Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Book Laptop: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಜಿಯೋ ಬುಕ್ ಲ್ಯಾಪ್​ಟಾಪ್: ಇದರ ಬೆಲೆ ಕೇವಲ …

2018ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಅದರಂತೆ, ಇದೀಗ ಜಿಯೋ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ರಿಲಯನ್ಸ್ ಜಿಯೋ ಕಂಪೆನಿ ಸಿದ್ದವಾಗಿದೆ

Jio Book Laptop: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಜಿಯೋ ಬುಕ್ ಲ್ಯಾಪ್​ಟಾಪ್: ಇದರ ಬೆಲೆ ಕೇವಲ ...
Jio Book laptop
Follow us
TV9 Web
| Updated By: Vinay Bhat

Updated on: Oct 04, 2022 | 1:51 PM

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್‌ (Reliance) ಒಡೆತನದ ಜಿಯೋ (Jio) ಟೆಕ್‌ ವಲಯಕ್ಕೂ ಕಾಲಿಟ್ಟಿದ್ದು, ಇಲ್ಲೂ ಪ್ರಾಬಲ್ಯ ಸಾಧಿಸುತ್ತಿದೆ. ಈಗಾಗಲೇ ಜಿಯೋ ತನ್ನ 5ಜಿ ಸೇವೆ ನೀಡುವುದರಲ್ಲಿ ಬ್ಯುಸಿಯಾಗಿದೆ. ಕೆಲವೇ ದಿನಗಳಲ್ಲಿ ಆಯ್ದ ಕೆಲವು ಪ್ರದೇಶಗಳಲ್ಲಿ ಜಿಯೋ 5ಜಿ ಲಭ್ಯವಾಗಲಿದೆ. ಇದರ ಬೆನ್ನಲ್ಲೇ ಸದ್ಯ ತನ್ನ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಲ್ಯಾಪ್‌ಟಾಪ್‌ ವಲಯದಲ್ಲೂ ಸೌಂಡ್‌ ಮಾಡಲು ಜಿಯೋ ತಯಾರಿ ನಡೆಸುತ್ತಿದೆ. ಜಿಯೋಬುಕ್‌ ಲ್ಯಾಪ್‌ಟಾಪ್‌ (Jio Book Laptop) ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ನೀಡಲಿದೆ ಎನ್ನಲಾಗಿದೆ. ಭಾರತದಲ್ಲಿ ಕಡಿಮೆ ಬೆಲೆಯ ಜಿಯೋ ಫೋನ್ ಯಶಸ್ಸು ಪಡೆದಿದ್ದು, ಇದರ ಮುಂದುವರಿದ ಭಾಗವಾಗಿ ಅತಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬರಲಿದೆಯಂತೆ.

2018ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಅದರಂತೆ, ಇದೀಗ ಜಿಯೋ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ರಿಲಯನ್ಸ್ ಜಿಯೋ ಕಂಪೆನಿ ಸಿದ್ದವಾಗಿದೆ ಎಂದು ಹೇಳಲಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್‌ ಈ ಬಗ್ಗೆ ವರದಿ ಮಾಡಿದ್ದು, ಜಿಯೋಬುಕ್‌ ARM Mali G72 ನಿಂದ ಸಹಾಯ ಮಾಡಲಿದೆಯಂತೆ. ಇದು ಸಿಂಗಲ್-ಕೋರ್ ಸ್ಕೋರ್ 1178 ಮತ್ತು ಮಲ್ಟಿ-ಕೋರ್ ಸ್ಕೋರ್ 4246 ಅನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ Android ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ನಿರೀಕ್ಷಿಸಬಹುದು. ಇನ್ನು ಈ ಲ್ಯಾಪ್‌ಟಾಪ್‌ ಫುಲ್‌ HD ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಆದರೆ ಪ್ರೈಸ್‌ ಟ್ಯಾಗ್‌ ಕಡಿಮೆ ಆದಂತೆ ಜಿಯೋಬುಕ್‌ ಕಡಿಮೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಪಡೆಯುವ ನಿರೀಕ್ಷೆಯಿದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ ಮಿನಿ HDMI ಕನೆಕ್ಟರ್, ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ ಸೇರಿವೆ. ಇದು 3-ಅಕ್ಷದ ವೇಗವರ್ಧಕ ಮತ್ತು ಕ್ವಾಲ್ಕಾಮ್ ಆಡಿಯೊ ಚಿಪ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಜಿಯೋ ಕಂಪನಿ ಜಿಯೋ ಬುಕ್‌ ಎನ್ನುವ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಜಾಗತಿಕ ಕಂಪನಿಗಳಾದ ಕ್ವಾಲ್‌ಕೊಮ್‌ ಹಾಗೂ ಮೈಕ್ರೋಸಾಫ್ಟ್ ಜೊತೆಗೆ ಕೈಜೋಡಿಸಿ 4ಜಿ ಸಿಮ್‌ಕಾರ್ಡ್‌ ಇರುವ ಜಿಯೋಬುಕ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್‌ನಿಂದಲೇ ಶಾಲೆಗಳು, ಸರ್ಕಾರಿ ಸಂಸ್ಥೆಗಳಿಗೆ ಈ ಲ್ಯಾಪ್‌ಟಾಪ್‌ ಒದಗಿಸುವ ಯೋಜನೆಯಿದ್ದು, ಮುಂದಿನ 3 ತಿಂಗಳಲ್ಲಿ ಇದು ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ 5ಜಿ ಬೆಂಬಲಿತ ಸ್ಮಾರ್ಟ್ ಪೋನ್‌ ಕೂಡಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

ಇದನ್ನೂ ಓದಿ
Image
Galaxy A04s: ಸ್ಯಾಮ್​ಸಂಗ್ ಕಂಪನಿಯಿಂದ ಕೇವಲ 13,499 ರೂ. ಗೆ ಗ್ಯಾಲಕ್ಸಿ A04s ಸ್ಮಾರ್ಟ್‌ಫೋನ್‌ ಬಿಡುಗಡೆ: ಏನಿದೆ ಫೀಚರ್ಸ್?
Image
Xiaomi 12T: ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿಂದು 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆ: ಬೆಲೆ ಎಷ್ಟು?
Image
Oppo A16K: ಬಜೆಟ್ ಬೆಲೆಯ ಒಪ್ಪೋ A16K ಸ್ಮಾರ್ಟ್‌ಫೋನ್ ದರದಲ್ಲಿ ಭರ್ಜರಿ ಇಳಿಕೆ: ನೂತನ ದರ ಇಲ್ಲಿದೆ
Image
6G service: ಇನ್ನು ಎಂಟೇ ವರ್ಷಗಳಲ್ಲಿ ಭಾರತಕ್ಕೆ 6G ಸೇವೆ

ರಾಯಿಟರ್ಸ್‌ ವರದಿಯ ಪ್ರಕಾರ ಈ ಲ್ಯಾಪ್‌ಟಾಪ್‌ ಬೆಲೆ ಕೇವಲ 15,000 ರೂಪಾಯಿ ಇರಬಹುದು ಎನ್ನಲಾಗಿದೆ. ಜಿಯೋಬುಕ್‌ ಲ್ಯಾಪ್‌ಟಾಪ್ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ನಲ್ಲಿದೆಯಂತೆ. ಈ ಎರಡು ಲ್ಯಾಪ್‌ಟಾಪ್‌ಗಳಲ್ಲಿ, ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ನಿಂದ ಚಾಲಿತವಾಗುವಂತೆ ಪಟ್ಟಿ ಮಾಡಲಾಗಿದೆ. HDMI, USB-A ನಂತಹ ಕನೆಕ್ಟಿವಿಟಿ ಪೋರ್ಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.

ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು