Updated on: Aug 16, 2021 | 6:36 PM
ಜನಪ್ರಿಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಒಂದು ವರ್ಷದ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹಲವು ಕೊಡುಗೆಗಳನ್ನು ಜಿಯೋ ನೀಡುತ್ತಿದ್ದು, ಅದರ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಕೂಡ ಸಿಗಲಿದೆ. ಜಿಯೋ ಒನ್ ಇಯರ್ ಪ್ಲ್ಯಾನ್ನ ವಿಶೇಷ ಕೊಡುಗೆಗಳೇನು ನೋಡೋಣ.
ಜಿಯೋ 199 ರೂ. ಪ್ಲ್ಯಾನ್: ಜಿಯೋ ಪರಿಚಯಿಸಿರುವ 199 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಅದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯಲಿದೆ. ಇನ್ನು ಜಿಯೋ ಆ್ಯಪ್‌ಗಳ ಚಂದಾದಾರಿಕೆ ಕೂಡ ಸಿಗಲಿದೆ. ಈ ಪ್ಲ್ಯಾನ್ನ ವಾಲಿಟಿಡಿ 28 ದಿನಗಳು ಮಾತ್ರ.
ಜಿಯೋ 399 ರೂ. ಪ್ಲ್ಯಾನ್: ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಸಹ ಪರಿಚಯಿಸಿದ್ದು, ಈ ಪ್ಲ್ಯಾನ್ನಲ್ಲೂ 1.5 ಜಿಬಿ ದೈನಂದಿನ ಡೇಟಾ ದೊರೆಯಲಿದೆ. ಅದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಜಿಯೋ ಆಪ್‌ಗಳ ಚಂದಾದಾರಿಕೆ ದೊರೆಯಲಿದೆ. ಈ ಪ್ಲ್ಯಾನ್ನ ವಾಲಿಡಿಟಿ 56 ದಿನಗಳು.
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
ಜಿಯೋ 499 ರೂ: ಈ ರಿಚಾರ್ಜ್ ಪ್ಲ್ಯಾನ್ ಕಳೆದ ವರ್ಷ ಪರಿಚಯಿಸಿತ್ತು. ಇದನ್ನೇ ಈ ಸಲ ಕೂಡ ಮುಂದುವರೆಸಿದೆ. 28 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ನಲ್ಲಿ ಪ್ರತಿ ದಿನ 3GB ಡೇಟಾ ಹಾಗೂ ಅನಿಯಮಿತ ಕರೆ ಅವಕಾಶ ಸಿಗಲಿದೆ. ಇದೀಗ ಅದರ ಜೊತೆಗೆ 6GB ಬೋನಸ್ 4G ಡೇಟಾವನ್ನು ಕೂಡ ನೀಡುತ್ತಿದೆ. ಅದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಚಂದಾದಾರಿಕೆ ಸಿಗಲಿದೆ.
ಜಿಯೋ 999 ರೂ. ಯೋಜನೆಯಲ್ಲಿ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಕರೆಗಳು, ದಿನಕ್ಕೆ 3GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯುತ್ತೀರಿ. ಇದರ ವಾಲಿಡಿಟಿ 84 ದಿನಗಳು. ಇನ್ನು ದೈನಂದಿನ ಡೇಟಾ ಮುಗಿದ ಬಳಿಕ, ನೀವು 64Kbps ವೇಗದಲ್ಲಿ ಉಚಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯೊಂದಿಗೆ, ನೀವು ಜಿಯೋ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.