ಲಾವಾದಿಂದ ಮಹತ್ವದ ಘೋಷಣೆ: ಬರುತ್ತಿದೆ ಹೊಸ ದೇಶೀಯ ಸ್ಮಾರ್ಟ್​ಫೋನ್

|

Updated on: Oct 24, 2023 | 12:37 PM

Lava Blaze 2 5G Launching Soon: ಲಾವಾ ಕಂಪನಿ ತನ್ನ X ಖಾತೆಯಲ್ಲಿ ಲಾವಾ ಬ್ಲೇಜಾ 2 5G ಯ ​​ಸ್ನೀಕ್ ಪೀಕ್ ಅನ್ನು ಹಂಚಿಕೊಂಡಿದೆ. ಶೇರ್ ಮಾಡಿಕೊಂಡಿರುವ ಟೀಸರ್‌ನಲ್ಲಿ ಲಾವಾ ಬ್ಲೇಜಾ 2 5G ಬಿಡುಗಡೆಯ ನಿರ್ದಿಷ್ಟ ದಿನಾಂಕವನ್ನು ನಮೂದಿಸಿಲ್ಲ. ಆದರೆ, ಟೀಸರ್‌ನಲ್ಲಿ ಮುಂಬರುವ ಬ್ಲೇಜ್ ಸರಣಿಯ ಫೋನಿನ ಹಿಂಭಾಗವು ವೃತ್ತಾಕಾರದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದು ಖಚಿತವಾಗಿದೆ.

ಲಾವಾದಿಂದ ಮಹತ್ವದ ಘೋಷಣೆ: ಬರುತ್ತಿದೆ ಹೊಸ ದೇಶೀಯ ಸ್ಮಾರ್ಟ್​ಫೋನ್
Lava Blaze 2 5G
Follow us on

ಭಾರತದ ಪ್ರಸಿದ್ಧ ಲಾವಾ ಕಂಪನಿ ಸೆಪ್ಟೆಂಬರ್‌ನಲ್ಲಿ ಲಾವಾ ಬ್ಲೇಜಾ ಪ್ರೊ 5G ಮತ್ತು ಲಾವಾ ಬ್ಲೇಜಾ 2 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದ ನಂತರ, ಇದೀಗ ಕಂಪನಿ ಲಾವಾ ಬ್ಲೇಜಾ 2 5G (Lava Blaze 2 5G) ಅನ್ನು ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ. ಲಾವಾ ಬ್ಲೇಜಾ 2 4G ಬಿಡುಗಡೆಯಾದ ಕೆಲವು ತಿಂಗಳ ನಂತರ ಕಂಪನಿಯು ಲಾವಾ ಬ್ಲೇಜಾ 2 5G ಬಿಡುಗಡೆ ಕುರಿತ ಸಣ್ಣ ಟೀಸರ್ ಹಂಚಿಕೊಂಡಿದೆ. ಹಿಂದಿನ ಸ್ಮಾರ್ಟ್​ಫೋನ್​ಗಳಿಗೆ ಹೋಲಿಸಿದರೆ ಇದು ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ ಎನ್ನಲಾಗಿದೆ.

ಲಾವಾ ಬ್ಲೇಜಾ 2 5G:

ಲಾವಾ ಕಂಪನಿ ತನ್ನ X ಖಾತೆಯಲ್ಲಿ ಲಾವಾ ಬ್ಲೇಜಾ 2 5G ಯ ​​ಸ್ನೀಕ್ ಪೀಕ್ ಅನ್ನು ಹಂಚಿಕೊಂಡಿದೆ. ಶೇರ್ ಮಾಡಿಕೊಂಡಿರುವ ಟೀಸರ್‌ನಲ್ಲಿ ಲಾವಾ ಬ್ಲೇಜಾ 2 5G ಬಿಡುಗಡೆಯ ನಿರ್ದಿಷ್ಟ ದಿನಾಂಕವನ್ನು ನಮೂದಿಸಿಲ್ಲ. ಆದರೆ, ಟೀಸರ್‌ನಲ್ಲಿ ಮುಂಬರುವ ಬ್ಲೇಜ್ ಸರಣಿಯ ಫೋನಿನ ಹಿಂಭಾಗವು ವೃತ್ತಾಕಾರದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದು ಖಚಿತವಾಗಿದೆ.

ಇದನ್ನೂ ಓದಿ
5G ಬಳಸುವಾಗ ಡೇಟಾ ಬೇಗನೆ ಖಾಲಿ ಆಗುತ್ತಾ?: ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ
ಭಾರತದಲ್ಲಿ ಬಹುನಿರೀಕ್ಷಿತ ವಿವೋ Y200 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?
ಬಜೆಟ್ ಬೆಲೆ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿವೋ Y78t
ಇಂದು ಬಿಡುಗಡೆ: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ವಿವೋ Y200 ಫೋನ್

ಲಾವಾ ಬ್ಲೇಜಾ 2 5G ಕುರಿತು ಕಂಪನಿ ಹಂಚಿಕೊಂಡ ವಿಡಿಯೋ:

 

ಲಾವಾ ಬ್ಲೇಜಾ 2 5G ನಿರೀಕ್ಷಿತ ಫೀಚರ್ಸ್:

ಲಾವಾ ಬ್ಲೇಜಾ 2 5G ಹಿಂಭಾಗದಲ್ಲಿ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50MP ಆಗಿದ್ದು, ಹೆಚ್ಚುವರಿ ಸಂವೇದಕ ಮತ್ತು LED ಫ್ಲ್ಯಾಶ್ ಇರುತ್ತದೆ. ಸೋರಿಕೆಯಾದ ವಿಡಿಯೋದ ಮೂಲಕ, ಲಾವಾ ಬ್ಲೇಜಾ 2 5G ಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಅಳವಡಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದನ್ನು ಸಾಮಾನ್ಯವಾಗಿ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಬಳಸಲಾಗುತ್ತದೆ ಮತ್ತು Mali G57 GPU ಅನ್ನು ಒಳಗೊಂಡಿರುತ್ತದೆ.

Reliance Jio: 1 ವರ್ಷ ಅಮೆಜಾನ್ ಪ್ರೈಮ್ ಫ್ರೀ: ಜಿಯೋದಿಂದ ಹೊಸ ಬಂಪರ್ ಪ್ಲಾನ ಬಿಡುಗಡೆ

ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗುವ ಅಂದಾಜಿದೆ. ಒಂದು 4GB RAM ಮತ್ತು 64GB ಸಂಗ್ರಹಣೆ ಮತ್ತು ಇನ್ನೊಂದು 6GB RAM ಮತ್ತು 128GB ಸಂಗ್ರಹಣೆ. ಬ್ಲೇಜ್ 5G ಯ ​​4GB RAM ಮಾದರಿಯು 4GB ವರ್ಚುವಲ್ RAM ಅನ್ನು ಸಹ ಒದಗಿಸಬಹುದು. ಲಾವಾ ಬ್ಲೇಜಾ 2 5G 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ. ಈ ಫೋನ್​ನಲ್ಲಿ 3.5 ಎಂಎಂ ಆಡಿಯೋ ಜಾಕ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ