ನೀವು ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದ್ದರೆ, ಐಟೆಲ್ (Itel) ಕಂಪೆನಿಯು ಹೊಸ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. Itel A27 ಹೆಸರಿನ ಈ ಸ್ಮಾರ್ಟ್ಫೋನ್ನಲ್ಲಿ 5.45 ಇಂಚಿನ IPS ಡಿಸ್ಪ್ಲೇ ಮತ್ತು 4G ನೆಟ್ವರ್ಕ್ ಕನೆಕ್ಟಿವಿಟಿ ಕೂಡ ಇರುವುದು ವಿಶೇಷ. ಅಲ್ಲದೆ ಈ ಹೊಸ ಫೋನ್ ಆಂಡ್ರಾಯ್ಡ್ 11 (ಗೋ ಎಡಿಷನ್) ಮತ್ತು ಫೇಸ್ ಅನ್‌ಲಾಕ್ ಸಪೋರ್ಟ್, ಫಿಂಗರ್‌ಪ್ರಿಂಟ್ ಆಯ್ಕೆಯನ್ನೂ ಕೂಡ ಹೊಂದಿದೆ. ಐಟೆಲ್ ಎ27 ಸ್ಮಾರ್ಟ್ಫೋನ್ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಪ್ರೊಸೆಸರ್:
Itel A27 ಕ್ವಾಡ್-ಕೋರ್ 1.4GHz ಪ್ರೊಸೆಸರ್ ಹೊಂದಿದ್ದು, Android 11 (Go Edition)ನಲ್ಲಿ ಕಾರ್ಯ ನಿರ್ವಹಿಸಲಿದೆ.
ಡಿಸ್ಪ್ಲೇ:
Itel A27 ಸ್ಮಾರ್ಟ್ಫೋನ್ನಲ್ಲಿ 5.45-ಇಂಚಿನ FW + IPS ಡಿಸ್ಪ್ಲೇ ನೀಡಲಾಗಿದೆ.
ಸ್ಟೊರೇಜ್:
ಈ ಸ್ಮಾರ್ಟ್ಫೋನ್ನಲ್ಲಿ 2GB RAM ಹೊಂದಿದ್ದು, ಹಾಗೆಯೇ 32GB ಆಂತರಿಕ ಸಂಗ್ರಹಣೆ ಸ್ಥಳಾವಕಾಶ ಇದರಲ್ಲಿದೆ. ಅಲ್ಲದೆ ಇದನ್ನು ಮೈಕ್ರೊ SD ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ.
ಕ್ಯಾಮೆರಾ:
Itel A27 ಫೋನ್ನ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ AI ಕ್ಯಾಮೆರಾ ನೀಡಲಾಗಿದ್ದು, ಹಾಗೆಯೇ ಸೆಲ್ಫಿಗಾಗಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂಭಾಗದಲ್ಲಿದೆ.
ಬ್ಯಾಟರಿ:
ಈ ಸ್ಮಾರ್ಟ್ಫೋನ್ನಲ್ಲಿ 4,000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ದೀರ್ಘ ಸಮಯದವರೆಗೆ ಚಾರ್ಜ್ ಅನ್ನು ಉಳಿಸಲಿದೆ.
ಇತರೆ ವೈಶಿಷ್ಟ್ಯ:
Itel A27 ಸ್ಮಾರ್ಟ್ಫೋನ್ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದ್ದು, ಜೊತೆಗೆ ಫೇಸ್ ಅನ್‌ಲಾಕ್ ಸಪೋರ್ಟ್ ಕೂಡ ಮಾಡುತ್ತದೆ. ಹಾಗೆಯೇ ಇದು 4ಜಿ ನೆಟ್ವರ್ಕ್ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಬೆಲೆ:
itel A27 ಸ್ಮಾರ್ಟ್ಫೋನ್ ಅನ್ನು ಕೇವಲ 5,999 ರೂ. ಗಳಲ್ಲಿ ಪರಿಚಯಿಸಲಾಗಿದ್ದು, ಕ್ರಿಸ್ಟಲ್ ಬ್ಲೂ, ಡೀಲ್ ಗ್ರೇ ಮತ್ತು ಸಿಲ್ವರ್ ಪರ್ಪಲ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Itel A27 With 5.45-Inch Display, 4,000mAh Battery Launched in India: Price, Specifications)