ರಿಲಯನ್ಸ್ ಜಿಯೋದಿಂದ “ಎಮರ್ಜೆನ್ಸಿ ಡೇಟಾ ಲೋನ್” ಆರಂಭಿಸಿದೆ. ಈ ಮೂಲಕ ಫೋನ್ ಬಳಕೆದಾರರಿಗೆ ತಕ್ಷಣದ ಡೇಟಾ ಸಾಲ ಒದಗಿಸಲಾಗುತ್ತದೆ. ಅದಕ್ಕೆ ಅವರು ನಂತರ ಪಾವತಿಸಿದರೆ ಆಯಿತು. ತೀರಾ ಈಚೆಗೆ ಆರಂಭವಾದ ಹಾಗೂ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಕಂಪೆನಿ ಜಿಯೋ. ಬಹಳ ಕಾರಣಗಳಿಗಾಗಿ ಬಳಕೆದಾರರು ತಕ್ಷಣ ಡೇಟಾ ಟಾಪ್ ಅಪ್ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅಂಥವರನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ಲ್ಯಾನ್ನಲ್ಲಿ ಜಿಯೋದ ಪ್ರೀಪೇಯ್ಡ್ ಬಳಕೆದಾರರು 5ರ ತನಕ ತುರ್ತು ಡೇಟಾ ಪ್ಯಾಕ್ ತಲಾ 1 GBಯದು (ಪ್ರತಿ ಪ್ಯಾಕ್ 11 ರೂ. ಮೌಲ್ಯದ್ದು) ಪಡೆಯಬಹುದು ಎಂದು ಮೂಲಗಳು ಹೇಳಿವೆ.
ಮೈ ಜಿಯೋ ಆ್ಯಪ್ ಮೂಲಕ ತುರ್ತು ಡೇಟಾ ಲೋನ್ ಪಡೆಯುವುದರ ಹಂತ ಹಂತವಾದ ವಿವರ ಹೀಗಿದೆ:
1. ಮೈ ಜಿಯೋ ಆ್ಯಪ್ ತೆರೆದು, ಪುಟದ ಎಡಕ್ಕೆ ಮೇಲ್ಭಾಗದಲ್ಲಿ ಇರುವ “Menu”ಗೆ ತೆರಳಬೇಕು.
2. ಮೊಬೈಲ್ ಸರ್ವೀಸಸ್ ಅಡಿಯಲ್ಲಿ “Emergency Data Loan” ಆಯ್ಕೆ ಮಾಡಬೇಕು.
3. ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್ ಮೇಲೆ “Proceed” ಎಂಬುದರ ಮೇಲೆ ಕ್ಲಿಕ್ ಮಾಡಿ.
4. Get emergency data ಆಯ್ಕೆಯನ್ನು ಮಾಡಿಕೊಳ್ಳಬೇಕು.
5. ಎಮರ್ಜೆನ್ಸಿ ಲೋನ್ ಬೆನಿಫಿಟ್ ಪಡೆಯಲು “Activate now” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
6. ಎಮರ್ಜೆನ್ಸಿ ಡೇಟಾ ಲೋನ್ ಅನುಕೂಲ ಆ್ಯಕ್ಟಿವೇಟ್ ಆಗುತ್ತದೆ.
ಯಾರಿಗೆ ಹೈಸ್ಪೀಡ್ ಡೇಟಾ ಲೋನ್ ಅಗತ್ಯ ಇರುವವರಿಗೆ ಒದಗಿಸುತ್ತದೆ. ಜಿಯೋ ಬಳಕೆದಾರರು ಈಗಾಗಲೇ ಉತ್ತಮ ನೆಟ್ವರ್ಕ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ವೇಗದ ಅನುಭವ ಪಡೆಯುತ್ತಿದ್ದಾರೆ. ಇದೀಗ ಬಳಕೆದಾರರ ಅಗತ್ಯವನ್ನು ತಿಳಿದು, ತಕ್ಷಣದ ಡೇಟಾ ಲೋನ್ ವ್ಯವಸ್ಥೆ ಮಾಡಿಕೊಡುತ್ತಿದೆ.
ಇದನ್ನೂ ಓದಿ: Airtel Black Vs Jio Fiber: ಏರ್ಟೆಲ್ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್ ಮಧ್ಯೆ ಭರ್ಜರಿ ಪೈಪೋಟಿ; ನಿಮ್ಮ ಆಯ್ಕೆ ಯಾವುದು?
(Reliance Jio emergency data loan launched for prepaid users. Here is an explainer)
Published On - 11:19 pm, Sun, 4 July 21