ಯುಪಿಐ ಪಾವತಿ ಮಾರುಕಟ್ಟೆಯಲ್ಲಿ ಜಿಯೋ ಸ್ಫೋಟಕ ಪ್ರವೇಶ: ನಲುಗಿದ ಪೇಟಿಎಂ, ಫೋನ್ ಪೇ

|

Updated on: Mar 11, 2024 | 12:08 PM

ಜಿಯೋ ಪೇ ಆ್ಯಪ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಸೌಂಡ್‌ಬಾಕ್ಸ್ ಸಹಾಯದಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಜಿಯೋ ಸೌಂಡ್‌ಬಾಕ್ಸ್‌ನ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ನೀವು ಅದನ್ನು ಅಂಗಡಿಗಳಲ್ಲಿ ನೋಡಬಹುದು.

ಯುಪಿಐ ಪಾವತಿ ಮಾರುಕಟ್ಟೆಯಲ್ಲಿ ಜಿಯೋ ಸ್ಫೋಟಕ ಪ್ರವೇಶ: ನಲುಗಿದ ಪೇಟಿಎಂ, ಫೋನ್ ಪೇ
Jio Pay Sound Box
Follow us on

ಅತಿ ಕಡಿಮೆ ಅವಧಿಯಲ್ಲಿ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಒಡೆತನದ ಜಿಯೋ (Reliance JIO) ದೊಡ್ಡ ಹೆಸರು ಮಾಡಿದೆ. ಇದೀಗ ಜಿಯೋ ಯುಪಿಐ ಪಾವತಿ ಮಾರುಕಟ್ಟೆಗೆ ಅಬ್ಬರದ ಪ್ರವೇಶ ಮಾಡಲು ತಯಾರಿ ಆರಂಭಿಸಿದೆ. ಈವರೆಗೆ ನೀವು ಅನೇಕ ಅಂಗಡಿಗಳಲ್ಲಿ ಪೇಟಿಎಂ ಸೌಂಡ್‌ಬಾಕ್ಸ್ ಅನ್ನು ನೋಡಿರಬಹುದು. ನೀವು ಪಾವತಿ ಮಾಡಿದಾಗ, ಎಷ್ಟು ಹಣವನ್ನು ಪಾವತಿಸಲಾಗಿದೆ ಎಂದು ಇದು ಧ್ವನಿ ಪೆಟ್ಟಿಗೆ ಮೂಲಕ ನಿಮಗೆ ತಿಳಿಸುತ್ತದೆ. ಆದರೆ ಈಗ ಜಿಯೋ ಸಹ ಇದೇ ರೀತಿಯ ಧ್ವನಿ ಪೆಟ್ಟಿಗೆ ತರಲು ಯೋಜಿಸುತ್ತಿದೆ.

ಜಿಯೋ ಪೇ ಆ್ಯಪ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಸೌಂಡ್‌ಬಾಕ್ಸ್ ಸಹಾಯದಿಂದ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಜಿಯೋ ಸೌಂಡ್‌ಬಾಕ್ಸ್‌ನ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ನೀವು ಅದನ್ನು ಅಂಗಡಿಗಳಲ್ಲಿ ನೋಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಇದರೊಂದಿಗೆ ಮುಖೇಶ್ ಅಂಬಾನಿ ನೇರವಾಗಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಜೊತೆ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಅಂಗಡಿ ಮಾಲೀಕರಿಗೂ ಭರ್ಜರಿ ಆಫರ್ ಗಳನ್ನು ನೀಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನೀವು ವಾಟ್ಸ್​ಆ್ಯಪ್ ವೆಬ್ ಉಪಯೋಗಿಸುತ್ತಿದ್ದರೆ ಈ ಟ್ರಿಕ್ ತಿಳಿಯಲೇ ಬೇಕು

ಪೇಟಿಎಂ ಪಾವತಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ದೊಡ್ಡ ಮಾಹಿತಿಯು ಬೆಳಕಿಗೆ ಬಂದಿರುವ ಸಮಯದಲ್ಲಿ ಜಿಯೋದ ಈ ಯೋಜನೆಯು ಇತರ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸದ್ಯಕ್ಕೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಬ್ಯಾನ್ ಮಾಡಲಾಗಿದೆ. ಆದಾಗ್ಯೂ, ಇದು ಪೇಟಿಎಂ ಯುಪಿಐ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬೆಳವಣಿಗೆಯ ನಡುವೆ ಜಿಯೋ ತೆಗೆದುಕೊಂಡಿರುವ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಜಿಯೋದ ಈ ಸುದ್ದಿಗೆ ಬಗ್ಗೆ ಸೋರಿಕೆ ಮಾತ್ರ ಹೊರಹೊಮ್ಮಿದೆ. ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜಿಐಒದ ಈ ಸೇವೆ ವಾಯ್ಸ್ ಓವರ್ ಸಹಾಯದಿಂದ, ಪ್ರತಿಯೊಂದು ಮಾಹಿತಿಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಮಾರಾಟಗಾರ ಮತ್ತು ಸ್ವೀಕರಿಸುವವರಿಬ್ಬರೂ ಇದರಿಂದ ಸಹಾಯವನ್ನು ಪಡೆಯುತ್ತಾರೆ. ಅಂದರೆ ಎಷ್ಟು ರೂಪಾಯಿ ಪಾವತಿಯಾಗಿದೆ ಎಂದು ಅಂಗಡಿಯವನು ತನ್ನ ಮೊಬೈಲ್ ಅನ್ನು ಪದೇ ಪದೇ ಪರಿಶೀಲಿಸಬೇಕಾಗಿಲ್ಲ. ಇದರಿಂದ ಬಳಕೆದಾರರಿಗೆ ಹಾಗೂ ಅಂಗಡಿಕಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ