WhatsApp Avatar: ವಾಟ್ಸ್​ಆ್ಯಪ್​ನಲ್ಲಿ ಹೊಸ ‘ಅವತಾರ್’; ಏನಿದು ನೂತನ ವೈಶಿಷ್ಟ್ಯ?

| Updated By: ಗಣಪತಿ ಶರ್ಮ

Updated on: Dec 07, 2022 | 4:48 PM

ಸ್ನ್ಯಾಪ್​ಚಾಟ್​ನ ಕಸ್ಟಮೈಸೇಬಲ್ ಕ್ಯಾರಕ್ಟರ್​​ಗಳಂತೆಯೇ ಅವತಾರ್ ಸ್ಟಿಕ್ಕರ್​ಗಳೂ ಇರಲಿವೆ. ಮೆಟಾದ ಅವತಾರ್​ ಸ್ಟಿಕ್ಕರ್​​ಗಳನ್ನು ವರ್ಚುವಲ್ ಆಗಿ ಬಿಟ್ಮೊಜಿಗಳನ್ನಾಗಿಯೂ ಪರಿವರ್ತಿಸಬಹುದು.

WhatsApp Avatar: ವಾಟ್ಸ್​ಆ್ಯಪ್​ನಲ್ಲಿ ಹೊಸ ‘ಅವತಾರ್’; ಏನಿದು ನೂತನ ವೈಶಿಷ್ಟ್ಯ?
ವಾಟ್ಸ್​ಆ್ಯಪ್ ‘ಅವತಾರ್’ ಫೀಚರ್
Follow us on

‘ಅವತಾರ್’ ಫೀಚರ್ ಇನ್ನು ವಾಟ್ಸ್​ಆ್ಯಪ್​ನಲ್ಲಿ (WhatsApp) ದೊರೆಯಲಿದೆ ಎಂದು ಮೆಟಾ (Meta) ತಿಳಿಸಿದೆ. ‘ಅವತಾರ್ (Avatar feature)’ ಫೀಚರ್​​ ಬಳಸಿಕೊಂಡು ಬಳಕೆದಾರರು 36 ಕಸ್ಟಮ್ ಸ್ಟಿಕ್ಕರ್​ಗಳನ್ನು ರಚಿಸಬಹುದಾಗಿದೆ. ಹೀಗೆ ರಚಿಸಿದ ಸ್ಟಿಕ್ಕರ್​​ಗಳನ್ನು ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಳ್ಳಲೂ ಅವಕಾಶವಿದೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್ ಡಿವೈಸ್​ಗಳ ಬೀಟಾ ವರ್ಷನ್​​ನಲ್ಲಿ ‘ಅವತಾರ್’ ಫೀಚರ್ ಕೆಲವು ಸಮಯದ ವರೆಗೆ ದೊರೆಯಲಿದೆ. ಸದ್ಯದಲ್ಲೇ ಎಲ್ಲ ಬಳಕೆದಾರರಿಗೂ ‘ಅವತಾರ್’ ಫೀಚರ್ ದೊರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಹೇಗಿರಲಿದೆ ‘ಅವತಾರ್’?

ಸ್ನ್ಯಾಪ್​ಚಾಟ್​ನ ಕಸ್ಟಮೈಸೇಬಲ್ ಕ್ಯಾರಕ್ಟರ್​​ಗಳಂತೆಯೇ ಅವತಾರ್ ಸ್ಟಿಕ್ಕರ್​ಗಳೂ ಇರಲಿವೆ. ಮೆಟಾದ ಅವತಾರ್​ ಸ್ಟಿಕ್ಕರ್​​ಗಳನ್ನು ವರ್ಚುವಲ್ ಆಗಿ ಬಿಟ್ಮೊಜಿಗಳನ್ನಾಗಿಯೂ ಪರಿವರ್ತಿಸಬಹುದು.

ವಾಬೀಟಾಇನ್ಫೋ ಪ್ರಕಾರ, ವಾಟ್ಸ್​​ಆ್ಯಪ್​​ನಲ್ಲಿ ಸಂವಹನಕ್ಕೆ ‘ಅವತಾರ್’ ಉತ್ತಮ ಆಯ್ಕೆಯಾಗಿರಲಿದೆ. ಆರಂಭಿಕ ಹಂತದಲ್ಲಿರುವುದರಿಂದ ಸದ್ಯ ಬಳಕೆದಾರರು ಕೆಲವು ಲೋಪಗಳನ್ನು ಎದುರಿಸುವ ಸಾಧ್ಯತೆಯೂ ಇದೆ. ಕೆಲವು ಮಂದಿಗೆ ವಾಟ್ಸ್​ಆ್ಯಪ್ ಅಪ್​ಡೇಟ್ ಮಾಡಿಕೊಂಡ ಬಳಿಕ ‘ಅವತಾರ್’ ಫೀಚರ್ ಲಭ್ಯವಾಗುತ್ತಿದೆ.

ಇದನ್ನೂ ಓದಿ: Tech Tips: ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋ, ವಿಡಿಯೋವನ್ನು ಮರಳಿ ಪಡೆಯುವುದು ಹೇಗೆ?

ಲೈಟಿಂಗ್, ಕೇಶವಿನ್ಯಾಸ, ಇತರ ಡಿಸೈನ್​ಗಳು, ಶೇಡಿಂಗ್ ಮತ್ತು ಇತರ ಹಲವು ಆಯ್ಕೆಗಳು ‘ಅವತಾರ್’ನಲ್ಲಿ ಲಭ್ಯವಿವೆ.

‘ಅವತಾರ್’ ಫೀಚರ್ ಬಳಸುವುದು ಹೇಗೆ?

ಐಒಎಸ್​​ನಲ್ಲಿ ವಾಟ್ಸ್​ಆ್ಯಪ್​ ಚಾಟ್ ಓಪನ್ ಮಾಡಿ ಸ್ಟಿಕ್ಕರ್ಸ್ ಆಯ್ಕೆಗೆ ಭೇಟಿ ನೀಡಿ. ಆ್ಯಂಡ್ರಾಯ್ಡ್​​ನಲ್ಲಿ ಇಮೋಜಿ ಸಿಂಬಲ್​ ಅನ್ನು ಟ್ಯಾಪ್ ಮಾಡಿ. ಅಲ್ಲಿ ನಿಮಗೆ ಜಿಫ್ ಆಯ್ಕೆಯ ನಂತರ ಸ್ಟಿಕ್ಕರ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್​ನಲ್ಲಿ ‘ಅವತಾರ್’ ಆಯ್ಕೆ ಇದ್ದರೆ ಅಲ್ಲಿ ಕಾಣಿಸುತ್ತದೆ. ಅಲ್ಲಿಂದ ಒಂದು ‘ಅವತಾರ್’ ಅನ್ನು ಟ್ಯಾಪ್ ಮಾಡಿ. ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಗೆಟ್ ಸ್ಟಾರ್ಟೆಡ್’ ಆಯ್ಕೆ ಮಾಡುವ ಮೂಲಕ ‘ಅವತಾರ್’ ಸ್ಟಿಕ್ಕರ್ ರಚಿಸಬಹುದು. ಒಮ್ಮೆ ಸ್ಟಿಕ್ಕರ್ ರಚಿಸಿದ ನಂತರ ಅದನ್ನು ಸೇವ್ ಮಾಡಿ. ಅದನ್ನು ವಾಟ್ಸ್​ಆ್ಯಪ್ ನವೀಕರಿಸುವುದರ ಜತೆಗೆ ಹೊಸ ರೂಪದಲ್ಲಿ ಕಾಣುವಂತೆ ಮಾಡುತ್ತದೆ. ಇದಕ್ಕೆ ಕೆಲವು ನಿಮಿಷಗಳನ್ನು ವಾಟ್ಸ್​ಆ್ಯಪ್ ತೆಗೆದುಕೊಳ್ಳಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Wed, 7 December 22