ಚಾಟ್ ಜಿಪಿಟಿ ಬಂದ ಮೇಲೆ ಬದುಕು ಸುಲಭವಾಗಿದೆ ಎಂದೇ ಹೇಳಬಹುದು. ಏನೇ ಪ್ರಶ್ನೆ ಕೇಳಿದರೂ ಎಲ್ಲದಕ್ಕೂ ಚಾಟ್ ಜಿಪಿಟಿ (ChatGPT) ಫಟಾಫಟ್ ಆಗಿ ಉತ್ತರ ನೀಡುತ್ತದೆ. ಚಾಟ್ ಜಿಪಿಟಿ ಎನ್ನುವುದು ಒಂದು ಚಾಟ್‌ಬಾಟ್. ನಾವು ಪಠ್ಯರೂಪದಲ್ಲಿ (Text) ಮೂಲಕ ಪ್ರಶ್ನೆ ಕೇಳಿದರೆ ಅದನ್ನು ಗ್ರಹಿಸಿ ಪಠ್ಯರೂಪದಲ್ಲೇ ಅದು ಉತ್ತರಿಸುತ್ತದೆ. ಹಾಗಾಗಿ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಹಾಯ ಮಾಡುವಲ್ಲಿ ChatGPT ನಮ್ಮ ಎಐ ಸ್ನೇಹಿತ ಆಗಿಬಿಟ್ಟಿದೆ. ಚಾಟ್ ಜಿಪಿಟಿ ಎಂಬುದು ಚಾಟ್‌ಬಾಟ್ ಎಂದು ಮೊದಲೇ ಹೇಳಿಯಾಗಿದೆ. ಇದರಲ್ಲಿ ‘GPT ‘ ಅಂದರೆ ‘Generative Pre-trained Transformer’. ಇದೊಂದು ಬಗೆಯ ಮಶೀನ್ ಲರ್ನಿಂಗ್ ಮಾಡೆಲ್. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ ಜಿಪಿಟಿ ಪಠ್ಯರೂಪದಲ್ಲಿರುವ ದತ್ತಾಂಶವನ್ನು ಸಂಸ್ಕರಿಸುವುದರ ಮೂಲಕ ನಮಗೆ ಬೇಕಾದ ಪಠ್ಯವನ್ನು ನಾವು ಹೇಳಿದಂತೆ ಅಂದರೆ ನಾವು ಕೊಟ್ಟ ಸೂಚನೆ/ಕಾರ್ಯವನ್ನು ಗ್ರಹಿಸಿ ಅದು ನಮಗೆ ಬರೆದುಕೊಡುತ್ತದೆ. ಅದು ಕೊಟ್ಟ ಉತ್ತರ ಸಮರ್ಪಕವಾಗಿಲ್ಲ ಅಥವಾ ನಮಗೆ ಬೇಕಾದಂತೆ ಇಲ್ಲ ಎಂದು ಅನಿಸಿದರೆ ಮತ್ತೆ ಮತ್ತೆ ಅದನ್ನು ಕೇಳಬಹುದು. ಉದಾಹರಣೆಗೆ 60 ಪದಗಳಲ್ಲಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಬರೆದುಕೊಡಿ ಎಂದರೆ ಚಾಟ್ ಜಿಪಿಟಿ ಈ ಸೂಚನೆಯನ್ನು ಗ್ರಹಿಸಿ ಪಠ್ಯ ಮೂಲಕ ಉತ್ತರಿಸುತ್ತದೆ. ಹಾಗಾಗಿ ಚಾಟ್ ಜಿಪಿಟಿ ದೈನಂದಿನ ಬಹುತೇಕ ಕೆಲಸಗಳನ್ನು ಸುಲಭ ಮಾಡಿದೆ. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಓಪನ್ ಎಐ ಮತ್ತು ಚಾಟ್ ಜಿಪಿಟಿಗಳು ಬಂದ ನಂತರ ಹೊಸ ಹೊಸ ಫೀಚರ್ ಗಳು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಪ್ರಿಯರಿಗೆ ಹೊಸ ಅನುಭವಗಳನ್ನು ನೀಡುತ್ತಿವೆ....
Published On - 1:21 pm, Sat, 20 July 24