JioBook Laptop: ಭಾರತದಲ್ಲಿ ಜಿಯೋಬುಕ್ ಲ್ಯಾಪ್​ಟಾಪ್ ಮಾರಾಟ ಆರಂಭ: ಫೀಚರ್ಸ್​, ಬೆಲೆ ಕುರಿತ ಮಾಹಿತಿ ಇಲ್ಲಿದೆ

| Updated By: Vinay Bhat

Updated on: Oct 21, 2022 | 2:09 PM

ಜಿಯೋ ಬುಕ್ ಲ್ಯಾಪ್‌ಟಾಪ್ ಆಕರ್ಷಕ ಪ್ರೈಸ್‌ ಟ್ಯಾಗ್‌ನೊಂದಿಗೆ ಖರೀದಿಗೆ ಸಿಗುತ್ತಿದ್ದು, ಇದರ ಬೆಲೆ ಸುಮಾರು 15,000 ರೂ. ಒಳಗೆ ಇರಲಿದೆ ಎಂದು ತಿಳಿದುಬಂದಿದೆ.

JioBook Laptop: ಭಾರತದಲ್ಲಿ ಜಿಯೋಬುಕ್ ಲ್ಯಾಪ್​ಟಾಪ್ ಮಾರಾಟ ಆರಂಭ: ಫೀಚರ್ಸ್​, ಬೆಲೆ ಕುರಿತ ಮಾಹಿತಿ ಇಲ್ಲಿದೆ
Jio Book laptop
Follow us on

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್‌ (Reliance) ಒಡೆತನದ ಜಿಯೋ (Jio) ಟೆಕ್‌ ವಲಯಕ್ಕೂ ಕಾಲಿಟ್ಟಿದ್ದು, ಇಲ್ಲೂ ಪ್ರಾಬಲ್ಯ ಸಾಧಿಸುತ್ತಿದೆ. ಈಗಾಗಲೇ ಆಯ್ದ ಕೆಲವು ಪ್ರದೇಶಗಳಲ್ಲಿ ಜಿಯೋ 5ಜಿ ಲಭ್ಯವಾಗುತ್ತಿದೆ. ಇದರ ಜೊತೆಗೆ ಸದ್ಯ ತನ್ನ ಹೊಸ ಲ್ಯಾಪ್‌ಟಾಪ್‌ ಜಿಯೋಬುಕ್‌ ಭಾರತದಲ್ಲಿ ಖರೀದಿಗೆ ಲಭ್ಯ ಮಾಡಿದೆ. ಈ ಮೂಲಕ ಜಿಯೋ ಲ್ಯಾಪ್‌ಟಾಪ್‌ ವಲಯದಲ್ಲೂ ಸೌಂಡ್‌ ಮಾಡುತ್ತಿದೆ. ಜಿಯೋಬುಕ್‌ ಲ್ಯಾಪ್‌ಟಾಪ್‌ (JioBook Laptop) ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ನೀಡಲಿದೆ ಎನ್ನಲಾಗಿದೆ. ಭಾರತದಲ್ಲಿ ಕಡಿಮೆ ಬೆಲೆಯ ಜಿಯೋ ಫೋನ್ ಯಶಸ್ಸು ಪಡೆದಿದ್ದು, ಇದರ ಮುಂದುವರಿದ ಭಾಗವಾಗಿ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬಂದಿದೆ.

ಜಿಯೋ ಬುಕ್ ಲ್ಯಾಪ್‌ಟಾಪ್ ಆಕರ್ಷಕ ಪ್ರೈಸ್‌ ಟ್ಯಾಗ್‌ನೊಂದಿಗೆ ಖರೀದಿಗೆ ಸಿಗುತ್ತಿದ್ದು, ಇದರ ಬೆಲೆ ಸುಮಾರು 15,000 ರೂ. ಒಳಗೆ ಇರಲಿದೆ ಎಂದು ತಿಳಿದುಬಂದಿದೆ. ಈ ಬಜೆಟ್ ಲ್ಯಾಪ್‌ಟಾಪ್‌ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಆಗಲಿದೆ. 11.6 ಇಂಚಿನ HD ಡಿಸ್‌ಪ್ಲೇ ಅನ್ನು ಪಡೆದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಅಡ್ರಿನೊ 610 GPU ನ ಸಪೋರ್ಟ್‌ ಸಹ ಪಡೆದಿದೆ.

Tech Tips: ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ಲೈಕ್ಸ್ ಬರುತ್ತೆ?: ಇಲ್ಲಿದೆ ನೋಡಿ

ಇದನ್ನೂ ಓದಿ
Tech Tips: ಇನ್​ಸ್ಟಾಗ್ರಾಮ್​ನಲ್ಲಿ ನಿಮ್ಮ ಫಾಲೋವರ್ಸ್​ ಒಮ್ಮೆಲೇ ಹೆಚ್ಚಾಗಬೇಕೇ?: ಈ ಟ್ರಿಕ್ ಫಾಲೋ ಮಾಡಿ
ಗ್ರಾಹಕರ ಸೈಬರ್ ಸುರಕ್ಷತೆ ಕುರಿತು ನಾರ್ಟನ್ ವರದಿ: ಇ ಕಾಮರ್ಸ್​ ಸೈಟ್ ಉಪಯೋಗಿಸುವ ಮುನ್ನ ಎಚ್ಚರವಾಗಿರಿ
WhatsApp: ದೀಪಾವಳಿಯ ಖುಷಿಯಲ್ಲಿದ್ದವರಿಗೆ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್
ಭಾರತದಲ್ಲಿ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಆಲ್ಟ್ರಾಕ್ಕೆ ಭರ್ಜರಿ ಬೇಡಿಕೆ: ಮತ್ತೊಂದು ಹೊಸ ವೇರಿಯೆಂಟ್ ರಿಲೀಸ್

2018 ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 201 9ರಲ್ಲಿ ಚಾಲನೆ ನೀಡಲಾಗಿತ್ತು. ಈ ಲ್ಯಾಪ್​ಟಾಪ್​ನಲ್ಲಿರುವ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ಗೆ ಪೂರಕವಾಗಿ 2GB RAM ಮತ್ತು 32GB ಆಂತರೀಕ ಸ್ಟೋರೇಜ್ ಮಾಡೆಲ್‌ ಒಳಗೊಂಡಿದೆ. ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದ್ದು, ಉತ್ತಮ ಬ್ಯಾಕ್‌ಅಪ್‌ಗಾಗಿ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಕೂಡ ನೀಡಲಾಗಿದೆ. ಇದರಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 8 ಗಂಟೆಗಳ ಕಾಲ ಕೆಲಸ ಮಾಡಬಹುದು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಶೇಷವಾಗಿ ಈ ಲ್ಯಾಪ್‌ಟಾಪ್ Jio OS ನಲ್ಲಿ ಕಾರ್ಯ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5 mm ಆಡಿಯೋ ಜ್ಯಾಕ್, ಬ್ಲೂಟೂತ್ 5.0, HDMI ಮಿನಿ, Wi-Fi ಸೇರಿದಂತೆ ಕೆಲವು ಅಗತ್ಯ ಆಯ್ಕೆಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ಎಂಬೆಡೆಡ್ ಜಿಯೋ ಸಿಮ್ ಕಾರ್ಡ್‌ನೊಂದಿಗೆ ಲಭ್ಯವಾಗಲಿದ್ದು, ಇದು ಬಳಕೆದಾರರು ಜಿಯೋ 4G LTE ಸಂಪರ್ಕವನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಲ್ಯಾಪ್‌ಟಾಪ್‌ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್​ಗಳಲ್ಲಿ ಖರೀದಿ ಮಾಡಬಹುದು. ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳಿಗೆ ಆಕರ್ಷಕ ರಿಯಾಯಿತಿ ಕೂಡ ನೀಡಲಾಗಿದೆ.

Published On - 2:09 pm, Fri, 21 October 22