ಎರಡು ಹೊಸ ಬಂಪರ್ ಪ್ಲಾನ್ ಪರಿಚಯಿಸಿದ ಜಿಯೋ: ನೆಟ್​ಫ್ಲಿಕ್ಸ್ ಫ್ರೀ

|

Updated on: Aug 19, 2023 | 11:29 AM

Jio Netflix subscription Plan: ಜಿಯೋ ಪರಿಚಯಿಸಿರುವ ಮೊದಲ ಪ್ರಿಪೇಯ್ಡ್ ಯೋಜನೆಯು 1099 ರೂ. ಆಗಿದೆ. ಈ ಯೋಜನೆಯು ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಬೇಕು.

ಎರಡು ಹೊಸ ಬಂಪರ್ ಪ್ಲಾನ್ ಪರಿಚಯಿಸಿದ ಜಿಯೋ: ನೆಟ್​ಫ್ಲಿಕ್ಸ್ ಫ್ರೀ
Jio and Netflix
Follow us on

ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಮತ್ತಷ್ಟು ಹತ್ತಿರವಾಗುತ್ತಿದೆ. ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ನೀಡಿದೆ. ಅಷ್ಟೇ ಅಲ್ಲದೆ ನೆಟ್​ಫ್ಲಿಕ್ಸ್ ಚಂದಾದಾರಿಕೆ ಕೂಡ ನೀಡುತ್ತಿದೆ. ಜಿಯೋದಲ್ಲಿ ಈ ಹಿಂದೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಆಯ್ದ ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳೊಂದಿಗೆ ಮಾತ್ರ ಲಭ್ಯವಿತ್ತು.

ಇದೀಗ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ 400 ಮಿಲಿಯನ್‌ಗಿಂತಲೂ ಹೆಚ್ಚು ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಈ ಹೊಸ ಪ್ಲಾನ್ ಮೂಲಕ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪ್ರವೇಶಿಸಬಹುದು.

ಜಿಯೋ ಪರಿಚಯಿಸಿರುವ ಮೊದಲ ಪ್ರಿಪೇಯ್ಡ್ ಯೋಜನೆಯು 1099 ರೂ. ಆಗಿದೆ. ಈ ಯೋಜನೆಯು ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಬೇಕು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ನೀವು ಜಿಯೋ ವೆಲ್​ಕಮ್ ಆಫರ್​ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 2GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದನ್ನೂ ಓದಿ
Apple iPhone 13: ಆ್ಯಪಲ್ ಐಫೋನ್ 13 Flipkart ಭರ್ಜರಿ ಡಿಸ್ಕೌಂಟ್
OnePlus Ace 2 Pro: ಲೇಟೆಸ್ಟ್ ಒನ್​ಪ್ಲಸ್ ಸ್ಮಾರ್ಟ್​ಫೋನ್ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ
ಭಾರತದಲ್ಲೀಗ ಖರೀದಿಗೆ ಸಿಗುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು Z ಫ್ಲಿಪ್ 5: ಬೆಲೆ ಎಷ್ಟು?
ರೋಚಕತೆ ಸೃಷ್ಟಿಸಿದ ವಿವೋ V29e ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ?, ಏನಿದೆ ಫೀಚರ್ಸ್?

ವಾಟ್ಸ್​ಆ್ಯಪ್​ನಲ್ಲಿ ಬಂತು HD ಕ್ವಾಲಿಟಿ ಫೋಟೋ ಆಯ್ಕೆ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಎರಡನೇ ಪ್ಲಾನ್‌ 1499 ರೂ. ಆಗಿದೆ. ಇದುಕೂಡ ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಮೊಬೈಲ್‌ಗಳಿಗೆ ಸೀಮಿತವಾಗಿಲ್ಲ, ನೀವು ಇದನ್ನು ದೊಡ್ಡ ಪರದೆಯ ಮೇಲೆ ಸಹ ನೋಡಬಹುದು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ವೆಲ್​ಕಮ್ ಆಫರ್​ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 3GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಈ ಬಗ್ಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್ ಮಾತನಾಡಿದ, “ನಮ್ಮ ಬಳಕೆದಾರರಿಗೆ ಉನ್ನತ ದರ್ಜೆಯ ಸೇವೆಗಳನ್ನು ಒದಗಿಸುವಲ್ಲಿ ನಾವು ಮುಂದಿರುತ್ತೇವೆ. ನಮ್ಮ ಪ್ರಿಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸೇರಿಸುವುದು ಪ್ರಮುಖ ಗುರಿಯಾಗಿದೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗಿನ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ,” ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ ಎಪಿಎಸಿ ಪಾಲುದಾರಿಕೆಯ ಉಪಾಧ್ಯಕ್ಷ ಟೋನಿ ಝಮೆಕೋವ್ಸ್ಕಿ ಮಾತನಾಡಿ, “ಜಿಯೋ ಜೊತೆಗಿನ ನಮ್ಮ ಒಡನಾಟವನ್ನು ಮತ್ತಷ್ಟು ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ನಾವು ಭಾರತದಾದ್ಯಂತ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತೇವೆ. ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳನ್ನು ಯಶಸ್ವಿಯಾಗಿ ಪರಿಚಯಿಸಿದ್ದೇವೆ,” ಎಂದಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ