Nothing Ear 2: ಗುಣಮಟ್ಟದ ಸಂಗೀತ ಅನುಭವಕ್ಕಾಗಿ ನಥಿಂಗ್ ಇಯರ್​ 2

ಸ್ಟೈಲಿಶ್ ಆಗಿ ಪ್ರೀಮಿಯಂ ಸೌಂಡ್ ಅನುಭವ ಪಡೆಯಲು ನಥಿಂಗ್ ಹೊಸ ಇಯರ್​ಬಡ್ಸ್ ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸೌಂಡ್ ಕ್ವಾಲಿಟಿಯ ಅನುಭವವನ್ನು ಬಳಕೆದಾರರಿಗೆ ಒದಗಿಸುವುದು ನಥಿಂಗ್ ಕಂಪನಿಯ ಗುರಿಯಾಗಿದೆ. ಜತೆಗೆ, ಪ್ರೀಮಿಯಂ ಸ್ಮಾರ್ಟ್​ಫೋನ್ ವಿಭಾಗದಂತೆಯೇ, ಪ್ರೀಮಿಯಂ ಇಯರ್​ಬಡ್ಸ್ ವೈಶಿಷ್ಟ್ಯವನ್ನು ನಥಿಂಗ್ ಗ್ರಾಹಕರಿಗೆ ಒದಗಿಸಲಿದೆ ಎಂದು ಕಂಪನಿ ಹೇಳಿದೆ.

Nothing Ear 2: ಗುಣಮಟ್ಟದ ಸಂಗೀತ ಅನುಭವಕ್ಕಾಗಿ ನಥಿಂಗ್ ಇಯರ್​ 2
ನಥಿಂಗ್ ಇಯರ್​ 2
Follow us
|

Updated on:Mar 23, 2023 | 6:00 PM

ಇಯರ್​ಫೋನ್ ಮತ್ತು ಏರ್​ಪಾಡ್ಸ್ ವಿಭಾಗದಲ್ಲಿ ಪ್ರೀಮಿಯಂ ಆಗಿರುವ ಗ್ಯಾಜೆಟ್​ಗಳ ಬೆಲೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಗುಣಮಟ್ಟ ಬಯಸಿದರೆ, ಅದಕ್ಕೆ ಹೆಚ್ಚು ಬೆಲೆಯನ್ನೂ ತೆರಬೇಕಾಗುತ್ತದೆ. ಇದೇ ಪರಿಕಲ್ಪನೆಯನ್ನಿಟ್ಟುಕೊಂಡು ಒನ್​ಪ್ಲಸ್ ಸಂಸ್ಥಾಪಕರು ಆರಂಭಿಸಿದ ನಥಿಂಗ್ ಬ್ರ್ಯಾಂಡ್, ಹೊಸ ನಥಿಂಗ್ ಇಯರ್ 2(Nothing Ear 2) ಅನ್ನು ಪರಿಚಯಿಸಿದೆ. ನಥಿಂಗ್ ಇಯರ್ 2 ಇಯರ್​ಪಾಡ್ಸ್ ಬೆಲೆ, ಲಭ್ಯತೆ ವಿವರ ಇಲ್ಲಿದೆ.

ನಥಿಂಗ್ ಇಯರ್​ 2 ಹೊಸ ಬಡ್ಸ್​

ಆ್ಯಂಡ್ರಾಯ್ಡ್ ಮಾರುಕಟ್ಟೆಯ ಪ್ರೀಮಿಯಂ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಒನ್​ಪ್ಲಸ್(OnePlus) ಸಹಸ್ಥಾಪಕ ಕಾರ್ಲ್ ಪೈ ರೂಪಿಸಿರುವ ನಥಿಂಗ್ ಬ್ರ್ಯಾಂಡ್, ಭಾರತದಲ್ಲಿ ಎರಡನೇ ಇಯರ್​ಬಡ್ಸ್ ಮಾದರಿ ಪರಿಚಯಿಸಿದೆ. ಗ್ಯಾಜೆಟ್ ಮಾರುಕಟ್ಟೆಗೆ ನಥಿಂಗ್ ಇಯರ್​ 2 ಬಿಡುಗಡೆಯಾಗಿದ್ದು, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಆಯ್ಕೆಯನ್ನು ಹೊಂದಿದೆ. ಅಲ್ಲದೆ, ಗುಣಮಟ್ಟದ, ಸ್ಪಷ್ಟ ಧ್ವನಿಯನ್ನು ಬಳಕೆದಾರರಿಗೆ ಒದಗಿಸುವುದು ನಮ್ಮ ಗುರಿ ಎಂದು ಕಂಪನಿ ಸಿಇಒ ಕಾರ್ಲ್ ಪೈ ಹೇಳಿದ್ದಾರೆ.

ನಥಿಂಗ್ ಇಯರ್​ 2 ಬೆಲೆ ಮತ್ತು ಲಭ್ಯತೆ

ನಥಿಂಗ್ ಇಯರ್​ 2 ಬೆಲೆ ದೇಶದಲ್ಲಿ ₹9,999 ಇದೆ. ಫ್ಲಿಪ್​ಕಾರ್ಟ್, ಮಿಂತ್ರಾ ಮತ್ತು ಆನ್​ಲೈನ್ ಮೂಲಕ ಲಭ್ಯವಿದ್ದು, ಮಾರ್ಚ್ 28ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ನಥಿಂಗ್ ಹೇಳಿದೆ. ನಥಿಂಗ್ ಕಂಪನಿ ಈಗಾಗಲೇ ಭಾರತದಲ್ಲಿ ಎರಡು ಸ್ಮಾರ್ಟ್​ಫೋನ್ ಮಾದರಿಗಳನ್ನು ಪರಿಚಯಿಸಿತ್ತು. ಅದಾದ ನಂತರ, ನಥಿಂಗ್ ಇಯರ್​ಬಡ್ಸ್ ವಿಭಾಗದಲ್ಲಿ ಎರಡನೇ ಮಾದರಿ ಬಿಡುಗಡೆಯಾಗಿದೆ. ವಿನ್ಯಾಸದಲ್ಲಿ ಈ ಬಾರಿಯೂ ಕಂಪನಿ ವಿಶೇಷತೆಯನ್ನು ಕಾಯ್ದುಕೊಂಡಿದೆ.

ನಥಿಂಗ್ ಇಯರ್​ 2 ವಿಶೇಷತೆ

IP54 ವಾಟರ್ ಮತ್ತು ಡಸ್ಟ್ ರೇಟಿಂಗ್ ಹೊಂದಿರುವ ನಥಿಂಗ್ ಇಯರ್ 2 ನಲ್ಲಿ 33mAh ಬ್ಯಾಟರಿ ಸಾಮರ್ಥ್ಯದ ಇಯರ್​ಬಡ್ಸ್ ಇದ್ದು, 485mAh ಬ್ಯಾಟರಿ ಕೇಸ್ ಹೊಂದಿದೆ. ಅಲ್ಲದೆ, USB Type-C ಪೋರ್ಟ್, 2.5W ವೈರ್​ಲೆಸ್ ಚಾರ್ಜಿಂಗ್ ಪೋರ್ಟ್ ಇದ್ದು, ಕಡಿಮೆ ಅವಧಿಯಲ್ಲೇ ಚಾರ್ಜ್ ಆಗುತ್ತದೆ. Android ಸ್ಮಾರ್ಟ್​ಫೋನ್ ಮತ್ತು ಆ್ಯಪಲ್ ಐಫೋನ್ ಜತೆ ನಥಿಂಗ್ ಇಯರ್ 2 ಬಳಸಬಹುದು ಎಂದು ಕಂಪನಿ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Thu, 23 March 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ