iPhone 13 ಬಿಡುಗಡೆಗೆ ದಿನಾಂಕ ಫಿಕ್ಸ್: ಹೊಸ ಸ್ಮಾರ್ಟ್​ಫೋನ್ ಬೆಲೆ ಎಷ್ಟು ಗೊತ್ತಾ?

Apple iPhone 13: ಈ ಬಾರಿ ಆ್ಯಪಲ್ ಕಂಪೆನಿ ನಾಲ್ಕು ಮಾಡೆಲ್​ಗಳನ್ನು ಪರಿಚಯಿಸಲಿದ್ದು, ಅದರಂತೆ iPhone 13, iPhone 13 Pro, iPhone 13 Mini ಮತ್ತು iPhone 13 Pro Max ಸ್ಮಾರ್ಟ್​ಫೋನ್​ಗಳು ಖರೀದಿಗೆ ಲಭ್ಯವಿರಲಿದೆ.

iPhone 13 ಬಿಡುಗಡೆಗೆ ದಿನಾಂಕ ಫಿಕ್ಸ್: ಹೊಸ ಸ್ಮಾರ್ಟ್​ಫೋನ್ ಬೆಲೆ ಎಷ್ಟು ಗೊತ್ತಾ?
Apple iPhone 13
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 28, 2021 | 10:00 PM

ಜನಪ್ರಿಯ ಟೆಕ್ ಕಂಪೆನಿ ಆ್ಯಪಲ್ (Apple iPhone 13)  ತನ್ನ ಸ್ಮಾರ್ಟ್​ಫೋನ್ ಸರಣಿಯ ಹೊಚ್ಚ ಹೊಸ ಮೊಬೈಲ್ ಐಫೋನ್ 13 ಸೆಪ್ಟೆಂಬರ್ 17 ರಂದು ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಚೀನೀ ಮಾಧ್ಯಮ ವೆಬ್‌ಸೈಟ್ ಪ್ರಕಾರ, ಆ್ಯಪಲ್ ಕಂಪೆನಿಯು ಮುಂದಿನ ತಿಂಗಳ 14 ರಂದು ಲಾಂಚ್ ಈವೆಂಟ್ ಅನ್ನು ಆಯೋಜಿಸಲಿದೆ. ಹಾಗೆಯೇ ಸೆ.17 ಶುಕ್ರವಾರದಿಂದ ನೂತನ ಐಫೋನ್ 13 ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದೆ. ಈ ಬಾರಿ ಆ್ಯಪಲ್ ಕಂಪೆನಿ ನಾಲ್ಕು ಮಾಡೆಲ್​ಗಳನ್ನು ಪರಿಚಯಿಸಲಿದ್ದು, ಅದರಂತೆ iPhone 13, iPhone 13 Pro, iPhone 13 Mini ಮತ್ತು iPhone 13 Pro Max ಸ್ಮಾರ್ಟ್​ಫೋನ್​ಗಳು ಖರೀದಿಗೆ ಲಭ್ಯವಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್-13 ಫೋಟೋಗಳು ಹರಿದಾಡುತ್ತಿದ್ದು, ಹೊಸ ಸ್ಮಾರ್ಟ್​ಫೋನ್​ ಬಗ್ಗೆ ಮೊಬೈಲ್​ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಮುಂಬರುವ ಐಫೋನ್ A15 ಚಿಪ್‌ನಿಂದ TSMC ಯ 5nm+ ಪ್ರೊಸೆಸ್ ಹೊಂದಿರಲಿದೆ. ಹಾಗೆಯೇ ಐಫೋನ್ 13 ಶ್ರೇಣಿಯು ಲಿಡಾರ್ (LiDAR) ಸೆನ್ಸರ್ ಅನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸೆನ್ಸರ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಮೊದಲ ತಲೆಮಾರಿನ ಐಪ್ಯಾಡ್ ಪ್ರೊನಲ್ಲಿ ಪರಿಚಯಿಸಲಾಗಿತ್ತು.

ಲಿಡಾರ್ (LiDAR) ತಂತ್ರಜ್ಞಾನವು ರಿಯಾಲಿಟಿ ಅನುಭವ (AR) ಅನುಭವಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ತ್ವರಿತವಾಗಿ ವೀಕ್ಷಿಸಲು ಮತ್ತು ಗುರುತಿಸಲು ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಇದರ ಜೊತೆಗೆ, ಮುಂಬರುವ ಐಫೋನ್ 13 ಸರಣಿಯು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಎಕ್ಸ್ 60 5 ಜಿ ಮೋಡೆಮ್ ಅನ್ನು ಹೊಂದಿರಲಿದೆ ಎಂದು ತಿಳಿಸಲಾಗಿದೆ. 5 nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿರುವ X60 ಐಫೋನ್ 12 ಮಾದರಿಗಳಲ್ಲಿ ಬಳಸಲಾಗುವ 7nm ಆಧಾರಿತ ಸ್ನಾಪ್‌ಡ್ರಾಗನ್ X55 ಮೋಡೆಮ್‌ಗೆ ಹೋಲಿಸಿದರೆ ಇದು ಹೆಚ್ಚಿನ ದಕ್ಷತೆ ಮತ್ತು ವೇಗವನ್ನು ಹೊಂದಿರಲಿದೆ.

ಗೆಜೆಟ್​ನೌ ಮಾಹಿತಿ ಪ್ರಕಾರ ಐಫೋನ್-13 ಪ್ರೊ (iPhone 13 Pro) 6.1 ಇಂಚಿನ (15.49 cm) OLED ಡಿಸ್​ಪ್ಲೇ ಹೊಂದಿರಲಿದ್ದು, iOS v14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಒಟ್ಟು ನಾಲ್ಕು ಕ್ಯಾಮೆರಾ ಇದರಲ್ಲಿರಲಿದ್ದು, ಹಿಂಭಾಗದಲ್ಲಿ 12 MP + 12 MP + 12 MP ಮೂರು ಕ್ಯಾಮೆರಾ ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 12 MP ನೀಡಲಾಗುತ್ತದೆ. ಹಾಗೆಯೇ ಇದು 5ಜಿ ಸ್ಮಾರ್ಟ್​ಫೋನ್ ಆಗಿರಲಿದೆ.

ಐಫೋನ್​ನ ನೂತನ ಸಿರೀಸ್ ಕೂಡ ವಾಟರ್ ರೆಸಿಸ್ಟೆಂಟ್ ಸ್ಮಾರ್ಟ್​ಫೋನ್ ಆಗಿರಲಿದ್ದು, ಐಫೋನ್-13 ಬೆಲೆ ಸುಮಾರು 92,999 ರೂ. ನಿಂದ ಶುರುವಾಗಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ​ ಪಂದ್ಯ: 20 ಓವರ್​ನಲ್ಲಿ ಕೇವಲ 32 ರನ್​..!

ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

(Apple iPhone 13 may go on sale on September 17)