Vodafone Idea: ಬಂದ್ ಆಗಲಿದೆಯಾ ವೊಡಾಫೋನ್-ಐಡಿಯಾ?

| Updated By: ಝಾಹಿರ್ ಯೂಸುಫ್

Updated on: Aug 02, 2021 | 8:25 PM

AGR ಅಥವಾ ಅಡ್ಜಸ್ಟೆಡ್‌ ಗ್ರಾಸ್‌ ರೆವೆನ್ಯೂ. ಅಂದರೆ ಖಾಸಗಿ ಟೆಲಿಕಾಂ ಕಂಪನಿಗಳು ಲೈಸನ್ಸ್‌ ಮತ್ತು ಸ್ಪೆಕ್ಟ್ರಮ್‌ ಬಳಕೆಯ ಸಲುವಾಗಿ ದೂರಸಂಪರ್ಕ ಇಲಾಖೆಗೆ ಶುಲ್ಕವನ್ನು ಸಲ್ಲಿಸಬೇಕಾಗುತ್ತದೆ.

Vodafone Idea: ಬಂದ್ ಆಗಲಿದೆಯಾ ವೊಡಾಫೋನ್-ಐಡಿಯಾ?
ವಿ (ವೊಡಾಫೋನ್-ಐಡಿಯಾ) 249 ರೂ. ಪ್ಲ್ಯಾನ್: ವೊಡಾಫೋನ್-ಐಡಿಯಾ ಪರಿಚಯಿಸಿರುವ 249 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ, 100 ಎಸ್​ಎಂಎಸ್​ ಹಾಗೂ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ 28 ದಿನಗಳು.
Follow us on

ಆದಿತ್ಯ ಬಿರ್ಲಾ ಕಂಪೆನಿಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು ವೊಡಾಫೋನ್ ಐಡಿಯಾ ಲಿಮಿಟೆಡ್ ( Vodafone Idea ) ನಲ್ಲಿನ ತನ್ನ ಪಾಲನ್ನು ಸರ್ಕಾರಕ್ಕೆ ಅಥವಾ ಯೋಗ್ಯವಾದ ಮತ್ತೊಂದು ಸಂಸ್ಥೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಯು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಹೀಗಾಗಿ ಕಂಪೆನಿಯ ಪ್ರಮುಖ ಪಾಲನ್ನೇ ಬೇರೊಂದು ಕಂಪೆನಿ ಹಸ್ತಾಂತರಿಸಲು ಆದಿತ್ಯ ಬಯಸಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಇದೀಗ ವೊಡಾಫೋನ್-ಐಡಿಯಾ (Vodafone Idea) ಟೆಲಿಕಾಂ ಕಂಪೆನಿಯ ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದೆ.

ಏಕೆಂದರೆ ಅಧಿಕೃತ ಅಂಕಿಅಂಶಗಳ ಪ್ರಕಾರ, ವೊಡಾಫೋನ್ ಐಡಿಯಾ ಲಿಮಿಟೆಡ್ ಒಟ್ಟು ರೂ 58,254 ಕೋಟಿಗಳಷ್ಟು ಹೊಣೆಗಾರಿಕೆಯನ್ನು ಹೊಂದಿದ್ದು, ಒಟ್ಟು ಆದಾಯದ ಮೇಲೆ AGR ಬಾಕಿಯನ್ನು ಉಳಿಸಿಕೊಂಡಿದೆ. ಈ ಪೈಕಿ ಕಂಪನಿಯು ರೂ .78,54.37 ಕೋಟಿಯನ್ನು ಪಾವತಿಸಿದೆ. ಇನ್ನೂ ರೂ .50,399.63 ಕೋಟಿಗಳಷ್ಟು ( Vodafone AGR dues ) ಬಾಕಿ ಉಳಿಸಿಕೊಂಡಿದೆ. ವಿಐಎಲ್ ಮತ್ತು ಭಾರತಿ ಏರ್‌ಟೆಲ್ ಸುಪ್ರೀಂ ಕೋರ್ಟ್‌ಗೆ ಎಜಿಆರ್ ಲೆಕ್ಕಾಚಾರದ ತಿದ್ದುಪಡಿಗಾಗಿ ಮನವಿ ಮಾಡಿದ್ದರೂ ಈ ಕಂಪೆನಿಗಳ ಮನವಿಯನ್ನು ತಿರಸ್ಕರಿಸಲಾಯಿತು. ಇದೀಗ ಭಾರೀ ಮೊತ್ತವನ್ನು ಉಳಿಸಿಕೊಂಡು ನಷ್ಟಕ್ಕೆ ಸಿಲುಕಿರುವ ವೊಡಾಫೋನ್-ಐಡಿಯಾ ಕಂಪೆನಿಯ ಮುಂದಿನ ನಡೆಯೇನು ಎಂಬ ಪ್ರಶ್ನೆಯ ಬೆನ್ನಲ್ಲೇ, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷರ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

ಜೂನ್ 7 ರಂದು ಕುಮಾರ್​ ಮಂಗಳಂ ಅವರು ಬರೆದ ಪತ್ರದಲ್ಲಿ ಕಂಪೆನಿಯ ನಷ್ಟದ ಬಗ್ಗೆ ಪ್ರಸ್ತಾಪಿಸಿದ್ದು, ಜುಲೈ ವೇಳೆಗೆ ಈ ಸಮಸ್ಯೆಗಳಿಗೆ ಸರ್ಕಾರದಿಂದ ತಕ್ಷಣದ ಸಹಕಾರ ಸಿಗದಿದ್ದರೆ, ವೊಡಾಫೋನ್-ಐಡಿಯಾ ಕಂಪೆನಿಯ ಆರ್ಥಿಕ ಸ್ಥಿತಿ ಮುಳುಗುವ ಹಂತಕ್ಕೆ ತಲುಪುತ್ತದೆ. ಇದರಿಂದ ಕಂಪೆನಿಯನ್ನು ನಿರ್ವಹಿಸುವುದು ಕಷ್ಟಕರವಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷರೇ ತಮ್ಮ ಶೇರ್​ನ್ನು ನೀಡಲು ಮುಂದಾಗಿದ್ದಾರೆ. ಅದು ಸರ್ಕಾರಕ್ಕೆ ನೀಡಬಹುದು ಅಥವಾ ಕಂಪೆನಿಯನ್ನು ಮುಂದುವರೆಸಲು ಅರ್ಹತೆ ಹೊಂದಿರುವ ಇತರೆ ಸಂಸ್ಥೆಗೆ ನೀಡಬಹುದು. ಈ ಬಗ್ಗೆ ಜೂನ್ ನಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾಗೆ ಬರೆದ ಪತ್ರದಲ್ಲಿ ಕೈಗಾರಿಕೋದ್ಯಮಿ ಕುಮಾರ್​ ಮಂಗಳಂ ಅವರು ಸ್ಪಷ್ಟವಾಗಿ ಪ್ರಸ್ತಾಪಿಸಿದ್ದಾರೆ.

ವೊಡಾಫೋನ್-ಐಡಿಯಾ ಕಂಪೆನಿಯಲ್ಲಿ 27 ಕೋಟಿ ಬಳಕೆದಾರರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯನ್ನು ಮುಂದುವರಿಸಲು ಸಮರ್ಥವಾಗಿರುವ ಸಂಸ್ಥೆಗೆ ಅಥವಾ ಕಂಪನಿಯಲ್ಲಿನ ತಮ್ಮ ಶೇ.27 ರಷ್ಟು ಪಾಲನ್ನು ಸರ್ಕಾರಕ್ಕೆ ಹಸ್ತಾಂತರಿಸಲು ನಾನು ಸಿದ್ಧ ಎಂದು ಆದಿತ್ಯ ಬಿರ್ಲಾ ಕಂಪೆನಿ ಅಧ್ಯಕ್ಷ ಕುಮಾರ್ ಮಂಗಳಂ  ತಿಳಿಸಿದ್ದಾರೆ. ಆದರೆ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಂಪೆನಿಯಲ್ಲಿ ಹೂಡಿಕೆ ಮಾಡಲು ಪ್ರಮುಖ ಟೆಲಿಕಾಂ ಕಂಪೆನಿಗಳು ಹಿಂದೇಟು ಹಾಕುತ್ತಿದ್ದಾರೆ. ಇದಾಗ್ಯೂ ಇತ್ತೀಚೆಗೆ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಾರ್ಗದ ಮೂಲಕ 15,000 ಕೋಟಿ ರೂಪಾಯಿಗಳ ಹೂಡಿಕೆಗೆ ವೊಡಾಫೋನ್ ಐಡಿಯಾ (VI) ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ.

ಏನಿದು ಎಜಿಆರ್ (AGR)?
AGR ಅಥವಾ ಅಡ್ಜಸ್ಟೆಡ್‌ ಗ್ರಾಸ್‌ ರೆವೆನ್ಯೂ. ಅಂದರೆ ಖಾಸಗಿ ಟೆಲಿಕಾಂ ಕಂಪನಿಗಳು ಲೈಸನ್ಸ್‌ ಮತ್ತು ಸ್ಪೆಕ್ಟ್ರಮ್‌ ಬಳಕೆಯ ಸಲುವಾಗಿ ದೂರಸಂಪರ್ಕ ಇಲಾಖೆಗೆ ಶುಲ್ಕವನ್ನು ಸಲ್ಲಿಸಬೇಕಾಗುತ್ತದೆ. ಇದನ್ನು ಅಡ್ಜಸ್ಟೆಡ್‌ ಗ್ರಾಸ್‌ ರೆವೆನ್ಯೂ ಪದ್ಧತಿಯ ಅಡಿಯಲ್ಲಿ ದೂರಸಂಪರ್ಕ ಇಲಾಖೆ ನಿಗದಿ ಪಡಿಸುತ್ತದೆ. ಈ ಮೊತ್ತವನ್ನು ಏರ್​ಟೆಲ್ ಹಾಗೂ ವೊಡಾಫೋನ್-ಐಡಿಯಾ ಪಾವತಿಸಿರಲಿಲ್ಲ. ಹೀಗಾಗಿ ದೂರಸಂಪರ್ಕ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಾದ-ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಕಳೆದ ವರ್ಷ ದೂರಸಂಪರ್ಕ ಇಲಾಖೆಯ ಪರ ತೀರ್ಪು ನೀಡಿತ್ತು. ಅದರಂತೆ ವೊಡಾಫೋನ್ ಕಂಪೆನಿಯು ದೂರ ಸಂಪರ್ಕ ಇಲಾಖೆಗೆ ರೂ 50,399.63 ಕೋಟಿ ಮೊತ್ತವನ್ನು ಪಾವತಿಸಬೇಕಿದೆ.

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!

(Kumar Mangalam Birla offers to hand over VI stake: Vodafone Idea to shut down?)