ನಿಮ್ಮ ಟ್ವಿಟ್ಟರ್​ ಖಾತೆಗೆ ಬ್ಲ್ಯೂ ಟಿಕ್ ಬ್ಯೂಟಿಯನ್ನು ಪಡೆಯುವುದು ಹೇಗೆ? ಮಾನದಂಡಗಳು ಏನೇನು? ಇಲ್ಲಿದೆ ವಿವರ

Twitter Blue Verification Process: ಫಾಲೋವರ್ಸ್​ ಸಂಖ್ಯೆ ಜಾಸ್ತಿಯಿದೆ ಎಂದು ಟ್ವಿಟ್ಟರ್​ ಕಂಪನಿ ಬ್ಲ್ಯೂ ಟಿಕ್ ಕೊಡುತ್ತದೆ ಅನ್ನುವ ಹಾಗಿಲ್ಲ. ವಿಶ್ವಾಸಾರ್ಹತೆಯೇ ಬ್ಲ್ಯೂ ಟಿಕ್ ಬ್ಯೂಟಿಯ ಬಂಡವಾಳ ಎಂಬುದು ಸ್ಪಷ್ಟ. ಬ್ಲ್ಯೂ ಟಿಕ್ ವೆರಿಫಿಕೇಶನ್ ಪ್ರಕ್ರಿಯೆಯ ಆರಂಭದಲ್ಲಿ ಬಹುತೇಕ ಎಲ್ಲವೂ ಸ್ವಯಂಚಾಲಿತವಾಗಿರುತ್ತದೆಯಾದರೂ ಅಂತಿಮವಾಗಿ ಒಪ್ಪಿಗೆ ಮುದ್ರೆ ಹಾಕುವುದಕ್ಕೆ ಟ್ವಿಟ್ಟರ್ ಕಂಪನಿಯಲ್ಲಿ ಪ್ರತ್ಯೇಕವಾದ ಉನ್ನತಾಧಿಕಾರಿಗಳ ತಂಡ ಇದೆ.

ನಿಮ್ಮ ಟ್ವಿಟ್ಟರ್​ ಖಾತೆಗೆ ಬ್ಲ್ಯೂ ಟಿಕ್ ಬ್ಯೂಟಿಯನ್ನು ಪಡೆಯುವುದು ಹೇಗೆ? ಮಾನದಂಡಗಳು ಏನೇನು? ಇಲ್ಲಿದೆ ವಿವರ
ನಿಮ್ಮ ಟ್ವಿಟ್ಟರ್​ ಖಾತೆಗೆ ಬ್ಲ್ಯೂ ಟಿಕ್ ಬ್ಯೂಟಿಯನ್ನು ಪಡೆಯುವುದು ಹೇಗೆ? ಮಾನದಂಡಗಳು ಏನೇನು? ಇಲ್ಲಿದೆ ವಿವರ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on: Jun 02, 2021 | 4:08 PM

ಟ್ವಿಟ್ಟರ್​ ಲೋಕದಲ್ಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಹರಿದಾಡಿದ್ದೇ ಆದರೆ ತಕ್ಷಣ ನಿಮಗೆ ಅಲ್ಲಿ ಬೇಕು ಅನ್ನಿಸುವುದು ನನ್ನ ಖಾತೆಗೂ ಒಂದು ಬ್ಲ್ಯೂ ಬ್ಯಾಡ್ಜ್​ ಇದ್ದರೆ ಹೇಗೆ ಎಂಬ ಬಯಕೆ. ಇದು ನಿಜಕ್ಕೂ ಬಯಕೆಯೇ.. ಆದರೆ ಅಷ್ಟು ಸುಲಭವಾಗಿ ಕೈಗೂಡುವುದಿಲ್ಲ. ಮೊದಮೊದಲು ನೇರವಾಗಿ, ಖಾಸಗಿಯಾಗಿ ಡೈರೆಕ್ಟ್​ ಮೆಸೇಜ್​ (ಡಿಎಂ) ಮೂಲಕ ಟ್ವಿಟ್ಟರ್​ ಕಂಪನಿಯನ್ನೇ ಕೇಳುತ್ತೀರಿ. ಹೀಗ್ಹೀಗೆ ನನ್ನ ಖಾತೆ ಚಾಲ್ತಿಯಲ್ಲಿದೆ. ನಾನು ಪ್ರಭಾವಿ ಅಥವಾ ನಾನೂ ಪ್ರಭಾವಿ ಅನ್ನಿಸಿಕೊಳ್ಳಬೇಕು. ನನ್ನ ಖಾತೆಗೆ blue badge ಎಂಬ ಹಣೆಪಟ್ಟಿ ಕಟ್ಟಿ ಎಂದು ಕೇಳುತ್ತೀರಿ. ಇಲ್ಲಾಂದ್ರೆ ಆತ್ಮೀಯ ವಲಯದಲ್ಲಿ ಅಥವಾ ಅಷ್ಟೋ ಇಷ್ಟೋ ಸಾಮಾಜಿಕ ಜಾಲತಾಣದ ಬಗ್ಗೆ ತಿಳಿವಳಿಕೆ ಇರುವವರನ್ನು ನೋಡಿ ಸ್ವಲ್ಪ ನನ್ನ ಅಕೌಂಟ್​ಗೂ ಬ್ಲ್ಯೂ ಟಿಕ್​ ಟಿಕ್​ ಅನ್ನಿಸಿ ಅಂತಾ (How do I apply? Kindly verify) ಕೇಳುತ್ತಿರೀರಿ ಅಲ್ವಾ? ಆದರೆ ಈಗ ಹಾಗಿಲ್ಲ. ನೇರವಾಗಿ ಟ್ವಿಟ್ಟರ್​ ಕಂಪನಿಯೇ ತಾಜಾ ಆಗಿ ಬ್ಲ್ಯೂ ಟಿಕ್​ ಖಾತೆ (blue verification badge) ಹೊಂದುವ ಬಗ್ಗೆ ಇಂದು ಮಾಹಿತಿ ಹಂಚಿಕೊಂಡಿದೆ. ಕುತೂಹಲದ ಸಂಗತಿಯೆಂದ್ರೆ ಈ ಬ್ಲ್ಯೂ ಟಿಕ್ ಖಾತೆ ಪಡೆಯುವುದಕ್ಕೆ ಈ ಪಾಟಿ ಡಿಮ್ಯಾಂಡ್​ ಇದ್ದರೂ ಟ್ವಿಟ್ಟರ್​ ಕಂಪನಿ ಈ ಟ್ವಿಟ್ಟರ್​ ವೆರಿಫಿಕೇಶನ್​ ಪ್ರೋಸಸ್​ ಅನ್ನು 3 ವರ್ಷಗಳಿಂದ ನಿಲ್ಲಿಸಿತ್ತು. ತಡವೇಕೆ.. ನಿಮ್ಮ ಖಾತೆಗೆ ಬ್ಲ್ಯೂ ಟಿಕ್ ಪಡೆಯುವುದಕ್ಕೆ ಒಂದು ರಿಕ್ವೆಸ್ಟ್​ ಕಳುಹಿಸಿ ಅನ್ನುತ್ತಿದೆ ಟ್ವಿಟ್ಟರ್​ ಕಂಪನಿ. ತಡವೇಕೆ… ನೀವೂ ರಿಕ್ವೆಸ್ಟ್​ ಕಳುಹಿಸಿ! ಆದರೆ ಅದಕ್ಕೂ ಮುನ್ನ ನೀತಿ ನಿಯಮಗಳು, ಮಾರ್ಗಸೂಚಿಗಳು ಏನು ಅನ್ನೋದನ್ನು ಪರಿಶೀಲಿಸೋಣ.

ಪ್ರಸಿದ್ಧ ವಿಜ್ಞಾನಿಗಳು, ಶಿಕ್ಷಣತಜ್ಞರು, ಧಾರ್ಮಿಕ ನಾಯಕರು, ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸುದ್ದಿ ಸಂಸ್ಥೆಗಳು, ಪತ್ರಕರ್ತರು, ಕ್ರೀಡಾಪಟುಗಳು, ಬ್ರ್ಯಾಂಡ್​​ಗಳು, ಸಮಾಜದಲ್ಲಿನ ಪ್ರಭಾವಿಗಳು … ಹೀಗೆ ಖ್ಯಾತ ನಾಮರು ಟ್ವಿಟ್ಟರ್​ ಸಾಮಾಜಿಕ ಜಾಲತಾಣದಲ್ಲಿ ಬ್ಲ್ಯೂ ಟಿಕ್ ಹಣೆಪಟ್ಟಿಯೊಂದಿಗೆ ಸಕ್ರಿಯರಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ನೂರಾರು ಖ್ಯಾತ ನಾಮರ ಖಾತೆಗಳನ್ನು ಟ್ವಿಟ್ಟರ್​ ಕಂಪನಿಯೇ ಬ್ಲ್ಯೂ ಟಿಕ್ ನಿಂದ (blue verified badge) ಅನುಮೋದಿಸುತ್ತೆ. ಆ ಖಾತೆಗೆ ಒಂದು ಅಧಿಕೃತ ಮೊಹರು ಹಾಕುತ್ತದೆ. ಅಂದರೆ ಅದನ್ನು ಬಳಸುತ್ತಿರುವುವವರು ಖಾತೆಯಲ್ಲಿರುವವರೇ ಹೊರತು… ಬೇರೆ ಯಾವುದೋ ಬೇನಾಮಿಗಳು ಅಲ್ಲ. ಹಾಗಾಗಿ ಇದು ಅಧಿಕೃತ ಎಂದು ನೀಲಿ ಟಿಕ್​ ಮಾರ್ಕ್​ನೊಂದಿಗೆ ಘೋಷಿಸುತ್ತದೆ. ಇದಕ್ಕೆ ಟ್ವಿಟ್ಟರ್​ ಕಂಪನಿ ಅನೇಕ ವಿಭಿನ್ನ ನೀತಿಗಳನ್ನು ಅಳವಡಿಸಿಕೊಂಡಿದೆ. ಇದಂ ಇತ್ಥಂ ಎಂದು ಇದು ಹೀಗೆ ಹೀಗೆ ಎಂದು ಖಚಿತವಾಗಿ ಸೀಮಿತಗೊಂಡಿಲ್ಲ. ಕೆಲವರಿಗೆ ರಿಯಾಯಿತಿ, ವಿನಾಯಿತಿಗಳು ಇದ್ದರೆ ಇನ್ನು ಕೆಲವರಿಗೆ ಸ್ಟ್ರಿಕ್ಟ್​ ಆದ ಮಾರ್ಗಸೂಚಿಗಳ ಪಾಲನೆ ಅನಿವಾರ್ಯವಾಗಿರುತ್ತದೆ.

Notable, Authentic and Active ಮಂತ್ರವೇ ಮಾನದಂಡ

* ಗಮನಾರ್ಹ ಅಂದ್ರೆ Notable ಖಾತೆಗಳು ಬ್ಲ್ಯೂ ಟಿಕ್ ಹಣೆಪಟ್ಟಿ ಬಯಸಿದ್ದೇ ಆದಲ್ಲಿ ಅದರ ವಿಶ್ವಾಸಾರ್ಹತೆಗಾಗಿ ಅದನ್ನು ಸ್ಥಾಪಿತ ಸಂಸ್ಥೆ, ಕಂಪನಿ, ಒಕ್ಕೂಟದಿಂದ ಅಧಿಕೃತವಾಗಿ ಅನುಮೋದನೆಗೊಳ್ಳಬೇಕು.

* ಖಾತೆದಾರರ ಹೆಸರು, ಸಂಸ್ಥೆಯ ಹೆಸರು, ಪ್ರೊಫೈಲ್ ಪಿಕ್ಚರ್​, ಕ್ಲುಪ್ತ ವೈಯಕ್ತಿಕ ಮಾಹಿತಿ, ಮತ್ತಿತರ ಸಣ್ಣ ವಿವರ ಇದ್ದರೆ ಅದು ಬ್ಲ್ಯೂ ಟಿಕ್ ರಿಕ್ವೆಸ್ಟ್​ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

* ಇನ್ನು ಸಕ್ರಿಯ ಖಾತೆ ಅಂದ್ರೆ Active ಖಾತೆ ವಿಷಯಕ್ಕೆ ಸಂಬಂಧಪಟ್ಟಂತೆ ಬ್ಲ್ಯೂ ಟಿಕ್ ರಿಕ್ವೆಸ್ಟ್​ ಸಲ್ಲಿಸಿರುವ ಖಾತೆಯು ಕಳೆದ 6 ತಿಂಗಳಿಂದ ಚಾಲ್ತಿಯಲ್ಲಿ ಇರಬೇಕು. ಜೊತೆಗೆ ಆ ಆರು ತಿಂಗಳಲ್ಲಿ ಟ್ವಿಟ್ಟರ್​ ಕಂಪನಿಯ ಯಾವುದೇ ಮಾರ್ಗಸೂಚಿಯನ್ನು ಉಲ್ಲಂಘಿಸಿರಬಾರದು.

* ಅರ್ಹ ಖಾತೆದಾರರು ಅಧಿಕೃತ ಇ-ಮೇಲ್​ ಮತ್ತು ಮೊಬೈಲ್​ ಸಂಖ್ಯೆಯನ್ನು ಸಲ್ಲಿಸಬೇಕು.

* ಪ್ರಮಾಣೀಕೃತ ಜನ್ಮ ದಿನಾಂಕ ಒದಗಿಸಬೇಕು.

* ಮುಖ್ಯವಾಗಿ ನಿಮ್ಮ ಖಾತೆಯನ್ನು Public ಮಾಡಿರಬೇಕು.

* ಮೇಲಿನ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದು, ನಿಮ್ಮ ಖಾತೆ ಬ್ಲ್ಯೂ ಟಿಕ್​ಗೆ ಅರ್ಹ ಎಂದು ನಿಮಗೆ ಅನ್ನಿಸಿದಲ್ಲಿ ನೀವು  ರಿಕ್ವೆಸ್ಟ್​ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ನೋಡಿ: https://help.twitter.com/en/managing-your-account/about-twitter-verified-accounts

ಒಮ್ಮೆ ರಿಕ್ವೆಸ್ಟ್​ ಸಲ್ಲಿಸಿದ ಬಳಿಕ ನಿಮ್ಮ ಖಾತೆಯ ಮೇಲೆ ಬ್ಲ್ಯೂ ಟಿಕ್ ವೆರಿಫಿಕೇಶನ್​ ಕಾಣಿಸಿಕೊಂಡರೆ ಅದನ್ನು ಕ್ಲಿಕ್​ ಮಾಡಿ ನೀವು ಅದನ್ನು ಅಧಿಕೃತವಾಗಿ ಬಳಸಬಹುದು/ ಘೋಷಿಸಬಹುದು.

ನಿಮ್ಮ ಖಾತೆಗೆ ವೆರಿಫಿಕೇಶನ್​ ಆಗಬೇಕೆಂದ್ರೆ 1 ವಾರದಿಂದ 1 ತಿಂಗಳು ಹಿಡಿಸಬಹುದು. ಇ-ಮೇಲ್ ಮೂಲಕ ಅಧಿಕೃತವಾಗಿಯೇ ನಿಮಗೆ ಸಂದೇಶ ಬರುತ್ತೆ. ಅದಕ್ಕೂ ಮೊದಲು ಟ್ವಿಟ್ಟರ್​ ಕಂಪನಿಯೇ ನೇರವಾಗಿ ನಿಮ್ಮ ಖಾತೆಯ ಮೇಲೆ ಬ್ಲ್ಯೂ ಟಿಕ್ ಬ್ಯೂಟಿಯನ್ನು ದಯಪಾಲಿಸಿರುತ್ತದೆ.

ಹಾಗಂತ ಫಾಲೋವರ್ಸ್​ ಸಂಖ್ಯೆ ಜಾಸ್ತಿಯಿದೆ ಎಂದು ಟ್ವಿಟ್ಟರ್​ ಕಂಪನಿ ಬ್ಲ್ಯೂ ಟಿಕ್ ಕೊಡುತ್ತದೆ ಅನ್ನುವ ಹಾಗಿಲ್ಲ. ವಿಶ್ವಾಸಾರ್ಹತೆಯೇ ಬ್ಲ್ಯೂ ಟಿಕ್ ಬ್ಯೂಟಿಯ ಬಂಡವಾಳ ಎಂಬುದು ಸ್ಪಷ್ಟ. ಬ್ಲ್ಯೂ ಟಿಕ್ ವೆರಿಫಿಕೇಶನ್ ಪ್ರಕ್ರಿಯೆಯ ಆರಂಭದಲ್ಲಿ ಬಹುತೇಕ ಎಲ್ಲವೂ ಸ್ವಯಂಚಾಲಿತವಾಗಿರುತ್ತದೆಯಾದರೂ ಅಂತಿಮವಾಗಿ ಒಪ್ಪಿಗೆ ಮುದ್ರೆ ಹಾಕುವುದಕ್ಕೆ ಟ್ವಿಟ್ಟರ್ ಕಂಪನಿಯಲ್ಲಿ ಪ್ರತ್ಯೇಕವಾದ ಉನ್ನತಾಧಿಕಾರಿಗಳ ತಂಡ ಇದೆ.

(Twitter blue Verification Process Resumes How to Get the Blue Tick or blue badge what is verification request)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ