ಈಗೀಗ ಮೊಬೈಲ್ ಬ್ಲಾಸ್ಟ್ (Mobile Blast) ಆಗುತ್ತಿರುವ ಸುದ್ದಿಗಳು ಹೆಚ್ಚಾಗುತ್ತಿವೆ. ಇದರಿಂದ ಜೋಬಿನಲ್ಲಿ ಫೋನ್ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ. ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಎಂಬ ಭಯ ಕಾಡುತ್ತಿರುತ್ತದೆ. ಮೊಬೈಲ್ಗಳು ಹಾಗೆ ಸುಮ್ಮನೆ ಬ್ಲಾಸ್ಟ್ ಆಗುವುದಿಲ್ಲ. ಹಾಗಾದ್ರೆ ಯಾವುದೇ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗುವ ಮುನ್ನ ಅದರ ಲಕ್ಷಣಗಳು ಯಾವುವು? ಮತ್ತು ನಾವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ತಿಳಿಸಿಕೊಳ್ಳೋಣ.
ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಬಿಸಿಯಾಗುತ್ತಿದ್ದರೆ, ಅಥವಾ ನಿಮ್ಮ ಫೋನ್ ಹಿಂಬಾಗದಲ್ಲಿ ಬ್ಯಾಟರಿ ಊದಿಕೊಂಡತೆ ಕಾಣಿಸಿದರೆ ಅಂತಹ ಬ್ಯಾಟರಿಯನ್ನು ಕೂಡಲೇ ಬದಲಾಯಿಸಿಬಿಡಿ. ಏಕೆಂದರೆ, ಬ್ಯಾಟರಿ ಒಳಗಿನ ಸೆಲ್ಟ್ ತೀರ್ವತೆಯಿಂದ ಅದು ಯಾವಾಗ ಬೇಕಾದರು ಸ್ಪೋಟಗೊಳ್ಳಬಹುದು.
ನಿಮ್ಮ ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು. ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಯಿರುತ್ತದೆ.
ಇನ್ನೂ ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ಅನ್ನು ಚಾರ್ಜ್ಗೆ ಹಾಕಿಡುವ ಅಭ್ಯಾಸ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ನಿಮ್ಮ ಫೋನ್ ಶೇಕಡಾ 90ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಅಂತೆಯೆ ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ( ಬೆಳಗಿನ ಹೊತ್ತಿನಲ್ಲಿ) ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ.
ಮೊಬೈಲ್ ಫೋನುಗಳು ಸಾಮಾನ್ಯವಾಗಿ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ. ಜಾಗರೂಕತೆ ಮಾರ್ಗಗಳಲ್ಲಿ ಪ್ರಮುಖವಾದ ವಿಚಾರವೆಂದರೆ ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಗಳನ್ನುಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ.ಯಾವುದೇ ಡಿವೈಸ್ ಆಗಿರಲಿ, ಅದರಲ್ಲಿರುವ ಯಾವುದೇ ಒಂದು ಕಾರ್ಡ್ ಎಫೆಕ್ಟ್ ಗೆ ಒಳಗಾದರೂ, ನಿಮ್ಮ ಸ್ಮಾರ್ಟ್ ಫೋನ್ ಗೂ ಡ್ಯಾಮೇಜ್ ತಂದೊಡ್ಡುತ್ತದೆ.
Micromax IN 2B: ಭಾರತದಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ ದೇಶೀಯ ಸ್ಮಾರ್ಟ್‌ಫೋನ್: ಬೆಲೆಯಲ್ಲಿ ಏರಿಕೆ!
ಬಿಎಸ್ಎನ್ಎಲ್, ಜಿಯೋ, ಏರ್ಟೆಲ್ನಿಂದ ಒಂದೇ ದರದ ಪ್ಲಾನ್: ಎಷ್ಟು ಜಿಬಿ ಡೇಟಾ?, ವ್ಯಾಲಿಡಿಟಿ?
(Mobile blast Here is the reasons smartphone explode and how you can prevent it from happening)