Internet Explorer: 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸ್ಥಗಿತ..!

| Updated By: ಝಾಹಿರ್ ಯೂಸುಫ್

Updated on: Jun 15, 2022 | 6:07 PM

Microsofts' Internet Explorer: 27 ವರ್ಷಗಳ ಬಳಿಕ ಎಕ್ಸ್‌ಪ್ಲೋರರ್ ಸೇವೆ ಅಂತ್ಯಗೊಳ್ಳುತ್ತಿದ್ದು, 90 ರ ದಶಕದಲ್ಲಿ ಕಂಪ್ಯೂಟ್ ಬಳಸಿದವರು ಎಕ್ಸ್‌ಪ್ಲೋರರ್ ಜೊತೆಗಿನ ತಮ್ಮ ನೆನಪುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Internet Explorer: 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸ್ಥಗಿತ..!
Internet Explorer
Follow us on

GoodBye Internet Explorer: ಮೈಕ್ರೋಸಾಫ್ಟ್‌ನ ಜನಪ್ರಿಯ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ (Internet Explorer) ಇಂದಿನಿಂದ (ಜೂನ್ 15) ಸ್ಥಗಿತಗೊಳ್ಳಲಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು 27 ವರ್ಷಗಳ ಹಿಂದೆ, ಅಂದರೆ 1995 ರಲ್ಲಿ ವಿಂಡೋಸ್ 95 ಪಿಸಿಯಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ, ಬಳಕೆದಾರರು ಇದನ್ನು ಬಳಸಲು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕಾಲಕ್ರಮೇಣ ಮೈಕ್ರೋಸಾಫ್ಟ್​ ಎಕ್ಸ್‌ಪ್ಲೋರರ್ ಸೇವೆಯನ್ನು ಉಚಿತಗೊಳಿಸಿತ್ತು. ಇದೀಗ 27 ವರ್ಷಗಳ ಬಳಿಕ ಎಕ್ಸ್‌ಪ್ಲೋರರ್ ಸೇವೆ ಅಂತ್ಯಗೊಳ್ಳುತ್ತಿದ್ದು, 90 ರ ದಶಕದಲ್ಲಿ ಕಂಪ್ಯೂಟ್ ಬಳಸಿದವರು ಎಕ್ಸ್‌ಪ್ಲೋರರ್ ಜೊತೆಗಿನ ತಮ್ಮ ನೆನಪುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರ ಜೊತೆ ಅನೇಕ ಮೀಮ್ಸ್ ಕೂಡ ಹರಿದಾಡುತ್ತಿರುವುದು ವಿಶೇಷ.

ನ್ಯೂ ಜನರೇಷನ್​ಗೆ ಮೈಕ್ರೋಸಾಫ್ಟ್​ ಎಡ್ಜ್‌:
ಇದೀಗ ಮೈಕ್ರೋಸಾಫ್ಟ್​ ಅಪ್ಡೇಟೆಡ್ ವೆಬ್ ಬ್ರೌಸರ್ ಆಗಿ ಮೈಕ್ರೋಸಾಫ್ಟ್ ಎಡ್ಜ್​ ಅನ್ನು ಪರಿಚಯಿಸಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಳಸುವ ಬಳಕೆದಾರರು ಈಗ ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಅಲ್ಲದೆ ಎಡ್ಜ್​ ಈ ಹಿಂದಿಕ್ಕಿಂತ ವೇಗವಾಗಿ ಮತ್ತು ಹೆಚ್ಚು ಸುರಕ್ಷಿತವಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.

ವಿಶೇಷವೆಂದರೆ ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಬಳಕೆದಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೋಡ್ ಅನ್ನು ಪಡೆಯಬಹುದು. ಇದರಲ್ಲಿ ಬಳಕೆದಾರರು ಎಕ್ಸ್‌ಪ್ಲೋರರ್‌ನಲ್ಲಿ ಅತ್ಯುತ್ತಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನೇರವಾಗಿ ಬಳಸಬಹುದು. ಹೀಗಾಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್​ಗೆ ಹೊಂದಿಕೊಂಡಿರುವ ಹಿರಿಯ ಕಂಪ್ಯೂಟ್ ಬಳಕೆದಾರರು ಮೈಕ್ರೋಸಾಫ್ಟ್ ಎಡ್ಜ್​ನಲ್ಲಿ ಅದೇ ಸೇವೆಯನ್ನು ಪಡೆಯಬಹುದು ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

 

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ