Jio Recharge Plan: ಮತ್ತೆ ಬಂತು ಜಿಯೋದಿಂದ ಅಗ್ಗದ 98 ರೂ. ಪ್ರೀಪೇಯ್ಡ್ ಪ್ಲಾನ್; ಏನೆಲ್ಲ ವೈಶಿಷ್ಟ್ಯ?

Reliance Jio Offers: ರಿಲಯನ್ಸ್ ಜಿಯೋದಿಂದ 98 ರೂಪಾಯಿಗಳ ಆಲ್ ಇನ್ ಆಲ್ ಪ್ಲಾನ್ ಮತ್ತೆ ಪರಿಚಯಿಸಲಾಗಿದೆ. ಆದರೆ ಈ ಸಲ ಒಂದು ಬದಲಾವಣೆ ಆಗಿದೆ. ಅದು ವ್ಯಾಲಿಡಿಟಿ.

Jio Recharge Plan: ಮತ್ತೆ ಬಂತು ಜಿಯೋದಿಂದ ಅಗ್ಗದ 98 ರೂ. ಪ್ರೀಪೇಯ್ಡ್ ಪ್ಲಾನ್; ಏನೆಲ್ಲ ವೈಶಿಷ್ಟ್ಯ?
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Follow us
Srinivas Mata
|

Updated on: Jun 01, 2021 | 4:21 PM

ರಿಲಯನ್ಸ್ ಜಿಯೋದಿಂದ ರೂ. 98ರ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ತ್ತನ ಗ್ರಾಹಕರಿಗೆ ಮತ್ತೆ ಪರಿಚಯಿಸಿದೆ. 98 ರೂಪಾಯಿಯ ಪ್ಲಾನ್ ವರ್ಷದ ನಂತರ ಮತ್ತೆ ಬಂದಿದೆ. ಆದರೆ ವ್ಯಾಲಿಡಿಟಿ ಅವಧಿ ಈಗ ಕಡಿಮೆ ಆಗಿದೆ. 28 ದಿನಗಳ ಬದಲಿಗೆ 98 ರೂಪಾಯಿ ಪ್ಲಾನ್ 14 ದಿನಗಳ ಮಟ್ಟಿಗೆ ಮಾತ್ರ ಬರುತ್ತದೆ. ಸದ್ಯಕ್ಕೆ ಇರುವುದರಲ್ಲಿ ಇದು ಅಗ್ಗದ ಆಲ್ ಇನ್ ಒನ್ ಪ್ಲಾನ್ ಆಗಿದ್ದು, ದಿನಕ್ಕೆ 1.5GB 4G ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ 2020ರ ಮೇ ತಿಂಗಳಲ್ಲಿ ನಿಂತುಹೋಗಿತ್ತು. ಅದಕ್ಕೂ ಮುಂಚೆ ರೂ. 98ರ ಪ್ಲಾನ್​ಗೆ 300 ಎಸ್ಸೆಮ್ಮೆಸ್ ಸಂದೇಶಗಳ ಜತೆ ಪರಿಷ್ಕೃತಗೊಂಡಿತ್ತು.

ಹೊಸ ರೂ. 98ರ ಪ್ಲಾನ್​ನಲ್ಲಿ ಪಟ್ಟು 21GB ಡೇಟಾ, ಅಂದರೆ ದಿನಕ್ಕೆ ಗರಿಷ್ಠ ಮಿತು 1.5GBಯಂತೆ ಸಿಗುತ್ತದೆ. 14 ದಿನಗಳ ವ್ಯಾಲಿಡಿಟಿ ಇರುತ್ತದೆ. ಜಿಯೋದಿಂದ ಜಿಯೋ ಸಂಖ್ಯೆಗೆ ಅನಿಯಮಿತ ಕರೆ ಸೌಲಭ್ಯ ಇದೆ. ಜತೆಗೆ ಜಿಯೋ ಅಪ್ಲಿಕೇಷನ್​ಗಳಿಗೆ ಚಂದಾದಾರಿಕೆ ಸಿಗುತ್ತದೆ. ಇದರಲ್ಲಿ ಜಿಯೋಟಿವಿ, ಜಿಯೋಸಿನಿಮಾ, ಜಿಯೋನ್ಯೂಸ್, ಜಿಯೋಸೆಕ್ಯೂರಿಟಿ ಮತ್ತು ಜಿಯೋಕ್ಲೌಡ್ ಒಳಗೊಂಡಿರುತ್ತದೆ.

ಯಾರಿಗೆ 98 ರೂಪಾಯಿ ಪ್ಲಾನ್ ಖರೀದಿ ಮಾಡಬೇಕಿರುತ್ತದೋ ಅವರು jio.com ವೆಬ್​ಸೈಟ್​ನಲ್ಲಿ ಮಾಡಬಹುದು. MyJio ಆ್ಯಪ್ ಮತ್ತು ಗೂಗಲ್ ಪೇ ಮತ್ತು ಪೇಟಿಎಂನಂಥ ಥರ್ಡ್ ಪಾರ್ಟಿ ಆ್ಯಪ್ ಮೂಲಕವೂ ಈ ಪ್ಲಾನ್ ಲಭ್ಯವಿದೆ. ಜಿಯೋದಿಂದ ಈಚೆಗೆ 300 ನಿಮಿಷಗಳ ಉಚಿತ ಕರೆ ಮತ್ತು ಬೈ-ಒನ್-ಗೆಟ್ ಒನ್ ರೀಚಾರ್ಜ್ ಆಫರ್ ಕೂಡ ನೀಡಲಾಗಿದೆ.

ಈಚೆಗೆ ಗೂಗಲ್ I/O 2021ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ ಮಾಡಿದ ಪ್ರಕಾರ, ಕೈಗೆಟುಕುವ ದರದ ಸ್ಮಾರ್ಟ್​ಫೋನ್ ಮಾಡಲು ಗೂಗಲ್ ಜಿಯೋ ಜತೆಗೆ ಗೂಗಲ್ ಕೆಲಸ ಮಾಡುತ್ತಿದೆ. ಅಂದಹಾಗೆ ಕಳೆದ ವರ್ಷ ಗೂಗಲ್​ನಿಂದ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಶೇ 7.7ರಷ್ಟು ಪಾಲಿಗೆ 33,737 ಕೋಟಿ ರೂಪಾಯಿ ನೀಡಿ, ಖರೀದಿಸಿತ್ತು.

ಇದನ್ನೂ ಓದಿ: Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ

(Reliance Jio reintroduced Rs 98 all in all plan again. Here is the complete information about prepaid plan)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ