AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi 12T: ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿಂದು 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆ: ಬೆಲೆ ಎಷ್ಟು?

ಇಂದು ನಡೆಯಲಿರುವ ಮೇಕ್ ಮೂಮೆಂಟ್ಸ್ ಮೆಗಾ ಎಂಬ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ರಿಲೀಸ್ ಆಗಲಿದೆ. ಶವೋಮಿ 12T ಪ್ರೊ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಲಿದೆ.

Xiaomi 12T: ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿಂದು 200MP ಕ್ಯಾಮೆರಾದ ಶವೋಮಿ 12T ಸರಣಿ ಬಿಡುಗಡೆ: ಬೆಲೆ ಎಷ್ಟು?
Xiaomi 12T Pro
TV9 Web
| Updated By: Vinay Bhat|

Updated on: Oct 04, 2022 | 6:21 AM

Share

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ಕ್ಯಾಮೆರಾ ಮೊಬೈಲ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶವೋಮಿ ಮೊದಲ ಬಾರಿಗೆ ಅದುಕೂಡ ಅತ್ಯಂತ ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ ಪರಿಚಯಿಸಿದ್ದೇ ತಡ ಇತರೆ ಬಹುತೇಕ ಬ್ರ್ಯಾಂಡ್​ಗಳು ಮೊಬೈಲ್​​ನಲ್ಲಿನ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯವಾಗಿ ಭಾರತದಲ್ಲಿ (Xiaomi) ಶವೋಮಿ ಕಂಪನಿಯ ಫೋನ್​ಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್​ಗಳು ದೇಶದಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಆದರೆ ಇನ್ನು ನೀವು ಈ 108 ಮೆಗಾಫಿಕ್ಸೆಲ್​ನ ಸ್ಮಾರ್ಟ್​​ಫೋನನ್ನು ಮರೆತು ಬಿಡಿ. ಯಾಕೆಂದರೆ ಈಗಾಗಲೇ ಮಾರುಕಟ್ಟೆಗೆ 200 ಮೆಗಾಫಿಕ್ಸೆಲ್ ಕ್ಯಾಮೆರಾದ (200MP Camera) ಸ್ಮಾರ್ಟ್​​ಫೋನ್ ಲಗ್ಗೆಯಿಡುತ್ತಿದೆ.

ಇತ್ತೀಚೆಗಷ್ಟೆ ಮೋಟೋ ಕಂಪನಿ ವಿಶ್ವದ ಮೊಟ್ಟ ಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೋಟೋರೊಲಾ ಎಡ್ಜ್ 30 ಅಲ್ಟ್ರಾ​ ಸ್ಮಾರ್ಟ್​​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಶವೋಮಿ ಸರದಿ. ಇಂದು ಅಕ್ಟೋಬರ್ 4 ರಂದು ಮಾರುಕಟ್ಟೆಗೆ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಅಪ್ಪಳಿಸಲಿದೆ.

ಇದನ್ನೂ ಓದಿ
Image
6G service: ಇನ್ನು ಎಂಟೇ ವರ್ಷಗಳಲ್ಲಿ ಭಾರತಕ್ಕೆ 6G ಸೇವೆ
Image
Moto G72: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?, ಎಷ್ಟು ರೂ.
Image
Redmi Note 12 Pro Plus: ಬರೋಬ್ಬರಿ 210W ಫಾಸ್ಟ್ ಚಾರ್ಜರ್: ಟೆಕ್ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಲು ಮುಂದಾದ ಶವೋಮಿ
Image
Vivo Y52 5G: 5000mAh ಬ್ಯಾಟರಿ, 50MP ಕ್ಯಾಮೆರಾ: ವಿವೋದಿಂದ ಮಧ್ಯಮ ಬೆಲೆಗೆ ಬೊಂಬಾಟ್ ಸ್ಮಾರ್ಟ್​ಫೋನ್ ಬಿಡುಗಡೆ

ಹೌದು, ಶವೋಮಿ ಇದೀಗ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಲು ಮುಂದಾಗಿದೆ. ಶವೋಮಿ ಕಂಪನಿ ತನ್ನ ಶವೋಮಿ 12T ಸರಣಿಯ ಸ್ಮಾರ್ಟ್​ಫೋನ್​ಗಳನ್ನು ಇಂದು ಬಿಡುಗಡೆ ಮಾಡುತ್ತಿದೆ. ಇಂದು ನಡೆಯಲಿರುವ ಮೇಕ್ ಮೂಮೆಂಟ್ಸ್ ಮೆಗಾ ಎಂಬ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ರಿಲೀಸ್ ಆಗಲಿದೆ. ಶವೋಮಿ 12T ಪ್ರೊ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಲಿದೆ. ಸ್ವತಃ ಶವೋಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಚಿತ ಪಡಿಸಿದೆ.

ಶವೋಮಿ 12T ಪ್ರೊ ಸ್ಮಾರ್ಟ್​​ಫೋನ್​ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ. 6.67 ಇಂಚಿನ ಫುಲ್ ಹೆಚ್​ಡಿ+ ಅಮೋಲೆಡ್ ಡಿಸ್​ಪ್ಲೇ ಇರಲಿದೆ ಎಂಬ ಮಾತುಕೂಡ ಇದೆ.

MIUI 13 ಮೂಲಕ ಆಂಡ್ರಾಯ್ಡ್ 12 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆಯಂತೆ. 12GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಇರಲಿದೆ. ಮೂಲಗಳ ಪ್ರಕಾರ ಇದು 5000mAh ನ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರಲಿದೆ. ಇನ್​ಡಿಸ್​ಪ್ಲೇ ಫಿಂಗರ್ ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಬೆಲೆ 65,000 ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..