಪಡಿಸಿದೆ.

ಬಹುನಿರೀಕ್ಷಿತ ಐಕ್ಯೂ 12 5G ಬಿಡುಗಡೆ ದಿನಾಂಕ ಪ್ರಕಟ: ಧೂಳೆಬ್ಬಿಸುವುದು ಖಚಿತ
iqoo 12 5g
Follow us on

ಪ್ರಸಿದ್ಧ ಐಕ್ಯೂ ಕಂಪನಿ ಹೊಸ ಬಲಿಷ್ಠ ಸ್ಮಾರ್ಟ್​ಫೋನ್ ಮೂಲಕ ಭಾರತದಲ್ಲಿ ಧೂಳೆಬ್ಬಿಸಲು ತಯಾರಾಗಿದೆ. ಭಾರೀ ರೋಚಕತೆ ಸೃಷ್ಟಿಸಿರುವ ಬಹುನಿರೀಕ್ಷಿತ ಐಕ್ಯೂ 12 5G (iQOO 12 5G) ಫೋನಿನ ಬಿಡುಗಡೆ ದಿನಾಂಕವನ್ನು ಇದೀಗ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಐಕ್ಯೂ 11 ಉತ್ತರಾಧಿಕಾರಿಯಾದ ಐಕ್ಯೂ 12 ಡಿಸೆಂಬರ್ 12 ರಂದು ದೇಶದಲ್ಲಿ ಬಿಡುಗಡೆ ಆಗಲಿದೆ ಎಂದು ಕಂಪನಿ ತಿಳಿಸಿದೆ. ಈ ಫ್ಲ್ಯಾಗ್‌ಶಿಪ್ ಫೋನ್ ಅಮೆಜಾನ್ ಮೂಲಕ ಲಭ್ಯವಾಗಲಿದೆ ಎಂದು ಬ್ರ್ಯಾಂಡ್ ದೃಢಪಡಿಸಿದೆ. ಐಕ್ಯೂ 12 ಭಾರತದಲ್ಲಿ ಸ್ನಾಪ್​ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಮೊದಲ ಫೋನ್ ಆಗಿದೆ.

ಐಕ್ಯೂ 12 5G ಭಾರತದ ಬಿಡುಗಡೆ ವಿವರ:

ಐಕ್ಯೂ ಹಂಚಿಕೊಂಡ ಪೋಸ್ಟರ್ ಚಿತ್ರದ ಪ್ರಕಾರ, ಐಕ್ಯೂ 12 5G ಭಾರತದಲ್ಲಿ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಹಿಂಬದಿಯ ಕ್ಯಾಮೆರಾ ವಿನ್ಯಾಸವನ್ನು ತೋರಿಸುತ್ತದೆ. ಪೋಸ್ಟರ್ ಐಕ್ಯೂ 11 ಲೆಜೆಂಡ್‌ನಂತೆಯೇ BMW ಮೋಟಾರ್‌ಸ್ಪೋರ್ಟ್ ವಿಶೇಷ ಆವೃತ್ತಿಯ ಮಾದರಿಯನ್ನು ಖಚಿತಪಡಿಸಿದೆ. ಐಕ್ಯೂ 12 ಬಿಡುಗಡೆಯ ನಂತರ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮಾರಾಟವಾಗಲಿದೆ.

ಇದನ್ನೂ ಓದಿ
ಹೊಸ ವೇರಿಯೆಂಟ್​ನಲ್ಲಿ ಬಿಡುಗಡೆ ಆಯಿತು ಗೂಗಲ್ ಪಿಕ್ಸೆಲ್ 8 ಪ್ರೊ
ಒನ್​ಪ್ಲಸ್​ನಿಂದ ದೀಪಾವಳಿ ಆಫರ್: ಫೋನ್​ಗಳಿಗೆ ಎಲ್ಲಿಲ್ಲದ ಡಿಸ್ಕೌಂಟ್
ಅದ್ಭುತ ಕ್ಯಾಮೆರಾ: ರಿಯಲ್ ಮಿ GT 5 ಪ್ರೊ ಬಗ್ಗೆ ಹೊರಬಿತ್ತು ಅಚ್ಚರಿ ಸುದ್ದಿ
ಭಾರತದ ಬರೋಬ್ಬರಿ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್

ಐಕ್ಯೂ 12 5G ಬಿಡುಗಡೆ ಬಗ್ಗೆ ಕಂಪನಿ ಮಾಡಿರುವ ಟ್ವೀಟ್:

 

ಐಕ್ಯೂ 12 5G ಫೀಚರ್ಸ್ ಹೇಗಿರಬಹುದು?

ಡಿಸ್‌ಪ್ಲೇ : ಐಕ್ಯೂ 12 6.78-ಇಂಚಿನ 1.5K BOE OLED ಡಿಸ್‌ಪ್ಲೇ, 144Hz ವರೆಗೆ ರಿಫ್ರೆಶ್ ರೇಟ್ ಮತ್ತು 3000 nits ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿರುತ್ತದೆ.

ಮೊಬೈಲ್ ಬೇಕಿದ್ದರೆ ಇದೇ ತಿಂಗಳು ಖರೀದಿಸಿ: ಬಿಡುಗಡೆ ಆಗುತ್ತಿದೆ ಬರೋಬ್ಬರಿ 11 ಫೋನುಗಳು

ಚಿಪ್‌ಸೆಟ್ : ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಒಳಗೊಂಡಿರುವುದು ಖಚಿತವಾಗಿದೆ.

RAM ಮತ್ತು ಸಂಗ್ರಹಣೆ : ಈ ಫೋನ್ 16GB RAM ಮತ್ತು 1TB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಬರಲಿದೆ.

ಓಎಸ್ : ಒರಿಜಿನ್ ಓಎಸ್ 4.0 ಹೊಂದಿರುವ ಆಂಡ್ರಾಯ್ಡ್ 14 ಮೂಲಕ ರನ್ ಆಗಲಿದೆ.

ಕ್ಯಾಮೆರಾಗಳು : ಐಕ್ಯೂ 12 5G OIS ಜೊತೆಗೆ 50MP OmniVision OV50H ಪ್ರಾಥಮಿಕ ಸಂವೇದಕ, 50MP ಸ್ಯಾಮ್​ಸಂಗ್ JN1 ಅಲ್ಟ್ರಾವೈಡ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ ಎಂದು ವದಂತಿಗಳಿವೆ.

ಬ್ಯಾಟರಿ-ಚಾರ್ಜಿಂಗ್ : ಈ ಸ್ಮಾರ್ಟ್​ಫೋನ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರಬಹುದು.

ಇತ್ತೀಚೆಗೆ, ಐಕ್ಯೂ 12 ಪ್ರೊ ಅನ್ನು ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್, 16GB RAM ಮತ್ತು ಆಂಡ್ರಾಯ್ಡ್ 14 OS ನೊಂದಿಗೆ Geekbench ನಲ್ಲಿ ಗುರುತಿಸಲಾಗಿದೆ. ಐಕ್ಯೂ 11 ಪ್ರೊ ಭಾರತಕ್ಕೆ ಬಂದಿಲ್ಲವಾದ್ದರಿಂದ, ಬ್ರ್ಯಾಂಡ್ ಐಕ್ಯೂ 12 ಪ್ರೊ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಈ ಮಾದರಿಯು ಚೀನಾದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ