Redmi Note 11T 5G: ರೆಡ್ಮಿ ನೋಟ್ 11ಟಿ 5G ನ. 30ಕ್ಕೆ ಬಿಡುಗಡೆ: ಈ ಸ್ಮಾರ್ಟ್​​ಫೋನ್ ಖರೀದಿಗೆ ಕ್ಯೂ ಗ್ಯಾರಂಟಿ

ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಟೀಸರ್ ಮೂಲಕ ಈ ಸ್ಮಾರ್ಟ್‌ಫೋನ್, ವೇಗದ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್, ಹೈಯರ್ ಸ್ಕ್ರೀನ್ ರೆಫ್ರಿಶ್ ರೇಟ್ ಮತ್ತು ಅತ್ಯುತ್ತಮ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.

Redmi Note 11T 5G: ರೆಡ್ಮಿ ನೋಟ್ 11ಟಿ 5G ನ. 30ಕ್ಕೆ ಬಿಡುಗಡೆ: ಈ ಸ್ಮಾರ್ಟ್​​ಫೋನ್ ಖರೀದಿಗೆ ಕ್ಯೂ ಗ್ಯಾರಂಟಿ
Redmi Note 11T 5G
Follow us
TV9 Web
| Updated By: Vinay Bhat

Updated on: Nov 16, 2021 | 1:43 PM

ಭಾರತೀಯ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ಭರ್ಜರಿ ಸುದ್ದಿಯಲ್ಲಿರುವ ಬಹುನಿರೀಕ್ಷಿತ ರೆಡ್ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್​ಫೋನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ನವೆಂಬರ್ 30 ರಂದು ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಅನಾವರಣಗೊಳ್ಳಲಿದೆ ಎಂದು ಕಂಪನಿ ಖಚಿತ ಪಡಿಸಿದೆ. ಈ ಮೂಲಕ ಶವೋಮಿ (Xiaomi) ಭಾರತದಲ್ಲಿ ಮತ್ತೊಮ್ಮೆ ತನ್ನ ಪಾರುಪತ್ಯ ಮೆರೆಯಲು ಸಜ್ಜಾಗಿದೆ. ಹೊಸ ರೆಡ್ಮಿ ನೋಟ್ 11T 5G  ಫೋನ್ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್ 11 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಊಹಿಸಲಾಗಿದ್ದು, ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಅಂದರೆ 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಅಷ್ಟಕ್ಕೂ ಈ ಸ್ಮಾರ್ಟ್​ಫೋನ್ ಇಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿರುವುದು ಯಾವ ಕಾರಣಕ್ಕಾಗಿ ಗೊತ್ತೇ?.

ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಟೀಸರ್ ಮೂಲಕ ಈ ಸ್ಮಾರ್ಟ್‌ಫೋನ್, ವೇಗದ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್, ಹೈಯರ್ ಸ್ಕ್ರೀನ್ ರೆಫ್ರಿಶ್ ರೇಟ್ ಮತ್ತು ಅತ್ಯುತ್ತಮ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ಹಾಗೆಯೇ, ಈ ಸ್ಮಾರ್ಟ್ ಫೋನ್, 6GB RAM ಮತ್ತು 64GB ಸ್ಟೋರೇಜ್, 6GB RAM ಮತ್ತು 128GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಸ್ಟೋರೇಜ್  ವೆರಿಯೆಂಟ್‌ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಅಕ್ವಾಮರಿನ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಸ್ಟಾರ್‌ಡಸ್ಟ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಸೋರಿಕೆಯಾದ ರೆಡ್ಮಿ ನೋಟ್ 11T 5G ಫೋನಿನ ಕೆಲವು ನಿರ್ದಿಷ್ಟ ವಿವರಗಳನ್ನು ನೋಡುವುದಾದರೆ, 90Hz ರಿಫ್ರೆಶ್ ರೇಟ್ ಮತ್ತು 240Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ ಚಾಲಿತವಾಗಿದೆ, ಅಂದರೆ, ಈ ಪ್ರೊಸೆಸರ್ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.  ಜೊತೆಗೆ 8GB ವರೆಗಿನ LPDDR4X RAM ಅನ್ನು ಹೊಂದಿರಲಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ವಿಶೇಷ ಎಂದರೆ, ರೆಡ್‌ಮಿ ಈ ಫೋನಿನ ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಿದೆ ಎನ್ನಲಾಗಿದೆ. ಫೋನ್ ಹಿಂಬದಿಯಲ್ಲಿ 50 ಮೆಗಾ ಪಿಕ್ಸೆಲ್ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ ಶೂಟರ್‌ರೊಂದಿಗೆ ಎರಡು ಕ್ಯಾಮೆರಾಗಳು ಇರಲಿವೆ ಎನ್ನಲಾಗಿದೆ. ಜೊತೆಗೆ, ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.

ರೆಡ್ಮಿ ನೋಟ್ 11T 5G 128GB UFS 2.2 ಸಂಗ್ರಹಣೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು ಎಂದು ಊಹಿಸಲಾಗಿದೆ. ಇದರ ಬೆಲೆ ಎಷ್ಟಿರಬಹುದೆಂದು ಇನ್ನೂ ಬಹಿರಂಗವಾಗಿಲ್ಲ.

Samsung Galaxy S21 FE: ಮಾರುಕಟ್ಟೆಯಲ್ಲಿ ಗ್ಯಾಲಕ್ಸಿ S20 FE ಹವಾ ತಗ್ಗುವ ಮುನ್ನವೇ ಗ್ಯಾಲಕ್ಸಿ S21 FE ರಿಲೀಸ್​ಗೆ ಸ್ಯಾಮ್​ಸಂಗ್ ಸಜ್ಜು

WhatsApp: ವಾಟ್ಸ್​ಆ್ಯಪ್​ ಕಾಲ್ ರೆಕಾರ್ಡ್​ ಮಾಡುವ ಸುಲಭ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ

(Redmi Note 11T 5G Xiaomi has announced the arrival Redmi Note 11T 5G on November 30 in India)

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ