ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೊಸ ತನವನ್ನು ಪ್ರಯತ್ನ ಮಾಡುವುದರಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಈಗಂತು ಅಪರೂಪಕ್ಕೆ ಮೊಬೈಲ್ಗಳನ್ನು ಪರಿಚಯಿಸುತ್ತಿರುವ ಶವೋಮಿ ಸಮಯ ತೆಗೆದುಕೊಂಡ ವಿಭಿನ್ನವಾದ ಮೊಬೈಲ್ನೊಂದಿಗೆ ಬರುತ್ತದೆ. ಇದೀಗ ಕೆಲ ಸಮಯದ ಬಳಿಕ ತನ್ನ ರೆಡ್ಮಿ ಬ್ರ್ಯಾಂಡ್ನಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ (Smartphone) ಅನ್ನು ಬಿಡುಗಡೆ ಮಾಡಿದೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ ರೆಡ್ಮಿ ನೋಟ್ 12 4ಜಿ (Redmi Note 12 4G) ಸ್ಮಾರ್ಟ್‌ಫೋನ್ ರಿಲೀಸ್ ಆಗಿದೆ. ಈ ಸ್ಮಾರ್ಟ್‌ಫೋನ್ ಸಾಕಷ್ಟು ಬಲಿಷ್ಠವಾಗಿದ್ದು ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್, ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಮಾರ್ಚ್ 30 ರಂದು ಭಾರತದಲ್ಲಿ ರಿಲೀಸ್ ಆಗಲಿದೆ.
ಬೆಲೆ ಎಷ್ಟು?:
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ EUR 229, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 20,400 ರೂ. ಇರಬಹುದು. ಅಂತೆಯೆ 4GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ EUR 249, ಭಾರತದಲ್ಲಿ ಅಂದಾಜು 22,200 ರೂ. ಇರಬಹುದು. ಈ ಫೋನ್ ಐಸ್ ಬ್ಲೂ, ಮಿಂಟ್ ಬ್ಲೂ ಮತ್ತು ಗ್ರೇ ಕಲರ್ನಲ್ಲಿ ಖರೀದಿಗೆ ಸಿಗಲಿದೆ.
WhatsApp Web: ವಾಟ್ಸ್ಆ್ಯಪ್ನಿಂದ ವೆಬ್ ಬಳಕೆದಾರರಿಗೆ ಬಂತು ವಿಶೇಷ ಫೀಚರ್: ಕೂಡಲೇ ಅಪ್ಡೇಟ್ ಮಾಡಿ
ಏನಿದೆ ಫೀಚರ್ಸ್:
ಈ ಸ್ಮಾರ್ಟ್ಫೋನ್ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 1,080*2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಸಿನಿಮಾ ವೀಕ್ಷಣೆ ಮಾಡುವಾಗ, ಗೇಮ್ ಆಡುವಾಗ ವಿಶೇಷ ಅನುಭವ ನೀಡುತ್ತದೆ. 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಆಕ್ಟಾ-ಕೋರ್ ಕ್ವಾಲ್ಕಾಂ ಸ್ನಾಪ್ಡ್ರಾಗನ್ 685 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 13 ಆಧಾರಿತ MIUI 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 1TB ವರೆಗೆ ಮೆಮೋರಿ ಸಾಮರ್ಥ್ಯವನ್ನು ವಿಸ್ತರಿಸಬಹುದು.
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ನ ಸ್ಯಾಮ್ಸಂಗ್ JN1 ಪ್ರೈಮರಿ ಸೆನ್ಸಾರ್ನಲ್ಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮಾಕ್ರೊ ಲೆನ್ಸ್ ಆಗಿದೆ. ಇವುಗಳ ಜೊತಗೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ಸಾಕಷ್ಟು ಆಯ್ಕೆ ನೀಡಲಾಗಿದ್ದು, ನೈಟ್ ಮೋಡ್, ಎಐ ಬ್ಯೂಟಿಫೈ, ಪೊಟ್ರೈಟ್ ಮೋಡ್ ಸೇರಿದಂತೆ ಅನೇಕ ಫೀಚರ್ಸ್ ಇದೆ.
ಇನ್ನು ಈ ಫೋನ್ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುವುದಿಲ್ಲ. Wi-Fi 802.11, ಬ್ಲೂಟೂತ್ v5.0, ಮತ್ತು ಮಲ್ಟಿಫಂಕ್ಷನಲ್ NFC ಅನ್ನು ಬೆಂಬಲಿಸುತ್ತದೆ. ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. 3.5mm ಹೆಡ್ಫೋನ್ ಜ್ಯಾಕ್, ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆಗಳು ಇದರಲ್ಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ