ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ (Lava) ಕಂಪನಿ ಇತ್ತೀಚೆಗಷ್ಟೆ ದೇಶದಲ್ಲಿ ಅತಿ ಅಗ್ಗದ 5ಜಿ ಫೋನ್ ಲಾವಾ ಬ್ಲೇಜ್ 5ಜಿ (Lava Blaze 5G) ಅನ್ನು ಅನಾವರಣ ಮಾಡಿತ್ತು. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 9,999 ರೂ. ವಿನ ಈ ಫೋನ್ ಬಜೆಟ್ ಪ್ರಿಯರ ನೆಚ್ಚಿನ ಮೊಬೈಲ್ ಆಗಿಬಿಟ್ಟಿದೆ. ಹೀಗಿರುವಾಗ ಇದೇ ಫೋನಿನ ಅಪ್ಡೇಟ್ ವರ್ಷನ್ ಆಗಿ ಲಾವಾ ಬ್ಲೇಜ್ ಎನ್ಎಕ್ಸ್ಟಿ (Lava Blaze NXT) ಎಂಬ ಹೊಸ ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಇದುಕೂಡ ಬಲೆಟ್ ಫ್ರೆಂಡ್ಲಿ ಫೋನಾಗಿದ್ದು ಬೆಲೆಗೆ ತಕ್ಕಂತೆ ಅತ್ಯುತ್ತಮ ಫೀಚರ್ಗಳಿಂದ ಕೂಡಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
ಲಾವಾ ಬ್ಲೇಜ್ NXT ಸ್ಮಾರ್ಟ್‌ಫೋನ್ ಭಾರತದಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ಮಾದರಿಗೆ ಕೇವಲ 9,299 ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ ಈ ಫೋನಿನ ಬೆಲೆಯನ್ನು ಖಚಿತ ಪಡಿಸಿದೆ. ಆದರೆ, ಯಾವಾಗಿನಿಂದ ಖರೀದಿಗೆ ಸಿಗಲಿದೆ ಎಂಬುದು ಬಹಿರಂಗವಾಗಿಲ್ಲ. ಕೆಂಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಮಾರಾಟ ಕಾಣಲಿದೆ.
Introducing Blaze NXT
✅ MediaTek Helio G37 Processor
✅ 4GB RAM + 3GB Virtual RAM
✅ 16.55cm (6.5)” HD+ IPS Display
✅ 13MP AI Triple Camera
✅ 5000mAh BatteryPrice: Rs. 9,299/-
Get Notified: https://t.co/s4AkK6uAFq#BlazeNXT #TheNXTLevel #LavaMobiles #ProudlyIndian pic.twitter.com/PuzkiXTdsj
— Lava Mobiles (@LavaMobile) November 25, 2022
ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. 60Hz ರಿಫ್ರೆಶ್ ದರಕ್ಕೆ ಬೆಂಬಲಿಸುತ್ತದೆ. ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಪವರ್ ನೀಡಲಾಗಿದ್ದು 64GB ಸ್ಟೋರೇಜ್ ಮಾಡಬಹುದು.
ಲಾವಾ ಬ್ಲೇಜ್ NXT ಸ್ಮಾರ್ಟ್‌ಫೋನ್ AI- ಬೆಂಬಲಿತ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಉಳಿದ ಕ್ಯಾಮೆರಾ ಎಷ್ಟು ಮೆಗಾಫಿಕ್ಸೆಲ್ ಎಂಬುದು ಬಹಿರಂಗವಾಗಿಲ್ಲ. ಇದರಲ್ಲಿರುವ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, ಬ್ಯೂಟಿ, ಫಿಲ್ಟರ್‌ಗಳು, GIF, HDR, ಮ್ಯಾಕ್ರೋ, ಮೋಷನ್, ನೈಟ್, ಪನೋರಮಾ, ಪೋರ್ಟ್ರೇಟ್, ಸ್ಲೋ ಮೋಷನ್ ಟೈಮ್‌ಲ್ಯಾಪ್ಸ್ ನಂತಹ ವಿಭಿನ್ನ ಫೀಚರ್ಸ್‌ಗಳು ಇರುವ ಸಾಧ್ಯತೆ ಇದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಫಾಸ್ಟ್ ಚಾರ್ಜರ್ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ V5.1, GLONASS, 3.5mm ಆಡಿಯೋ ಜ್ಯಾಕ್, Wi-Fi 802.11 b/g/n/ac, GPRS ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Published On - 12:29 pm, Fri, 25 November 22