ಸೋಮವಾರ ರಾತ್ರಿ ಸುಮಾರು ಏಳು ಗಂಟೆಗಳ ಕಾಲ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗಳು ಕ್ರಾಶ್ ಆಗಿತ್ತು. ಆ ಬಳಿಕ ಇಂದು ಜಿಯೋ ಡೌನ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಜಿಯೋ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಸುಮಾರು 4,000 ಕ್ಕೂ ಹೆಚ್ಚು ವರದಿಗಳು ಬಂದಿವೆ. ಡೌನ್ ಡಿಟೆಕ್ಟರ್ ಸೈಟ್ ಕೂಡಾ ಜಿಯೋ ನೆಟ್ವರ್ಕ್ ಸಮಸ್ಯೆಗೆ ಸಂಬಂಧಿಸಿದಂತೆ ಬಳಕೆದಾರರ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ.
ಇಂದು (ಅಕ್ಟೋಬರ್ 6, ಬುಧವಾರ) ಬೆಳಿಗ್ಗೆ ಸುಮಾರು 9:30ರಿಂದ ಜಿಯೋ ನೆಟ್ವರ್ಕ್ ಸಮಸ್ಯೆ ಕಾಡತೊಡಗಿದೆ. ಬಳಿಕ ಸಮಯ ಸಾಗುತ್ತಿದ್ದಂತೆಯೇ ಸಮಸ್ಯೆ ಇನ್ನೂ ಉತ್ತುಂಗಕ್ಕೇರಿದೆ. ಡೌನ್ ಡಿಟೆಕ್ಟರ್ ವರದಿಗಳ ಪ್ರಕಾರ, ದೆಹಲಿ, ಮುಂಬೈ, ಬೆಂಗಳೂರು, ಇಂದೋರ್ ಮತ್ತು ರಾಯ್ಪುರದಲ್ಲಿ ಜಿಯೋ ನೆಟ್ವರ್ಕ್ ಡೌನ್ ಸಮಸ್ಯೆ ತೀವ್ರವಾಗಿದೆ. ಜಿಯೋ ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ, ಕಂಪನಿಯ ಟ್ವಿಟರ್ ಹ್ಯಾಂಡಲ್, ಸಂಪರ್ಕ ಸಮಸ್ಯೆಗಳು ಎದುರಾಗಿವೆ ಎಂದು ಬಳಕೆದಾರರಿಗೆ ಪ್ರತಿಕ್ರಿಯಿಸಿದೆ.
ಕೆಲವರು ಕರೆ ಮಾಡುವಾಗ ಸಮಸ್ಯೆಗಳಾಗಿರುವುದನ್ನು ತಿಳಿಸಿದ್ದಾರೆ, ಇನ್ನು ಕೆಲವರು ಇಂಟರ್ನೆಟ್ ಸಮಸ್ಯೆ ಆಗಿರುವುದನ್ನು ಹೇಳಿಕೊಂಡಿದ್ದಾರೆ. ಟ್ವಿಟರ್ನಲ್ಲಿ ರಿಲಾಯನ್ಸ್ ಜಿಯೋ ಟೆಲಿಕಾಂನ ಅನೇಕ ಬಳಕೆದಾರರು ಜಿಯೋ ಡೌನ್ ಕುರಿತಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ನೆಟ್ವರ್ಕ್ ಸ್ಥಗಿತದ ಕುರಿತಾಗಿ ದೂರಿದ್ದಾರೆ.
#jiodown both of my jio sim are not working @reliancejio @JioCare I’ve to write my exams resolve this asap pic.twitter.com/JnfGzA8sJS
— tweeting since’ 97 (@tweeting97) October 6, 2021
#jiodown
Jio was making fun of #WhatsAppDown and #instadown
Now it’s mark zukarbarg turn to take the revenge backno network from a hour #jio pic.twitter.com/2wYjyV5qOk
— Pooja mehta (@Poojamehta001) October 6, 2021
ಇದನ್ನೂ ಓದಿ:
Jio: IPL ಗಾಗಿ ಉಚಿತ ಹಾಟ್ಸ್ಟಾರ್ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
JIO: ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎರಡು ಆಕರ್ಷಕ ಪ್ಲಾನ್ ದಿಢೀರ್ ಸ್ಥಗಿತ
Published On - 12:54 pm, Wed, 6 October 21