JioPhone Next: ಜಿಯೋ ಫೋನ್ ನೆಕ್ಸ್ಟ್‌ ಬುಕ್ಕಿಂಗ್​ಗೆ ದಿನಾಂಕ ನಿಗದಿ: ಭಾರತದಲ್ಲಿ ಇದರ ಬೆಲೆ ಎಷ್ಟು?

| Updated By: Vinay Bhat

Updated on: Aug 29, 2021 | 1:56 PM

ಮಾಹಿತಿಯ ಪ್ರಕಾರ ಜಿಯೋ ಫೋನ್ ನೆಕ್ಸ್ಟ್‌ ಬುಕ್ಕಿಂಗ್ ಈ ವಾರದಿಂದ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಲದೆ ಈ ಫೋನ್ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿ ಯಂದು ಬಿಡುಗಡೆ ಆಗಲಿದೆಯಂತೆ.

JioPhone Next: ಜಿಯೋ ಫೋನ್ ನೆಕ್ಸ್ಟ್‌ ಬುಕ್ಕಿಂಗ್​ಗೆ ದಿನಾಂಕ ನಿಗದಿ: ಭಾರತದಲ್ಲಿ ಇದರ ಬೆಲೆ ಎಷ್ಟು?
ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳು ಬಂದಿವೆ: ಜಿಯೋ ಬಳಕೆದಾರರು ಈಗ ಎಲ್ಲ ವಿಡಿಯೋ ನೋಡಬಹುದು
Follow us on

ಜನಪ್ರಿಯ ಜಿಯೋ (Jio) ಕಂಪನಿಯ ಬಹುನಿರೀಕ್ಷಿತ ಹೊಸ ಜಿಯೋ ಫೋನ್ ನೆಕ್ಸ್ಟ್‌ (JioPhone Next) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೊನಿನ ಪ್ರೀ ಆರ್ಡರ್ ಬುಕ್ಕಿಂಗ್​ಗೆ ಯಾವಾಗ ಆರಂಭವಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ. ಇದೇ ಆಗಸ್ಟಟ್ 28 ರಂದು ರಿಲಯನ್ಸ್ (Reliance) ಸಂಸ್ಥೆಯ 44ನೇ ವಾರ್ಷಿಕ ಸಭೆ ನಡೆಯಲಿದ್ದು, ಇದರಲ್ಲಿ ಮುಖೇಶ್ ಅಂಬಾನಿ (Mukesh Ambani) ಜಿಯೋ ಫೋನ್ ನೆಕ್ಸ್ಟ್‌ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.

ಸದ್ಯ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಜಿಯೋ ಫೋನ್ ನೆಕ್ಸ್ಟ್‌ ಬುಕ್ಕಿಂಗ್ ಈ ವಾರದಿಂದ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಲದೆ ಈ ಫೋನ್ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿ ಯಂದು ಬಿಡುಗಡೆ ಆಗಲಿದೆಯಂತೆ. ಫೋನ್ ಪ್ರಿಯರಲ್ಲಂತು ಜಿಯೋದ ಹೊಸ ಫೋನ್ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ.

ಗೂಗಲ್ ಸಂಸ್ಥೆಯ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್​ಸ್ಟ್ ಫೋನನ್ನು ತಯಾರಿಸಲಾಗಿದೆ. ಇದು 5ಜಿ ನೆಟ್​ವರ್ಕ್ ಸಾಮರ್ಥ್ಯದ ಫೋನ್ ಆಗಿದ್ದು ಕಡಿಮೆ ಬೆಲೆಯಲ್ಲಿ ಲಭ್ಯ ಇರುತ್ತದೆ ಎಂದು ಈಗಾಗಲೇ ಕಂಪೆನಿ ತಿಳಿಸಿದೆ. ಹೀಗಿರುವಾಗ ಈ ಫೋನಿನ ಲೀಕ್ ಮಾಹಿತಿಗಳು ಈಗ ಅಚ್ಚರಿ ತಂದಿದೆ. ಜಿಯೋದ ಹೊಸ ಫೋನ್ ಗೂಗಲ್‌ ಸಪೋರ್ಟ್‌ ಇರುವುದು ಈ ಫೋನಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ.

ಜಿಯೋ ಫೋನ್ ನೆಕ್ಸ್ಟ್‌ ಫೋನ್‌ ಪ್ರಿ-ಇನ್‌ಸ್ಟಾಲ್ಡ್‌ ಸ್ನ್ಯಾಪ್‌ಚಾಟ್‌ ಆಪ್‌ ಹೊಂದಿರಲಿದ್ದು, ವಿಡಿಯೋ ಕಾಲಿಂಗ್‌ ಗಾಗಿ ಗೂಗಲ್‌ ಡ್ಯೂ ಸಹ ಇರಲಿದೆಯಂತೆ. ಇದರೊಂದಿಗೆ ಗೂಗಲ್ ಕ್ಯಾಮೆರಾ ಗೋ ಸಹ ಇನ್‌ಬಿಲ್ಟ್‌ ಆಗಿ ಇರಲಿದೆ. ಜೊತೆಗೆ ಗೂಗಲ್‌ನ ಕೆಲವು ಆ್ಯಪ್‌ಗಳ ಬೆಂಬಲ ಪಡೆದಿರಲಿದೆ. ಹಾಗೆಯೇ ಜಿಯೋ ಫೋನ್ ನೆಕ್ಟ್ಸ್‌ ಕ್ವಾಲ್ಕಮ್ 215 ಸಾಮರ್ಥ್ಯದೊಂದಿಗೆ ಇದು 1.3GHz ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ.

ಈಗಾಗಲೇ ಜಿಯೋ ಫೋನ್ ಎಂಬ ಫೀಚರ್ ಫೋನ್ ತಯಾರಿಸಿ ಬಿಡುಗಡೆ ಮಾಡಲಾಗಿತ್ತು. ಈ ಜಿಯೋ ಫೋನ್ 10 ಕೋಟಿಗೂ ಹೆಚ್ಚು ಹ್ಯಾಂಡ್​ಸೆಟ್​ಗಳು ಮಾರಾಟವಾಗಿದ್ದವು. ಇದೀಗ ಜಿಯೋ ಫೋನ್ ನೆಕ್ಸ್​ಟ್ 30 ಕೋಟಿಯಷ್ಟು ಮಾರಾಟ ಮಾಡುವ ಗುರಿಯನ್ನ ಇಟ್ಟುಕೊಳ್ಳಲಾಗಿದೆ.

ಜಿಯೋ ಫೋನ್ ನೆಕ್ಸ್ಟ್‌ 1440×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಸ್ಕ್ರೀನ್ ಕಂಫರ್ಟ್‌ ಗಾತ್ರದಲ್ಲಿ ಇರಲಿದ್ದು, ಹೆಚ್‌ಡಿ ಪ್ಲಸ್‌ ಮಾದರಿಯನ್ನು ಹೊಂದಿರಲಿದೆ. ಈ ಫೋನಿನಲ್ಲಿ ಆಂಡ್ರಾಯ್ಡ್‌ 11 ಗೋ ಎಡಿಷನ್ ಓಎಸ್‌ ಸಪೋರ್ಟ್‌ ಇರಲಿದ್ದು, ಕೆಲವು ನೂತನ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ. ವಾಯಿಸ್‌ ಅಸಿಸ್ಟಂಟ್, ಲಾಂಗ್ವೇಜ್ ಟ್ರಾನ್ಸ್‌ಲೇಟ್‌, ಸ್ಮಾರ್ಟ್‌ ಕ್ಯಾಮೆರಾ ಮತ್ತು ಎಆರ್‌ ಫಿಲ್ಟರ್ ಸೇರಿದಂತೆ ಇನ್ನಷ್ಟು ಆಕರ್ಷಕ ಫೀಚರ್ಸ್‌ಗಳು ಇರಲಿವೆ. ಇದರ ಬೆಲೆ ಭಾರತದಲ್ಲಿ 3,499 ರೂ. ಎಂದು ಹೇಳಲಾಗಿದೆ.

Samsung Galaxy A21: ಸ್ಯಾಮ್​ಸಂಗ್​ ಕಂಪೆನಿಯಿಂದ ಬಜೆಟ್ ಬೆಲೆಗೆ ಹೊಸ ಸ್ಮಾರ್ಟ್​ಫೋನ್ ಲಾಂಚ್

iPhone 13 ಬಿಡುಗಡೆಗೆ ದಿನಾಂಕ ಫಿಕ್ಸ್: ಹೊಸ ಸ್ಮಾರ್ಟ್​ಫೋನ್ ಬೆಲೆ ಎಷ್ಟು ಗೊತ್ತಾ?

(JioPhone Next may be available for pre-bookings this week Here is the expected India price)