AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Micromax IN 2B: ಭಾರತದಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ ದೇಶೀಯ ಸ್ಮಾರ್ಟ್​ಫೋನ್: ಬೆಲೆಯಲ್ಲಿ ಏರಿಕೆ!

ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮೈಕ್ರೋಮ್ಯಾಕ್ಸ್ ಇನ್ 2b ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದ್ದು, ಈ ಎರಡು ವೇರಿಯಂಟ್‌ ದರದಲ್ಲಿ ಈಗ 500 ರೂ. ಏರಿಕೆ ಮಾಡಲಾಗಿದೆ.

Micromax IN 2B: ಭಾರತದಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ ದೇಶೀಯ ಸ್ಮಾರ್ಟ್​ಫೋನ್: ಬೆಲೆಯಲ್ಲಿ ಏರಿಕೆ!
Micromax IN 2B
TV9 Web
| Updated By: Vinay Bhat|

Updated on: Aug 22, 2021 | 2:09 PM

Share

ಭಾರತದಲ್ಲಿ ಚೀನೀ ಸ್ಮಾರ್ಟ್​ಫೋನ್​ಗಳ ಹಾವಳಿಗಳ ನಡುವೆ ಸ್ವದೇಶಿ ಫೋನುಗಳು ಕೂಡ ಆಗಾಗ ಸದ್ದು ಮಾಡುತ್ತಿರುತ್ತವೆ. ಅಂತೆಯೆ ಭಾರತದ ಮೊಬೈಲ್‌ ಕಂಪೆನಿ ಮೈಕ್ರೋಮ್ಯಾಕ್ಸ್‌ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದ ಮೈಕ್ರೋಮ್ಯಾಕ್ಸ್ ಇನ್ 2b ಸ್ಮಾರ್ಟ್​ಫೋನ್ ಭರ್ಜರಿ ಸೇಲ್ ಕಾಣುತ್ತಿದೆ. ಇದರ ಬೆನ್ನಲ್ಲೇ ಈ ಫೋನಿನ ಬೆಲೆಯಲ್ಲಿ ಕೂಡ ಏರಿಕೆ ಮಾಡಲಾಗಿದೆ.

ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮೈಕ್ರೋಮ್ಯಾಕ್ಸ್ ಇನ್ 2b ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದ್ದು, ಈ ಎರಡು ವೇರಿಯಂಟ್‌ ದರದಲ್ಲಿ ಈಗ 500 ರೂ. ಏರಿಕೆ ಮಾಡಲಾಗಿದೆ. ಸದ್ಯ 4GB RAM ಮತ್ತು 64GB ವೇರಿಯಂಟ್ ಫೋನ್ 8,499 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 6GB RAM ಮತ್ತು 64GB ವೇರಿಯಂಟ್‌ ಫೋನ್ 9,499ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಈ ಫೋನ್ ಮಾರಾಟ ಕಾಣುತ್ತಿದೆ.

ಮೈಕ್ರೋಮ್ಯಾಕ್ಸ್ ಇನ್‌ 2B ಸ್ಮಾರ್ಟ್‌ಫೋನ್‌ 6.52-ಇಂಚಿನ HD+ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ.  ಇದು ಯುನಿಸಾಕ್ ಟಿ 610 ಆಕ್ಟಾ-ಕೋರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ನೈಟ್ ಮೋಡ್, ಹಿನ್ನೆಲೆ ಭಾವಚಿತ್ರ, ಸೌಂದರ್ಯ ಮೋಡ್, ಚಲನೆಯ ಫೋಟೋ, ಪ್ಲೇ ಮತ್ತು ವಿರಾಮ ವೀಡಿಯೊ ಶೂಟ್, ಮತ್ತು ಪೂರ್ಣ-ಎಚ್ಡಿ ಫ್ರಂಟ್ ಮತ್ತು ಬ್ಯಾಕ್ ರೆಕಾರ್ಡಿಂಗ್ ಸೇರಿವೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಇನ್ನೂ ದೀರ್ಘ ಬಾಳಿಕೆಯ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವೀಡಿಯೊ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ಟೈಮ್ ಅನ್ನು ನೀಡುತ್ತದೆ.

ಬಿಎಸ್​ಎನ್​ಎಲ್, ಜಿಯೋ, ಏರ್ಟೆಲ್​ನಿಂದ ಒಂದೇ ದರದ ಪ್ಲಾನ್: ಎಷ್ಟು ಜಿಬಿ ಡೇಟಾ?, ವ್ಯಾಲಿಡಿಟಿ?

Vivo Y33s: ಭಾರತದಲ್ಲಿ ನಾಳೆ ಬಿಡುಗಡೆ ಆಗಲಿದೆ ಆಕರ್ಷಕ ಫೀಚರ್​ನ ವಿವೋ ಕಂಪೆನಿಯ ಈ ಬಜೆಟ್ ಸ್ಮಾರ್ಟ್​ಫೋನ್

(Micromax IN 2B smartphone price hiked in india by Rs 500 now available on Flipkart)

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್