Poco 5G Mobile Phone: ಪೋಕೋ M3 ಪ್ರೋ 5G ಜೂನ್ 8ಕ್ಕೆ ಫ್ಲಿಪ್ಕಾರ್ಟ್ನಲ್ಲಿ ಲಭ್ಯ; ಬಣ್ಣ, ಬೆಲೆ ಇತರ ಮಾಹಿತಿ
ಪೋಕೋ (Poco) M3 ಪ್ರೋ 5G ಮೊಬೈಲ್ ಫೋನ್ 2021ರ ಜೂನ್ 8ನೇ ತಾರೀಕಿನಂದು ಬಿಡುಗಡೆ ಆಗಲಿದೆ. ಈ ಮೊಬೈಲ್ ಫೋನ್ ವಾರದ ಹಿಂದೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ಫೋನ್ನಂತೆಯೇ ಇರುತ್ತದೆ.
ಪೋಕೋ (Poco) M3 ಪ್ರೋ 5G ಮೊಬೈಲ್ ಫೋನ್ 2021ರ ಜೂನ್ 8ನೇ ತಾರೀಕಿನಂದು ಬಿಡುಗಡೆ ಆಗಲಿದೆ ಎಂದು ಕಂಪೆನಿ ಖಾತ್ರಿಪಡಿಸಿದೆ. ಈ ಮೊಬೈಲ್ ಫೋನ್ ಜಾಗತಿಕ ಮಟ್ಟದಲ್ಲಿ ಈಗಾಗಲೇ ಬಿಡುಗಡೆ ಆಗಿದೆ. ಮುಂದಿನ ವಾರ ಭಾರತದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಪೋಕೋದಿಂದ ಬಿಡುಗಡೆ ಆಗಲಿರುವ M3 ಪ್ರೋ 5G ಮೊಬೈಲ್ ಫೋನ್ ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ದೊರೆಯಲಿದೆ. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಪೋಕೋ M3ಗೆ ಈಗಿನದು ಅಪ್ಗ್ರೇಡೆಡ್ ಮಾಡೆಲ್. ಕಂಪೆನಿಯು ಹೇಳುವ ಪ್ರಕಾರ, M3 ಪ್ರೋ 5G ಮೊಬೈಲ್ ಫೋನ್ ಭಾರತದ ಪೋರ್ಟ್ಫೋಲಿಯೋದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ 5G ಫೋನ್ ಇದಾಗಿದೆ. ಕಂಪೆನಿ ಟ್ವೀಟ್ ಮಾಡಿರುವಂತೆ, M3 ಪ್ರೋ 5G ಮೊಬೈಲ್ ಫೋನ್ ಜೂನ್ 8ನೇ ತಾರೀಕಿನಂದು ಬಿಡುಗಡೆ ಆಗಲಿದೆ.
ಈ ಬಗ್ಗೆ ಫ್ಲಿಪ್ಕಾರ್ಟ್ ಆ್ಯಪ್ನಲ್ಲಿ ಖಾತ್ರಿ ಪಡಿಸಿದೆ. ಜಾಗತಿಕ ಮಟ್ಟದಲ್ಲಿ ಪೋಕೋ M3 ಪ್ರೋ 5G ಮೊಬೈಲ್ ಫೋನ್ 159 ಯುರೋ (ಅಂದಾಜು ರೂ. 14,100) ಇದೆ. ಅದು 4GB+64GB ಸಂಗ್ರಹ ಸಾಮರ್ಥ್ಯದೊಂದಿಗೆ ಬರುತ್ತದೆ. ಮತ್ತೊಂದು ಫೋನಿನ ಬೆಲೆ 179 ಯುರೋ (ಅಂದಾಜು ರೂ. 15,900) ಆಗುತ್ತದೆ. 6GB+128GB ಸಂಗ್ರಹ ಸಾಮರ್ಥ್ಯ ಇರುತ್ತದೆ. ಈ ಫೋನ್ ಮೂರು ಬಣ್ಣಗಳಲ್ಲಿ ಬರುತ್ತದೆ. ಕೂಲ್ ಬ್ಲ್ಯೂ, ಪವರ್ ಬ್ಲ್ಯಾಕ್ ಮತ್ತು ಪೋಕೋ ಹಳದಿಯಲ್ಲಿ ಬರುತ್ತದೆ. ಭಾರತದ ಮಾರುಕಟ್ಟೆಯಲ್ಲೂ ಇದೇ ದರ ಹಾಗೂ ಬಣ್ಣಗಳಲ್ಲಿ ದೊರೆಯುತ್ತದೆ.
ಪೋಕೋ M3 ಪ್ರೋ 5G ಮೊಬೈಲ್ ಫೋನ್ ವೈಶಿಷ್ಟ್ಯಗಳು ಪೋಕೋ M3 ಪ್ರೋ 5G ಮೊಬೈಲ್ ಫೋನ್ ವಾರದ ಹಿಂದೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ಫೋನ್ನಂತೆಯೇ ಇರುತ್ತದೆ. ಆಂಡ್ರಾಯಿಡ್ 11 ಆಧಾರಿತ MIUI 12ನಲ್ಲಿ ನಡೆಯುತ್ತದೆ. 6.5 ಇಂಚು ಫುಲ್ ಎಚ್ಡಿ+ (1080X2400 ಪಿಕ್ಸೆಲ್ಸ್) ಹೋಲ್- ಪಂಚ್ ಡಿಸ್ಪ್ಲೇ ಜತೆಗೆ 90Hz ರಿಫ್ರೆಷ್ ದರದೊಂದಿಗೆ ಬರುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC, 6GB RAM ಮತ್ತು ಆಂತರಿಕ ಸಂಗ್ರಹ 128GB ತನಕ ಇರುತ್ತದೆ. ಪೋಕೋ M3 ಪ್ರೋ 5G ಮೊಬೈಲ್ ಫೋನ್ ಟ್ರಿಪಲ್ ಹಿಂಬದಿ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮೈಕ್ರೋ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಬರುತ್ತದೆ.
ಅಂದಹಾಗೆ ಈ ಫೋನ್ 5000 mAh ಬ್ಯಾಟರಿಯೊಂದಿಗೆ ಇದೆ. 18W ಫಾಸ್ಟ್ ಚಾರ್ಜಿಂಗ್ನೊಂದಿಗೆ ಇರುತ್ತದೆ. ಬದಿಗೆ ಫಿಂಗರ್ಪ್ರಿಂಟ್ ಸೆನ್ಸರ್ ಬರುತ್ತದೆ. ಜತೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ಲಾಕ್ ಸಪೋರ್ಟ್ ಇದ್ದು, ಎರಡು ಸಿಮ್ ಸ್ಲಾಟ್, 5G, ಎನ್ಎಫ್ಸಿ, ಡ್ಯುಯಲ್ ಬ್ಯಾಂಡ್ ವೈಫೈ, ಬ್ಲ್ಯೂಟೂಥ್ v5.1, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್ ಮತ್ತು ಯುಎಸ್ಬಿ ಟೈಪ್- ಸಿ ಪೋರ್ಟ್ ಒಳಗೊಂಡಿದೆ.
ಇದನ್ನೂ ಓದಿ: Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್ ಫೋನ್ಗಳು ಸಸ್ತಾ
(Poco company new M3 pro 5G mobile phone will launch in India on June 8th, 2021. Here is the details)