AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioBook: ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಜಿಯೋಬುಕ್‌ ಲ್ಯಾಪ್‌ಟಾಪ್: ಏನು ವಿಶೇಷತೆ?

2018ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಸದ್ಯ ತನ್ನ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಸಜ್ಜಾಗಿದೆ.

JioBook: ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಜಿಯೋಬುಕ್‌ ಲ್ಯಾಪ್‌ಟಾಪ್: ಏನು ವಿಶೇಷತೆ?
JioBook laptop
TV9 Web
| Updated By: Vinay Bhat|

Updated on: Nov 16, 2021 | 3:26 PM

Share

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್‌ (Reliance) ಒಡೆತನದ ಜಿಯೋ (Jio) ಟೆಕ್‌ ವಲಯಕ್ಕೂ ಕಾಲಿಟ್ಟಿದ್ದು, ಇಲ್ಲೂ ಪ್ರಾಬಲ್ಯ ಸಾಧಿಸಲೂ ಮುಂದಾಗಿದೆ. ಈಗಾಗಲೇ ಅಗ್ಗದ ಬೆಲೆಗೆ ಜಿಯೋ ಫೀಚರ್‌ ಫೋನ್‌ ಮೂಲಕ ಸಂಚಲನ ಸೃಷ್ಟಿಸಿರುವ ಜಿಯೋ ಕೆಲ ದಿನಗಳ ಹಿಂದೆಯಷ್ಟೇ ಜಿಯೋಫೋನ್‌ನೆಕ್ಸ್ಟ್‌ (Jio Phone Next) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಸದ್ಯ ತನ್ನ ಹೊಸ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಲ್ಯಾಪ್‌ಟಾಪ್‌ ವಲಯದಲ್ಲೂ ಸೌಂಡ್‌ ಮಾಡಲು ಜಿಯೋ ತಯಾರು ನಡೆಸುತ್ತಿದೆ. ಜಿಯೋಬುಕ್‌ ಲ್ಯಾಪ್‌ಟಾಪ್‌ (Jio Book Laptop) ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ನೀಡಲಿದೆ ಎನ್ನಲಾಗಿದೆ. ಇದು ಮೀಡಿಯಾ ಟೆಕ್ MT8788 ಪ್ರೊಸೆಸರ್‌ ಬಲವನ್ನು ಪಡೆದಿರುವ ಸಾಧ್ಯತೆ ಕೂಡ ಇದೆ ಎಂಬ ಮಾತಿದೆ.

2018ರಲ್ಲಿಯೇ ಜಿಯೋ ಬುಕ್ ಹೆಸರಿನ ಲಾಪ್ ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಅದರಂತೆ, ಜಿಯೋ ಫೋನ್ ನೆಕ್ಟ್ಸ್ ಬಿಡುಗಡೆ ಮಾಡಿದ ನಂತರದಲ್ಲಿ ಶೀಘ್ರದಲೇ ಜಿಯೋ ಲ್ಯಾಪ್‌ಟಾಪ್‌ಗಳ ಬಿಡುಗಡೆಗೆ ರಿಲಯನ್ಸ್ ಜಿಯೋ ಕಂಪೆನಿ ಸಿದ್ದವಾಗಿದೆ ಎಂದು ಹೇಳಲಾಗಿದೆ.

ಜಿಯೋಬುಕ್‌ ARM Mali G72 ನಿಂದ ಸಹಾಯ ಮಾಡಲಿದೆಯಂತೆ. ಇದು ಸಿಂಗಲ್-ಕೋರ್ ಸ್ಕೋರ್ 1178 ಮತ್ತು ಮಲ್ಟಿ-ಕೋರ್ ಸ್ಕೋರ್ 4246 ಅನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ Android ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ನಿರೀಕ್ಷಿಸಬಹುದು. ಇನ್ನು ಈ ಲ್ಯಾಪ್‌ಟಾಪ್‌ ಫುಲ್‌ HD ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಆದರೆ ಪ್ರೈಸ್‌ ಟ್ಯಾಗ್‌ ಕಡಿಮೆ ಆದಂತೆ ಜಿಯೋಬುಕ್‌ ಕಡಿಮೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಪಡೆಯುವ ನಿರೀಕ್ಷೆಯಿದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ ಮಿನಿ HDMI ಕನೆಕ್ಟರ್, ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ ಸೇರಿವೆ. ಇದು 3-ಅಕ್ಷದ ವೇಗವರ್ಧಕ ಮತ್ತು ಕ್ವಾಲ್ಕಾಮ್ ಆಡಿಯೊ ಚಿಪ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಜಿಯೋಬುಕ್‌ ಲ್ಯಾಪ್‌ಟಾಪ್ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ನಲ್ಲಿದೆಯಂತೆ. ಈ ಎರಡು ಲ್ಯಾಪ್‌ಟಾಪ್‌ಗಳಲ್ಲಿ, ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ನಿಂದ ಚಾಲಿತವಾಗುವಂತೆ ಪಟ್ಟಿ ಮಾಡಲಾಗಿದೆ. HDMI, USB-A ನಂತಹ ಕನೆಕ್ಟಿವಿಟಿ ಪೋರ್ಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.ಇನ್ನು ವಾಯರ್‌ಲೆಸ್‌ ಸಂಪರ್ಕಕ್ಕಾಗಿ, ಜಿಯೋಬುಕ್‌ ಕೆಲವು ರೂಪಾಂತರಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ ಮತ್ತು 4G LTE ಅನ್ನು ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಲ್ಯಾಪ್‌ಟಾಪ್‌ ಬೆಲೆ ಎಷ್ಟು ಎಂಬ ಬಗೆಗೆಗಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಇದರ ಬೆಲೆ ರೂ. 35,000 ಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

iQOO Z5: ಭಾರತದಲ್ಲಿ ಐಕ್ಯೂ ಝೆಡ್ 5 ಭರ್ಜರಿ ಸೇಲ್: ನೂತನ ಆವೃತ್ತಿ ಬಿಡುಗಡೆ, ಬೆಲೆ ಎಷ್ಟು?

Redmi Note 11T 5G: ರೆಡ್ಮಿ ನೋಟ್ 11ಟಿ 5G ನ. 30ಕ್ಕೆ ಬಿಡುಗಡೆ: ಈ ಸ್ಮಾರ್ಟ್​​ಫೋನ್ ಖರೀದಿಗೆ ಕ್ಯೂ ಗ್ಯಾರಂಟಿ

(Jio is preparing to launch its first laptop JioBook which is likely to be a low-budget laptop)

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು