ಇಂದು ಸ್ಮಾರ್ಟ್ಫೋನ್ಗಳನ್ನು ಬಳಸದಿರುವವರ ಸಂಖ್ಯೆ ತೀರಾ ಕಡಿಮೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್ಗಳು ಸಿಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಮೊಬೈಲ್ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದರ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ಫೋನ್ಗಳು ಸ್ಫೋಟಗೊಳ್ಳುವ (Mobile Blast) ಸಂಗತಿಗಳು ಕೂಡ ಹೆಚ್ಚುತ್ತಿದೆ. ಮೊಬೈಲ್ ಸ್ಪೋಟಗೊಂಡ ಸುದ್ದಿ ಇತ್ತೀಚಿನ ದಿನಗಳಲ್ಲಿ ವರದಿ ಆಗುತ್ತಲೇ ಇದೆ. ಇದರಿಂದ ಜೀವ ಹಾನಿ ಸಂಭವಿಸಿದ್ದೂ ಇದೆ. ಇತ್ತೀಚೆಗಷ್ಟೆ ಸ್ಯಾಮ್ಸಂಗ್ (Samsung), ಒನ್ಪ್ಲಸ್ ನಾರ್ಡ್ ಸ್ಮಾರ್ಟ್ಫೋನ್ಗಳು ಸ್ಪೋಟಗೊಂಡಿದ್ದು ಬಳಕೆದಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಶವೋಮಿ ಸರದಿ. ಶವೋಮಿ ಕಂಪನಿ 2021 ರಲ್ಲಿ ಬಿಡುಗಡೆ ಮಾಡಿದ್ದ ಶವೋಮಿ 11 ಲೈಟ್ ಎನ್ಇ 5ಜಿ (Xiaomi 11 Lite NE 5G) ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆದ ಬಗ್ಗೆ ವರದಿ ಆಗಿದೆ.
91ಮೊಬೈಲ್ಸ್ ಮಾಡಿರುವ ವರದಿಯ ಪ್ರಕಾರ, ಈ ಘಟನೆ ಬಿಹಾರದ ಭಾಗಲ್‌ಪುರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಮೊಹಿಯುದ್ದೀನ್ ನಗರದಲ್ಲಿ ವಾಸಿಸುವ ವ್ಯಕ್ತಿಯ ಶವೋಮಿ ಫೋನ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ವ್ಯಕ್ತಿಯು 91ಮೊಬೈಲ್ಸ್ಗೆ ವಿಡಿಯೋವನ್ನು ಶೇರ್ ಮಾಡಿದ್ದು, ಇದರಲ್ಲಿ ಹಾಸಿಗೆಯ ಮೇಲಿರುವ ಫೋನ್‌ಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಫೋನ್‌ಗೆ ಬೆಂಕಿ ಹೊತ್ತಿಕೊಂಡಾ ಈ ಮೊಬೈಲ್ ಚಾರ್ಜರ್‌ಗೆ ಸಂಪರ್ಕಗೊಂಡಿರಲಿಲ್ಲ. ಹಾಸಿಗೆಯ ಮೇಲೆ ಇಟ್ಟಿದ್ದ ಶವೋಮಿ 11 ಲೈಟ್ NE 5G ಫೋನ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಹೊಗೆ ಬರಲು ಪ್ರಾರಂಭವಾಗಿದೆ.
ಈ ಘಟನೆಯಿಂದ ಯಾರೂ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ. ಆದರೆ, ಈ ಸ್ಮಾರ್ಟ್ಫೋನ್ನಲ್ಲಿ ಯಾವ ಕಾರಣಕ್ಕಾಗಿ ಬೆಂಕಿ ಕಾಣಿಸಿಕೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಸ್ಪೋಟದ ಬಗ್ಗೆ ತನಿಖೆ ನಡೆಸಿದ ನಂತರ, ಬ್ಯಾಟರಿಯಲ್ಲಿ ಪಂಕ್ಚರ್ ಗುರುತುಗಳು ಕಂಡುಬಂದಿವೆ. ಅಂದರೆ ಫೋನ್ ಸ್ಫೋಟಗೊಳ್ಳುವಲ್ಲಿ ಗ್ರಾಹಕರ ತಪ್ಪೇ ಹೊರತು ಕಂಪನಿಯ ತಪ್ಪಲ್ಲ ಎಂದು ಕಂಪನಿ ಹೇಳಿದೆ. ಅಚ್ಚರಿ ಎಂದರೆ ಭಾರತದಲ್ಲೇ ಈರೀತಿಯ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದೆ. ಹಾಗಾದ್ರೆ ಯಾವುದೇ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗುವ ಮುನ್ನ ಅದರ ಲಕ್ಷಣಗಳು ಯಾವುವು? ಮತ್ತು ನಾವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ನೋಡೋಣ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Sat, 18 March 23