Bajaj Qute: ಕ್ಯೂಟ್ ಕಾರ್ ಕೊಡುವ ಮೈಲೇಜ್ ಎಷ್ಟು ಗೊತ್ತಾ? ಕಡಿಮೆ ಬೆಲೆಯ ಈ ಪುಟ್ಟ ಕಾರ್​ ಹೇಗಿದೆ ನೋಡಿ

| Updated By: ganapathi bhat

Updated on: Jan 23, 2022 | 9:34 AM

ಕಡಿಮೆ ಬೆಲೆಗೆ ನಗರದಲ್ಲಿ ಪ್ರಯಾಣಿಸಲು ಪುಟ್ಟ ಕಾರ್ ಬೇಕು ಎನ್ನುವವರು ಈ ಕಾರ್ ಹೇಗಿದೆ ಎಂದು ನೋಡಬಹುದು. ಈ ಕಾರ್ ನಾಲ್ಕು ಮಂದಿ ಕುಳಿತುಕೊಳ್ಳಬಹುದಾದ ಸೀಟಿಂಗ್ ಕೆಪಾಸಿಟಿ ಹೊಂದಿದೆ.

ಟಾಟಾ ನ್ಯಾನೋ ಬಳಿಕ ಬಜಾಜ್ ಕಂಪೆನಿಯ ಪುಟ್ಟ ಕ್ಯೂಟ್ ಕಾರ್​ಗೆ ಅಪರೂಪದ ಗೌರವ ಸಿಕ್ಕಿದೆ. ಬಜಾಜ್ ಕ್ಯೂಟ್ (Bajaj Qute) ಭಾರತದ ಚೀಪ್ ಅಂಡ್ ಬೆಸ್ಟ್ ಕಾರ್ ಎಂದು ಖ್ಯಾತವಾಗಿದೆ. ನೋಡುವುದಕ್ಕೆ ಕಾರ್ ರೀತಿ ಕಾಣುವ ಈ ವಾಹನ ಕ್ವಾಡ್ರಿಕ್ ಸೈಕಲ್ ಹೊಂದಿದೆ. ಬಜಾಜ್ ಕಂಪೆನಿಯ ಈ ಪ್ರಾಡಕ್ಟ್ ಕಾರ್​ಅನ್ನು ರೀತಿಯಲ್ಲಿ ಇರುವ ಆಟೋ ಎಂದರೂ ತಪ್ಪಿಲ್ಲ. ಒಂದು ಸಣ್ಣ ಕುಟುಂಬಕ್ಕೆ ಈ ಕ್ಯೂಟ್ ಕ್ವಾಡ್ರಿಕ್ ಸೈಕಲ್ ಹೇಳಿ ಮಾಡಿಸಿದ ಹಾಗಿದೆ.

ಕ್ಯೂಟ್ ಕಾರ್ ಎಷ್ಟು ಮೈಲೇಜ್ ಕೊಡುತ್ತೆ ಎಂದು ತಿಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಸಿಎನ್​ಜಿ ಹಾಗೂ ಪೆಟ್ರೋಲ್ ಎಂಜಿನ್ ಎರಡರಲ್ಲೂ ಈ ಕಾರ್ ಸಖತ್ ಪರ್ಫಾಮೆನ್ಸ್ ನೀಡುತ್ತದೆ. 1 ಕಿಲೋದಷ್ಟು ಗ್ಯಾಸ್ ಹಾಕಿಸಿಕೊಂಡರೆ ಈ ಕಾರ್ ಸುಮಾರು 50 ಕಿಲೋ ಮೀಟರ್​ನಷ್ಟು ಮೈಲೇಜ್ ಕೊಡುತ್ತದೆ. ಒಂದು ಲೀಟರ್ ಪೆಟ್ರೋಲ್​ಗೆ 34 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಹಾಗೂ ಒಂದು ಲೀಟರ್ ಎಲ್​ಪಿಜಿ ಸಿಲಿಂಡರ್​ಗೆ 21 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ.

ಈ ಪುಟ್ಟ ಕಾರ್​ನ ಟಾಪ್ ಸ್ಪೀಡ್ ಗಂಟೆಗೆ 70 ಕಿಲೋ ಮೀಟರ್ ಆಗಿದೆ. ಕ್ಯೂಟ್ ಕ್ವಾಡ್ರಿಕ್ ಸೈಕಲ್​ನ ಎಕ್ಸ್ ಶೋರೂಮ್ ಬೆಲೆ 2 ಲಕ್ಷದ 48 ಸಾವಿರ ರೂಪಾಯಿ ಆಗಿದೆ. ಈ ಮೊದಲು ಟಾಟಾ ನ್ಯಾನೋ ಕಾರ್ ಇದೇ ರೀತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಸುದ್ದಿ ಮಾಡಿತ್ತು. ಕಡಿಮೆ ಬೆಲೆಗೆ ನಗರದಲ್ಲಿ ಪ್ರಯಾಣಿಸಲು ಪುಟ್ಟ ಕಾರ್ ಬೇಕು ಎನ್ನುವವರು ಈ ಕಾರ್ ಹೇಗಿದೆ ಎಂದು ನೋಡಬಹುದು. ಈ ಕಾರ್ ನಾಲ್ಕು ಮಂದಿ ಕುಳಿತುಕೊಳ್ಳಬಹುದಾದ ಸೀಟಿಂಗ್ ಕೆಪಾಸಿಟಿ ಹೊಂದಿದೆ.

ಇದನ್ನೂ ಓದಿ: ತುಮಕೂರು: ಕಾರ್ ಖರೀದಿಗೆ ಬಂದ ರೈತನಿಗೆ ಅವಮಾನ; 10 ಲಕ್ಷ ರೂ. ತಂದು ಕಾರ್ ನೀಡುವಂತೆ ಪಟ್ಟು ಹಿಡಿದ ರೈತ

ಇದನ್ನೂ ಓದಿ: ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅಪಘಾತ ಮಾಡಿಕೊಂಡ ವ್ಯಕ್ತಿ: ವೈರಲ್​ ಆದ ಜಖಂಗೊಂಡ ಕಾರಿನ ಫೋಟೊ

Follow us on