ರಿಲಯನ್ಸ್ ಜಿಯೋದಿಂದ ರೂ. 98ರ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ತ್ತನ ಗ್ರಾಹಕರಿಗೆ ಮತ್ತೆ ಪರಿಚಯಿಸಿದೆ. 98 ರೂಪಾಯಿಯ ಪ್ಲಾನ್ ವರ್ಷದ ನಂತರ ಮತ್ತೆ ಬಂದಿದೆ. ಆದರೆ ವ್ಯಾಲಿಡಿಟಿ ಅವಧಿ ಈಗ ಕಡಿಮೆ ಆಗಿದೆ. 28 ದಿನಗಳ ಬದಲಿಗೆ 98 ರೂಪಾಯಿ ಪ್ಲಾನ್ 14 ದಿನಗಳ ಮಟ್ಟಿಗೆ ಮಾತ್ರ ಬರುತ್ತದೆ. ಸದ್ಯಕ್ಕೆ ಇರುವುದರಲ್ಲಿ ಇದು ಅಗ್ಗದ ಆಲ್ ಇನ್ ಒನ್ ಪ್ಲಾನ್ ಆಗಿದ್ದು, ದಿನಕ್ಕೆ 1.5GB 4G ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ 2020ರ ಮೇ ತಿಂಗಳಲ್ಲಿ ನಿಂತುಹೋಗಿತ್ತು. ಅದಕ್ಕೂ ಮುಂಚೆ ರೂ. 98ರ ಪ್ಲಾನ್ಗೆ 300 ಎಸ್ಸೆಮ್ಮೆಸ್ ಸಂದೇಶಗಳ ಜತೆ ಪರಿಷ್ಕೃತಗೊಂಡಿತ್ತು.
ಹೊಸ ರೂ. 98ರ ಪ್ಲಾನ್ನಲ್ಲಿ ಪಟ್ಟು 21GB ಡೇಟಾ, ಅಂದರೆ ದಿನಕ್ಕೆ ಗರಿಷ್ಠ ಮಿತು 1.5GBಯಂತೆ ಸಿಗುತ್ತದೆ. 14 ದಿನಗಳ ವ್ಯಾಲಿಡಿಟಿ ಇರುತ್ತದೆ. ಜಿಯೋದಿಂದ ಜಿಯೋ ಸಂಖ್ಯೆಗೆ ಅನಿಯಮಿತ ಕರೆ ಸೌಲಭ್ಯ ಇದೆ. ಜತೆಗೆ ಜಿಯೋ ಅಪ್ಲಿಕೇಷನ್ಗಳಿಗೆ ಚಂದಾದಾರಿಕೆ ಸಿಗುತ್ತದೆ. ಇದರಲ್ಲಿ ಜಿಯೋಟಿವಿ, ಜಿಯೋಸಿನಿಮಾ, ಜಿಯೋನ್ಯೂಸ್, ಜಿಯೋಸೆಕ್ಯೂರಿಟಿ ಮತ್ತು ಜಿಯೋಕ್ಲೌಡ್ ಒಳಗೊಂಡಿರುತ್ತದೆ.
ಯಾರಿಗೆ 98 ರೂಪಾಯಿ ಪ್ಲಾನ್ ಖರೀದಿ ಮಾಡಬೇಕಿರುತ್ತದೋ ಅವರು jio.com ವೆಬ್ಸೈಟ್ನಲ್ಲಿ ಮಾಡಬಹುದು. MyJio ಆ್ಯಪ್ ಮತ್ತು ಗೂಗಲ್ ಪೇ ಮತ್ತು ಪೇಟಿಎಂನಂಥ ಥರ್ಡ್ ಪಾರ್ಟಿ ಆ್ಯಪ್ ಮೂಲಕವೂ ಈ ಪ್ಲಾನ್ ಲಭ್ಯವಿದೆ. ಜಿಯೋದಿಂದ ಈಚೆಗೆ 300 ನಿಮಿಷಗಳ ಉಚಿತ ಕರೆ ಮತ್ತು ಬೈ-ಒನ್-ಗೆಟ್ ಒನ್ ರೀಚಾರ್ಜ್ ಆಫರ್ ಕೂಡ ನೀಡಲಾಗಿದೆ.
ಈಚೆಗೆ ಗೂಗಲ್ I/O 2021ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ ಮಾಡಿದ ಪ್ರಕಾರ, ಕೈಗೆಟುಕುವ ದರದ ಸ್ಮಾರ್ಟ್ಫೋನ್ ಮಾಡಲು ಗೂಗಲ್ ಜಿಯೋ ಜತೆಗೆ ಗೂಗಲ್ ಕೆಲಸ ಮಾಡುತ್ತಿದೆ. ಅಂದಹಾಗೆ ಕಳೆದ ವರ್ಷ ಗೂಗಲ್ನಿಂದ ಜಿಯೋ ಪ್ಲಾಟ್ಫಾರ್ಮ್ನಲ್ಲಿ ಶೇ 7.7ರಷ್ಟು ಪಾಲಿಗೆ 33,737 ಕೋಟಿ ರೂಪಾಯಿ ನೀಡಿ, ಖರೀದಿಸಿತ್ತು.
ಇದನ್ನೂ ಓದಿ: Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ
(Reliance Jio reintroduced Rs 98 all in all plan again. Here is the complete information about prepaid plan)